ಹೈಕ ಮಂಡಳಿ ಅನುದಾನ ಸಮರ್ಪಕ ಬಳಕೆಯಲ್ಲಿ ಕೊಪ್ಪಳ ಜಿಲ್ಲೆ ಮುಂದು : ಪಿ.ಸುನೀಲ್ ಕುಮಾರ್

ಕೊಪ್ಪಳ ಮೇ. :ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡಲಾಗುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೊಪ್ಪಳ ಜಿಲ್ಲೆಯು ಹೈ-ಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಮುಂದಿದ್ದು ಗಣನೀಯ ಆರ್ಥಿಕ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಆರ್ಥಿಕ ಪ್ರಗತಿ; ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ವಾರ್ಷಿಕ ಹಂಚಿಕೆಯಾದ ಅನುದಾನ 109.43, ಆರಂಭಿಕ ಶಿಲ್ಕು 4(ಎ) 31.49, ಹಿಂದಿನ ವರ್ಷದ ಅನುದಾನ ಸ್ವಿÃಕೃತಿ 4(ಬಿ) 33.17, ಒಟ್ಟು 4 (ಸಿ) 64.66 ಸೇರಿದಂತೆ ಒಟ್ಟು ಅನುದಾನ (3+4) 174.09 ರಲ್ಲಿ ಆರ್ಥಿಕ ಗುರಿ ಸಂಚಿಕೆ ಗುರಿ 159.61, ಪ್ರಸ್ತುತ ಮಾಹೆಯ ಗುರಿ 14.51 ಸೇರಿ ಒಟ್ಟು (6+7) 174.12 ಆರ್ಥಿಕ ಗುರಿಹೊಂದಿದ್ದು, ಹಿಂದಿನ ತಿಂಗಳವರೆಗಿನ ವೆಚ್ಚ 128.45, ಪ್ರಸ್ತುತ ಮಾಹೆಯ ವೆಚ್ಚ 29.09 ಸೇರೆ ಒಟ್ಟು 157.54 ಆರ್ಥಿಕ ಸಾಧನೆಮಾಡಿ ಶೇ.90.49 ರಷ್ಟು ಪ್ರಗತಿ ಸಾಧಿಸಿದೆ. ಬಳ್ಳಾರಿ ಜಿಲ್ಲೆ ಶೇ.60.37, ಬೀದರ ಶೇ.75.10, ಕಲಬುರಗಿ ಶೇ.78.63, ರಾಯಚೂರು ಶೇ.67.11 ಹಾಗೂ ಯಾದಗಿರಿ ಜಿಲ್ಲೆ ಶೇ.86.14 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ.
ಭೌತಿಕ ಪ್ರಗತಿ;
ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಾರ್ಚ್ 2019ರ ವಾರ್ಷಿಕ ಕೊಪ್ಪಳ ಜಿಲ್ಲೆಯು ಒಟ್ಟು ಭೌತಿಕ ಗುರಿ 822 ಹೊಂದಿ, ಸಾಧನೆ 503 ಸೇರಿ ಶೇ.63 ರಷ್ಟಯ ಸಾಧನೆಮಾಡಿದೆ. ಬಳ್ಳಾರಿ ಜಿಲ್ಲೆ ಶೇ.62, ಬೀದರ ಶೇ.49, ಕಲಬುರಗಿ ಶೇ.52, ರಾಯಚೂರು ಶೇ.51 ಹಾಗೂ ಯಾದಗಿರಿ ಜಿಲ್ಲೆಯ ಶೇ.57 ರಷ್ಟು ಭೌತಿಕ ಪ್ರಗತಿ ಸಾಧಿನೆಯಾಗಿದೆ.
ಹೈದರಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯು ಹೈದರಾಬಾದ ಕರ್ನಾಟಕ ಪ್ರದೇಶದ ಎಲ್ಲಾ ಜಿಲ್ಲೆಗಳ ಪೈಕಿ ಪ್ರಪ್ರಥಮ ಸ್ಥಾನದಲ್ಲಿದ್ದು ಗಣನೀಯವಾಗಿ ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Please follow and like us:
error