ಹೆಚ್.ಐ.ವಿ ಮತ್ತು ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನ

ಕೊಪ್ಪಳ ಜಿಲ್ಲೆಯಲ್ಲಿ  : ಡಾ. ಲಿಂಗರಾಜ್
ಕೊಪ್ಪಳ ನ.  : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ್ ಅವರು ಹೇಳಿದರು.
ಇಂದು (ನ.29) ನಗರದ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿರುವ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕುರಿತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡಿಸೆಂಬರ್. 01 ರಂದು “ವಿಶ್ವ ಏಡ್ಸ್ ದಿನ” ಆಚರಣೆ ಅಂಗವಾಗಿ ಈ ವರ್ಷ “ಸಮುದಾಯಗಳು ವ್ಯತ್ಯಾಸವನ್ನುಂಟು ಮಾಡುತ್ತವೆ” ಎಂಬ ಘೋಷವಾಕ್ಯದಡಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು ಇವರ ಮಾರ್ಗದರ್ಶನದಂತೆ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕವು ಆರೋಗ್ಯ ಮತ್ತು ಇತರೆ ಇಲಾಖೆಗಳ ಸಿಬ್ಬಂದಿಗೆ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ತರಬೇತಿಗಳನ್ನು ಆಯೋಜಿಸುತ್ತದೆ. ವಿವಿಧ ಇಲಾಖೆಗಳೊಂದಿಗೆ ಸಂಯೋಜನೆಯನ್ನು ಏರ್ಪಡಿಸುತ್ತದೆ ಹಾಗೂ ಜಿಲ್ಲೆಯಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಕುರಿತ ಕಾರ್ಯಕ್ರಮದ ನಡೆಯಲಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಮಹೇಶ ಮಾತನಾಡಿ, ಸರ್ಕಾರಿ ಸಂಸ್ಥೆಗಳಿAದ ಹೆಚ್.ಐ.ವಿ ಮತ್ತು ಏಡ್ಸ್ ನಿಯಂತ್ರಣ ಕಾರ್ಯಕ್ರಮ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕವು ಸೆಷ್ಟೆಂಬರ್.01-2008 ರಂದು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದು ರಾಷ್ಟಿçÃಯ ಏಡ್ಸ್ ನಿಯಂತ್ರಣ ಸಂಸ್ಥೆಯ ಒಂದು ಜಿಲ್ಲಾ ಮಟ್ಟದ ಘಟಕವಾಗಿದೆ. ರಾಷ್ಟಿçÃಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಉದ್ದೇಶಗಳನ್ನು ಈಡೇರಿಸಲು ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು ಇವರ ಮಾರ್ಗದರ್ಶನದಂತೆ ಆರೋಗ್ಯ ಮತ್ತು ಇತರೆ ಇಲಾಖೆಗಳ ಸಿಬ್ಬಂದಿಗೆ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ತರಬೇತಿಗಳನ್ನು ಆಯೋಜಿಸಲಾಗುವುದು
ಮಾಹಿತಿ, ಶಿಕ್ಷಣ ಮತ್ತು ಸಂವಹನ ;
ಬೀದಿ ನಾಟಕ:- ಜಿಲ್ಲೆಯ ನಾಲ್ಕೂ ತಾಲ್ಲೂಕುಗಳ ಹೆಚ್ಚು ಪಾಸಿಟಿವ್ ಮತ್ತು ಹೆಚ್.ಆರ್.ಜಿ, ಇರುವ ನಗರ ಮತ್ತು ಗ್ರಾಮಗಳಲ್ಲಿ ಬೀದಿ ನಾಟಕ, ಗೀ-ಗೀಪದ, ಶ್ರೀಕೃಷ್ಣ ಪಾರಿಜಾತ ಹಾಗೂ ಡೊಳ್ಳು ಕುಣಿತ ಕಲಾ ಮತ್ತು ಜಾನಪದ ತಂಡಗಳಿAದ ಹೆಚ್.ಐ.ವಿ ಮತ್ತು ಏಡ್ಸ್ ಹಾಗೂ ಕಳಂಕ ಮತ್ತು ತಾರತಮ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅಭಿಯಾನ (ಏ.ಇ.ಪಿ);
ಹದಿಹರೆಯದ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರೋಗ್ಯಕರ ನಡವಳಿಕೆ ಹಾಗೂ ಜೀವನ ಕ್ರಮಗಳ ಬಗ್ಗೆ ಸರಿಯಾದ ಮತ್ತು ಸಮರ್ಪಕ ಮಾಹಿತಿಯನ್ನು ನೀಡಿ ಅವರಲ್ಲಿ ಆರೋಗ್ಯಕರ ಜೀವನ ವಿಧಾನಗಳ ಬಗ್ಗೆ ಜಾಗೃತಿ ನೀಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದ್ದು, ಕೊಪ್ಪಳ ಜಿಲ್ಲಾದ್ಯಂತ 2018-19 ನೇ ಸಾಲಿನಲ್ಲಿ 180 (ಸರಕಾರಿ/ಸರಕಾರೇತರ) ಪ್ರೌಢಶಾಲೆಗಳಲ್ಲಿ ಒಟ್ಟು 12,470 ವಿದ್ಯಾರ್ಥಿಗಳು, 11,131 ವಿದ್ಯಾರ್ಥಿನಿಯರಿಗೆ ಮತ್ತು  15 ಪದವಿ-ಪೂರ್ವ ಕಾಲೇಜುಗಳಲ್ಲಿ  ಒಟ್ಟು 1,398 ವಿದ್ಯಾರ್ಥಿಗಳು, 797 ವಿದ್ಯಾರ್ಥಿನಿಯರಿಗೆ ಆರೋಗ್ಯ ಅರಿವು ಕಾರ್ಯಕ್ರಮವನ್ನು ನೀಡಲಾಗಿದೆ.
ರೆಡ್‌ರಿಬ್ಬನ್
ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಕ್ತದಾನಕ್ಕೆ ಪ್ರೇರಣೆ ನೀಡುವ ಘಟಕಗಳೆ ರೆಡ್ ರಿಬ್ಬನ್ ಕ್ಲಬ್‌ಗಳು. ಹೆಚ್.ಐ.ವಿ ಮತ್ತು ಏಡ್ಸ್ ತಡೆ, ಆರೈಕೆ, ಬೆಂಬಲ ಹಾಗೂ ಚಿಕಿತ್ಸೆ ಮತ್ತು ಸೇವೆ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿಯನ್ನು  ಯುವಕರಿಗೆ ಈ ರೆಡ್ ರಿಬ್ಬನ್ ಕ್ಲಬ್ ಮೂಲಕ ನೀಡುವುದು.
ರೆಡ್ ರಿಬ್ಬನ್ ಕ್ಲಬ್ ಮೂಲಕ ನಡೆಸುವ ಚಟುವಟಿಕೆಗಳು;
ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಏರ್ಪಡಿಸುವುದು. ವಿದ್ಯಾರ್ಥಿಗಳಿಗೆ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ತರಬೇತಿ ನೀಡುವುದು.  ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು (ಪ್ರಬಂಧ ಸ್ಪರ್ಧೆ, ಪೋಸ್ಟರ್ ಮೇಕಿಂಗ್, ಕಿರು ನಾಟಕ, ಚರ್ಚಾಸ್ಪರ್ಧೆ, ಇತ್ಯಾದಿ). ಕಾಲೇಜಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸುವುದು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು.
ಮುಖ್ಯವಾಹಿನಿ ತರಬೇತಿ;
ಹೆಚ್.ಐ.ವಿ ಸೋಂಕನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಸೊನ್ನೆಗೆ ತರುವ ಪ್ರಯತ್ನಗಳನ್ನು ಮಾಡುತ್ತಿದೆ. ಆದ್ದರಿಂದ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಅಲ್ಲಿರುವಅಧಿಕಾರಿಗಳು ಮತ್ತು  ಸಿಬ್ಬಂಧಿಗಳಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ, ವಲಸೆ ಕಾರ್ಮಿಕರಿಗೆ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಸುಮಾರು ಒಂದು ಘಂಟೆಗಳ ಕಾಲ ಉಚಿತ ತರಬೇತಿ ನೀಡುತ್ತಿದ್ದು, ತರಬೇತಿಗಳಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಮೂಲ ಮಾಹಿತಿ, ಕಳಂಕ ತಾರತಮ್ಯ, ಜಿಲ್ಲೆಯಲ್ಲಿರುವ ಹೆಚ್.ಐ.ವಿ. ಸ್ಥಿತಿಗತಿ ಹಾಗೂ ಹೆಚ್.ಐ.ವಿ. ಸೋಂಕಿತರಿಗೆ ಮತ್ತು ಬಾಧಿತರಿಗೆ ಇರುವ ಸಾಮಾಜಿಕ ಸವಲತ್ತುಗಳ ವಿಚಾರವಾಗಿ ತರಬೇತಿಯನ್ನು ನೀಡಿ ಅದರಿಂದ ಇನ್ನೂಳಿದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಮತ್ತು ಸ್ನೇಹಿತರು ಹಾಗೂ ಅವರ ಕುಟುಂಬದವರಿಗೆ ಈ ವಿಚಾರವನ್ನು ತಿಳಿಸಲು ಅನುವು ಆಗುವಂತೆ ತರಬೇತಿಯನ್ನು ನೀಡಲಾಗುತ್ತಿದೆ. ಕಳೆದ 20118-19 ನೇ ಸಾಲಿನಲ್ಲಿ ಸ್ವ-ಸಹಾಯ ಸಂಘಗಳು, ಹೆಚ್.ಆರ್.ಜಿ., ಆಟೋ ಡ್ರೆöÊರ‍್ಸ್, ಟ್ರಕ್ರ‍್ಸ್(ವಾಹನಚಾಲಕರು), ಮೈಗ್ರೇಂಟ್ಸ್ (ವಲಸಿಗರು), ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಒಟ್ಟು 101 ಕಾರ್ಯಕ್ರಮಗಳನ್ನು ನೀಡಲಾಗಿರುತ್ತದೆ.
ಹೆಚ್‌ಐವಿ/ಏಡ್ಸ್ ನಿಯಂತ್ರಣ ಕುರಿತು ಮನೆ ಮನೆ ಜನ ಜಾಗೃತಿ ಅಂದೋಲನ 2019 ರ ಅಭಿಯಾನ;
ಪ್ರಸಕ್ತ ವರ್ಷದಲ್ಲಿ  ಹೆಚ್‌ಐವಿ ಮತ್ತು ಏಡ್ಸ್ ನಿಯಂತ್ರಣ ಕುರಿತು ಮನೆ ಮನೆ ಜನ ಜಾಗೃತಿ ಅಂದೋಲನ -2019 ರ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಅಭಿಯಾನದಲ್ಲಿ ಒಟ್ಟು 1,329 ಆಶಾ ಕಾರ್ಯಕರ್ತೆಯರು ಭಾಗವಹಿಸಿ,  2,19,915 ಮನೆಗಳ ಭೇಟಿ ನೀಡಿ 8,57,492 ಕುಟುಂಬ ಸದಸ್ಯರುಗಳಲ್ಲಿ  3,26,850 ಪುರುಷ ಹಾಗೂ 3,56,408 ಮಹಿಳೆಯರು (12ವರ್ಷಗಳ ಮೇಲ್ಪಟ್ಟು) ಗಳಿಗೆ ಕರಪತ್ರ ಹಂಚುವುದರ ಮೂಲಕ ಮಾಹಿತಿಯನ್ನು ನೀಡಿರುತ್ತಾರೆ.
ಐ.ಸಿ.ಟಿ.ಸಿ. ಕೇಂದ್ರಗಳು (ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ);
ಕೊಪ್ಪಳ ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 14 ಐ.ಸಿ.ಟಿ.ಸಿ. ಕೇಂದ್ರಗಳಿದ್ದು, ಐ.ಸಿ.ಟಿ.ಸಿ.ಯಲ್ಲಿ ಆಪ್ತಸಮಾಲೋಚಕರು ಕೇಂದ್ರಕ್ಕೆ ಬರುವವರಿಗೆ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಆಪ್ತಸಮಾಲೋಚನೆ ಮತ್ತು ಪ್ರಯೋಗಶಾಲಾ ತಂತ್ರಜ್ಞರ ಮೂಲಕ ಹೆಚ್.ಐ.ವಿ. ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಐ.ಸಿ.ಟಿ.ಸಿ. ಆಪ್ತಸಮಾಲೋಚಕರು ಮತ್ತು ಪ್ರಯೋಗಶಾಲಾ ತಂತ್ರಜ್ಞರು ಪ್ರತಿ ಶನಿವಾರದಂದು ಶಾಲಾ-ಕಾಲೇಜು, ಸಂಘ-ಸAಸ್ಥೆಗಳು, ಢಾಭಾಗಳು ಹಾಗೂ ಮುಂತಾದ ಕಡೆಗಳಲ್ಲಿ ಭೇಟಿ ನೀಡಿ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಮಾಹಿತಿ, ಶಿಕ್ಷಣ ಹಾಗೂ ಸಂವಹನ (ಐ.ಇ.ಸಿ) ನಡೆಸುತ್ತಾರೆ. ಜಿಲ್ಲೆಯ ಒಟ್ಟು 46 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 13 ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ (ಕೊಪ್ಪಳದಲ್ಲಿ 4 ಮತ್ತು ಗಂಗಾವತಿಯಲ್ಲಿ 9) ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಆಪ್ತಸಮಾಲೋಚನೆ ಮತ್ತು ಹೆಚ್.ಐ.ವಿ. ಪರೀಕ್ಷೆಯನ್ನು ಮಾಡಲಾಗುತ್ತದೆ. ಹಾಗೂ ಕೆ.ಪಿ.ಎಮ್ ಕಾಯ್ದೆ ಅಡಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ನರ್ಸಿಂಗ್ ಹೋಮ್ ಮತ್ತು ಪ್ರಯೋಗಶಾಲೆಗಳಲ್ಲಿ ಅಲ್ಲಿಯೇ ಹೆಚ್.ಐ.ವಿ ಪಲ್ಸ್ ಆಪ್ ನಡಿಯಲ್ಲಿ ಹೆಚ್.ಐ.ವಿ ಪರೀಕ್ಷೆ ಮಾಡಿರುವ ಸಂಖ್ಯೆ  ಪಡೆಯಲಾಗುತ್ತಿದೆ.
ಎ.ಆರ್.ಟಿ. ಕೇಂದ್ರಗಳು;
ಕೊಪ್ಪಳದ ಜಿಲ್ಲಾ ಆಸ್ಪತ್ರೆ ಹಾಗೂ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಯಲ್ಲಿ ಎ.ಆರ್.ಟಿ. ಕೇಂದ್ರಗಳು ಇವೆ. ಇಲ್ಲಿ ಹೆಚ್.ಐ.ವಿ ಸೋಂಕಿತರಿಗೆ ಹೆಚ್.ಐ.ವಿ ಮತ್ತು ಏಡ್ಸ್ ತಡೆಗಟ್ಟುವಿಕೆ ಮತ್ತು ಕುಟುಂಬದಲ್ಲಿ ಪಾಲಿಸಬೇಕಾದ ಮುಂಜಾಗ್ರತಾಕ್ರಮಗಳ ಕುರಿತು ಆಪ್ತಸಮಾಲೋಚನೆ, ಆರೋಗ್ಯ ತಪಾಸಣೆ ಹಾಗೂ ಸಿ.ಡಿ-4 ಕಣಗಳ ಪರೀಕ್ಷೆ, ವೈರಲ್ ಲೋಡ್ ಪರೀಕ್ಷೆ, ಎ.ಆರ್.ಟಿ ಔಷಧವನ್ನು ನೀಡಿ ಸೋಂಕಿತರ ಆರೋಗ್ಯ ಮತ್ತು ಜೀವನವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಉಪ ಎ.ಆರ್.ಟಿ. ಕೇಂದ್ರಗಳು;
ಉಪ ಎ.ಆರ್.ಟಿ. ಕೇಂದ್ರಗಳು ಕಾರಟಗಿ, ಯಲಬುರ್ಗಾ ಹಾಗೂ ಕುಷ್ಟಗಿಯಲ್ಲಿ ಉಪ ಎ.ಆರ್.ಟಿ. ಪ್ಲಸ್ ಕೇಂದ್ರಗಳು ಹಾಗೂ ಹಿರೇಸಿಂದೋಗಿ, ಮುನಿರಾಬಾದ್, ಶ್ರೀರಾಮನಗರ, ಕನಕಗಿರಿ, ತಾವರಗೇರಾ, ಮಂಗಳೂರು,   ಹಿರೇವಂಕಲಕುAಟಾ, ಕುಕನೂರು ಹಾಗೂ ಸಂರಕ್ಷ ಎನ್.ಜಿ.ಓ.ಗಳಲ್ಲಿ ಉಪ ಎ.ಆರ್.ಟಿ. ಕೇಂದ್ರಗಳಿರುತ್ತವೆ. ಇಲ್ಲಿ ಹೆಚ್.ಐ.ವಿ ಮತ್ತು ಏಡ್ಸ್ ಹರಡುವ, ತಡೆಗಟ್ಟುವಿಕೆ ಮತ್ತು ಕುಟುಂಬದಲ್ಲಿ ಪಾಲಿಸಬೇಕಾದ ಮುಂಜಾಗ್ರತಾಕ್ರಮಗಳ ಕುರಿತು ಆಪ್ತಸಮಾಲೋಚನೆ ಹಾಗೂ ಎ.ಆರ್.ಟಿ. ಮಾತ್ರೆಗಳನ್ನು ನೀಡಲಾಗುತ್ತದೆ.
ಡಿ.ಎಸ್.ಆರ್.ಸಿ. ಕ್ಲಿನಿಕ್;
ಕೊಪ್ಪಳದ ಜಿಲ್ಲಾ ಆಸ್ಪತ್ರೆ ಹಾಗೂ ಗಂಗಾವತಿಯ ಉಪ ವಿಭಾಗ ಆಸ್ಪತ್ರೆಗಳಲ್ಲಿ ಡಿ.ಎಸ್.ಆರ್.ಸಿ. ಕೇಂದ್ರಗಳು ಇವೆ.  ಕೇಂದ್ರಗಳಲ್ಲಿ ಲೈಂಗಿಕ ಖಾಯಿಲೆಗಳ ಬಗ್ಗೆ ಆಪ್ತಸಮಾಲೋಚನೆ ಮಾಡಲಾಗುವುದು. ಪ್ರಾರಂಭಿಕ ಹಂತದಲ್ಲಿ ಲೈಂಗಿಕ ಕಾಯಿಲೆಗಳನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ ಮುಂದೆ ಬರಬಹುದಾದ ಹೆಚ್.ಐ.ವಿ. ಸೋಂಕನ್ನು ತಡೆಗಟ್ಟಲು ಇವು ಕಾರ್ಯನಿರ್ವಹಿಸುತ್ತವೆ.
ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿAದ ಹೆಚ್.ಐ.ವಿ ಮತ್ತು ಏಡ್ಸ್ ನಿಯಂತ್ರಣ ಕಾರ್ಯಕ್ರಮ
ಟಾರ್ಗೆಟ್ ಇಂಟರ್‌ವೆನ್‌ಷನ್ (ಟಿ.ಐ.) ಹಾಗೂ ಇತರೆ ಯೋಜನೆಗಳು;
ಟಿ.ಐ-ಎಫ್.ಎಸ್.ಡಬ್ಲೂö್ಯ : ಕೊಪ್ಪಳ ಜಿಲ್ಲೆಯಲ್ಲಿ ಸ್ನೇಹಾ ಮಹಿಳಾ ಸಂಘವು (ಸಮುದಾಯ ಆಧಾರಿತ ಸಂಘಟನೆ) ಹೆಚ್.ಐ.ವಿ ಮತ್ತು ಏಡ್ಸ್ ಸೋಂಕಿಗೆ ಒಳಗಾಗುವ, ಹೆಚ್ಚು ಅಪಾಯದ ಅಂಚಿನಲ್ಲಿರುವ ಮತ್ತು ಸಮಾಜದಿಂದ ಉಪೇಕ್ಷಿತವಾಗಿರುವ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರನ್ನು ಗುರುತಿಸಿ ಇವರಲ್ಲಿ ಹೆಚ್.ಐ.ವಿ. ಮತ್ತು ಏಡ್ಸ್ ತಡೆಗಟ್ಟಲು ಎಫ್.ಎಸ್.ಡಬ್ಲೂö್ಯ-ಟಿ.ಐ.ನಲ್ಲಿ  ಕಾರ್ಯನಿರ್ವಹಿಸುತ್ತಿದೆ. ಮತ್ತು ಸರಕಾರದಿಂದ ಸಿಗುವಂತಹ ಸಾಮಾಜಿಕ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡುತ್ತವೆ.
ಟಿ.ಐ-ಎಂ.ಎಸ್.ಎA : ಕೊಪ್ಪಳ ಜಿಲ್ಲೆಯಲ್ಲಿ ಹೊಂಗಿರಣ ಸಮಾಜ ಸೇವಾ ಸಂಸ್ಥೆಯು (ಸಮುದಾಯ ಆಧಾರಿತ ಸಂಘಟನೆ) ಹೆಚ್.ಐ.ವಿ ಮತ್ತು ಏಡ್ಸ್ ಸೋಂಕಿಗೆ ಒಳಗಾಗುವ, ಹೆಚ್ಚು ಅಪಾಯದ ಅಂಚಿನಲ್ಲಿರುವ ಮತ್ತು ಸಮಾಜದಿಂದ ಉಪೇಕ್ಷಿತವಾಗಿರುವ ಪುರುಷ ಸಲಿಂಗಕಾಮಿಗಳನ್ನು ಗುರುತಿಸಿ ಇವರಲ್ಲಿ ಹೆಚ್.ಐ.ವಿ./ ಏಡ್ಸ್ ತಡೆಗಟ್ಟಲು ಎಂ.ಎಸ್.ಎA.-ಟಿ.ಐ. ನಲ್ಲಿ  ಕಾರ್ಯನಿರ್ವಹಿಸುತ್ತಿದೆ. ಮತ್ತು ಸರಕಾರದಿಂದ ಸಿಗುವಂತಹ ಸಾಮಾಜಿಕ ಸೇವಾ ಸೌಲಭ್ಯಗಳನ್ನು ಒದಗಿಸಿಕೊಡುತ್ತವೆ.
ಟಿ.ಐ-ಮೈಗ್ರಂಟ್ಸ್ : ಕೊಪ್ಪಳ ಜಿಲ್ಲೆಯಲ್ಲಿ ಚೈತನ್ಯ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಘವು ಹೆಚ್.ಐ.ವಿ ಮತ್ತು ಏಡ್ಸ್ ಸೋಂಕಿಗೆ ಒಳಗಾಗುವ, ಹೆಚ್ಚು ಅಪಾಯದ ಅಂಚಿನಲ್ಲಿರುವ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ವಲಸೆ ಬರುವವರನ್ನು ಗುರುತಿಸಿ ಇವರಿಗೆ ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ, ಪರೀಕ್ಷೆ, ತಡೆಗಟ್ಟುವ ವಿಧಾನಗಳ ಕುರಿತು ಮೈಗ್ರಂಟ್ಸ್-ಟಿ.ಐ. ನಲ್ಲಿ  ಕಾರ್ಯನಿರ್ವಹಿಸುತ್ತಿದೆ.
ಟಿ.ಐ-ಟ್ರಕ್ರ‍್ಸ್ : ಕೊಪ್ಪಳ ಜಿಲ್ಲೆಯಲ್ಲಿ ಚೈತನ್ಯ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಘವು ಹೆಚ್.ಐ.ವಿ ಮತ್ತು ಏಡ್ಸ್ ಸೋಂಕಿಗೆ ಹೆಚ್ಚು ಅಪಾಯದ ಅಂಚಿನಲ್ಲಿರುವ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ವಲಸೆ ಬರುವವ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳಿಗೆ ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ, ಪರೀಕ್ಷೆ, ತಡೆಗಟ್ಟುವ ವಿಧಾನಗಳ ಕುರಿತು ಟ್ರಕ್ರ‍್ಸ್ -ಟಿ.ಐ. ನಲ್ಲಿ  ಕಾರ್ಯನಿರ್ವಹಿಸುತ್ತಿದೆ.
ಆರೈಕೆ ಮತ್ತು ಬೆಂಬಲ ಕೇಂದ್ರ (ಸಿ.ಎಸ್.ಸಿ) ಈ ಕೇಂದ್ರವು ಕೊಪ್ಪಳದಲ್ಲಿರುತ್ತದೆ. ಇದನ್ನು ಸಂರಕ್ಷ ಸಂಸ್ಥೆಯು ನಿರ್ವಹಿಸುತ್ತದೆ. ಇಲ್ಲಿ ಹೆಚ್.ಐ.ವಿ. ಸೋಂಕಿತರಿಗೆ ಬರಬಹುದಾದ ಅವಕಾಶವಾದಿ ಸೋಂಕುಗಳನ್ನು ಹಾಗೂ ಎ.ಆರ್.ಟಿ. ಚಿಕಿತ್ಸೆಯ ಅಡ್ಡ ಪರಿಣಾಮಗಳಿಗೆ ಚಿಕಿತ್ಸೆ, ಆಪ್ತಸಮಾಲೋಚನೆ ಮತ್ತು ಎಆರ್.ಟಿ. ತೆಗೆದುಕೊಳ್ಳಲು ಸಹಾಯ ಮಾಡಲಾಗುತ್ತದೆ ಹಾಗೂ ಎ.ಆರ್.ಟಿ. ತೆಗೆದುಕೊಳ್ಳಲು ವಿಫಲರಾದವರನ್ನು ವಾಪಸ್ ಎ.ಆರ್.ಟಿ.ಗೆ ಕರೆತರಲು ಪ್ರಯತ್ನಿಸುತ್ತದೆ.
ಎಲ್ಲಾ ಟಿ.ಐ.ಗಳ ಮುಖ್ಯ ಕಾರ್ಯ ಚಟುವಟಿಕೆಗಳು;
ಹೆಚ್‌ಐವಿ, ಏಡ್ಸ್ ಹಾಗೂ ಲೈಂಗಿಕ ಸೋಂಕುಗಳ ಬಗ್ಗೆ ಅರಿವು ಮೂಡಿಸುವುದು. ಲೈಂಗಿಕ ಸೋಂಕುಗಳ ಚಿಕಿತ್ಸೆಗಾಗಿ ಸರ್ಕಾರದ ಆರೋಗ್ಯ ವ್ಯವಸ್ಥೆಯ ಸಹಯೋಗದೊಡನೆ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದು. ನಿರೋದ್ ವಿತರಿಸುವುದು ಮತ್ತು ಅದನ್ನು ಸರಿಯಾಗಿ ಬಳಸುವ ಬಗ್ಗೆ ಮಾಹಿತಿ ನೀಡುವುದು. ಪ್ರತಿ 3 ತಿಂಗಳಿಗೊಮ್ಮೆ ಲೈಂಗಿಕ ಸೋಂಕಿಗೆ ನಿರಂತರ ತಪಾಸಣೆ ಮತ್ತು ಪ್ರತಿ 6 ತಿಂಗಳಿಗೊಮ್ಮೆ ಹೆಚ್‌ಐವಿ ರಕ್ತಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸುವುದು. ಹೆಚ್‌ಐವಿ ಪಾಸಿಟಿವ್ ಆದ ವ್ಯಕ್ತಿಗಳನ್ನು ಏ.ಆರ್.ಟಿ ಕೇಂದ್ರಕ್ಕೆ ಮುಂದಿನ ಚಿಕಿತ್ಸೆಗಳಿಗಾಗಿ ಸಂಪರ್ಕ ಏರ್ಪಡಿಸುವುದು. ಹೆಚ್‌ಐವಿ ಪಾಸಿಟಿವ್ ಆದ ವ್ಯಕ್ತಿಗಳು, ಅವರ ಕುಟುಂಬದವರು ಮತ್ತು ಮಕ್ಕಳಿಗೆ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ಸಿಗುವಂತೆ ಮಾಡುವುದು.
ಪಿಪಿಪಿ-ಎಫ್‌ಐಸಿಟಿಸಿ;
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಆಯ್ದ 13 ಖಾಸಗಿ ಆಸ್ಪತ್ರೆಗಳ (ಕೊಪ್ಪಳದಲ್ಲಿ 4 ಮತ್ತು ಗಂಗಾವತಿಯಲ್ಲಿ-9 ) ಸಹಯೋಗದೊಂದಿಗೆ ಹೆಚ್.ಐ.ವಿ ಮತ್ತು ಏಡ್ಸ್ ಕುರಿತು ಆಪ್ತಸಮಾಲೋಚನೆ ಮತ್ತು ಹೆಚ್.ಐ.ವಿ. ಪರೀಕ್ಷೆಯನ್ನು ಮಾಡಲಾಗುತ್ತದೆ. ಇವುಗಳನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ,ಮೈಸೂರು ಕೊಪ್ಪಳ ಇವರು ಪಿಪಿ ಟಿ ಸಿ ಟಿ ಇಂಟರವೆನಷನ್ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತದೆ ಅಲ್ಲದೆ ಕೆ ಪಿ ಎಮ್ ಆಕ್ಟ್ ಅಡಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ನರ್ಸಇಂಗ್ ಹೋಮ್ ಮತ್ತು ಪ್ರಯೋಗಶಾಲೆಗಳಲ್ಲಿ ಅಲ್ಲಿಯ ಹೆಚ್ ಐ ವಿ ಪಲ್ಸ್ ಆಪ್ ನಡಿಯಲ್ಲಿ ಹೆಚ್ ಐ ವಿ ಪರೀಕ್ಷೆ ಮಾಡಿರುವ ಸಂಖ್ಯೆ  ಪಡೆಯಲಾಗುತ್ತಿದೆ.
ಐ.ವೈ.ಡಿ. (ಎ.ಹೆಚ್.ಎಫ್.):- ಸಮುದಾಯ ಆದರಿತ ಸೇವೆಗಳು (ಸಿ.ಬಿ.ಎಸ್);
ವಾಹನ ಚಾಲಕರು ,ಅಟೊ ಚಾಲಕರು ಹಾಗೂ ಇತರೆ ಹೆಚ್.ಆರ್.ಜಿ ಇರುವಂತಹ ಗುಂಪುಗಳಿಗೆ ಅರಿವು ಕಾರ್ಯಕ್ರಮ ಹಾಗೂ ಹೆಚ್.ಐ.ವಿ ಮಾಡಲಾಗುತ್ತದೆ. ಇದು ಗಂಗಾವತಿ ಮತ್ತು ಕೊಪ್ಪಳ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತದೆ.ಈ ಕಾರ್ಯಕ್ರಮವನ್ನು ಐ ವಾಯ್ ಡಿ ಹೆಚ್ ಸಂಸ್ಥೆಯವರು  ಕಾರ್ಯಕ್ರಮ ಕೈಗೊಳ್ಳುತ್ತಿದ್ದಾರೆ.
ರಕ್ತ ನಿಧಿ ಕೇಂದ್ರಗಳು;
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಮೂರು ರಕ್ತ ನಿಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ ಒಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೊಪ್ಪಳ ಜಿಲ್ಲಾ ಆಸ್ಪತ್ರೆ ಹಾಗೂ ಎರಡು ಖಾಸಗಿ ರಕ್ತ ನಿಧಿ ಕೇಂದ್ರಗಳು ಗೋಪಿ ರಕ್ತ ನಿಧಿಕೇಂದ್ರ, ಅಂಜನಾದ್ರಿ ರಕ್ತ ನಿಧಿ ಕೇಂದ್ರ, ಗಂಗಾವತಿ ಕಾರ್ಯನಿರ್ವಹಿಸುತ್ತಿವೆ.
ರಕ್ತ ಶೇಕರಣ ಘಟಕಗಳು;
ಜಿಲ್ಲೆಯಲ್ಲಿ ಒಟ್ಟು 6 ರಕ್ತ ಶೇಕರಣಾ ಘಟಕಗಳು ಸ್ಥಾಪಿಸಿದ್ದು, ಉಪ ವಿಭಾಗ ಆಸ್ಪತ್ರೆ ಗಂಗಾವತಿ, ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ, ಸಾರ್ವಜನಿಕ ಆಸ್ಪತ್ರೆ ಕುಷ್ಠಗಿ, ಸಮುದಾಯ ಆರೋಗ್ಯ ಕೇಂದ್ರ ಕಾರಟಗಿ, ಸಮುದಾಯ ಆರೋಗ್ಯ ಕೇಂದ್ರ ಕುಕನೂರು, ಸಮುದಾಯ ಆರೋಗ್ಯ ಕೇಂದ್ರ ಹೀರೆಸಿಂದೋಗಿ ಇವುಗಳಲ್ಲಿ ಸ್ಥಾಪಿಸಿದ್ದು ಅವುಗಳಲ್ಲಿ  ಉಪ ವಿಭಾಗ ಆಸ್ಪತ್ರೆ ಗಂಗಾವತಿ ಹಾಗೂ ಸಾರ್ವಜನಿಕ ಆಸ್ಪತ್ರೆ ಕುಷ್ಟಗಿ, ಈ ಆಸ್ಪತ್ರೆಗಳು ಮಾತ್ರ  ಕಾರ್ಯನಿರ್ವಹಿಸುತ್ತಿವೆ ಎಂದರು.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕ ಮಾಲತೇಶ, ಪರಿವೀಕ್ಷಣಾ ಮೇಲ್ವಿಚಾರಕ ರವಿ ಎಸ್. ಪತ್ತಾರ, ಆಡಳಿತ ಸಹಾಯಕಿ ರಾಘವೇಣಿ ಇದೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error