ಹೆಚ್ಚುತ್ತಿರುವ ಶಿಶುಮರಣ: ಜಿಲ್ಲಾ ಆಸ್ಪತ್ರೆಗೆ ಸಂಸದ ಸಂಗಣ್ಣ ಕರಡಿ ಭೇಟಿ


ಕೊಪ್ಪಳ: ಜಿಲ್ಲೆಯಲ್ಲಿ ನಡೆಯುತ್ತಿರುವ ಶಿಶುಗಳ ಮರಣ ಕುರಿತು ವಸ್ಥು ಸ್ಥಿತಿ ತಿಳಿಯಲು ಸಂಸದ ಸಂಗಣ್ಣ ಕರಡಿ ಸಂಸದ ಸಂಗಣ್ಣ ಕರಡಿ ಶನಿವಾರ ನಗರದ ಜಿಲ್ಲಾ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆ ವೆದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ರಾಜ್ಯಾದ್ಯಂತ ಹೆಚ್ಚುತ್ತಿರುವ ಶಿಶುಮರಣ ಕುರಿತು ಸತ್ಯಾಸತ್ಯತೆ ಅರಿಯಲು ಭಾರತೀಯ ಜನತಾ ಪಕ್ಷದ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ೧೨ ಜನರನ್ನೊಳಗೊಂಡ ಸತ್ಯ ಶೊಧನಾ ತಂಡವನ್ನು ರಚಿಸಿದ್ದಾರೆ. ಈ ತಂಡವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ತಜ್ಞ ವೈಧ್ಯರನ್ನು ಸಂಪರ್ಕಿಸಿ ನವಜಾತ ಶಿಶುಗಳ ಮರಣಕ್ಕೆ ಸೂಕ್ತ ಕಾರಣ ಹುಡುಕುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ೪ ತಿಂಗಳಲ್ಲಿ ೧೫೭ ಶಿಶುಮರಣ ಹೊಂದಿವೆ. ಇದರಲ್ಲಿ ೪೨ ಶಿಶುಗಳು ನಗರದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಹಸುನೀಗಿವೆ. ತಿಂಗಳಿಗೆ ಸರಾಸರಿ ೧೪ ನವಜಾತ ಶಿಶುಗಳು ಮರಣಹೊಂದುತ್ತಿದ್ದು ಜನರಲ್ಲಿ ಆತಂಕ ಉಂಟಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ವಿಶೇಷ ತೀವ್ರ ನಿಘಾ ಘಟಕವಿದ್ದರೂ ಮಕ್ಕಳ ಮರಣ ಸಂಖ್ಯೆ ಹೆಚ್ಚುತ್ತಿದೆ. ಇದು ಜಿಲ್ಲಾ ಆರೋಗ್ಯ ಇಲಾಖೆಯ ಅವ್ಯವಸ್ಥೆಗೆ ಕೈ ಗನ್ನಡಿಯಾಗಿದೆ. ಈ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ದಾನರಡ್ಡಿ, ಡಿಹೆಚ್‌ಓ ಡಾ. ರಾಮಕೃಷ್ಣ, ಕೀಮ್ಸ್ ನಿರ್ದೇಶಕ ಡಾ. ಶಂಕರ ಮಲಪರೆ, ಡಾ. ಅಲಕಾನಂದ ಮಳಗಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿದರು. ಚರ್ಚೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಶಿಶು ಮರಣಗಳಿಗೆ ಅಪೌಷ್ಠಿಕತೆ, ಅವಧಿಗೆ ಮುನ್ನ ಹೆರಿಗೆ, ರಕ್ತ ಹೀನತೆ ಹೆರಿಗೆ ಅಂತರದಲ್ಲಿ ವ್ಯತ್ಯಾಸ ವಿಲ್ಲದಿರುವುದಕ್ಕೆ ಶಿಶುಮರಣಗಳಾಗುತ್ತಿವೆ ಎಂದು ಅಧಿಕಾರಿಗಳು ಸಂಸದರೆದುರು ಹೇಳಿದರು.
ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಸಂಸದರು, ಶಿಶುಮರಣಕ್ಕೆ ಇಲ್ಲಸಲ್ಲದ ಕಾರಣ ಹೇಳಬೇಡಿ, ಕಳೆದ ಹಲವುವರ್ಷಗಳಿಂದ ಜಿಲ್ಲೆಯಲ್ಲಿ ಅಪೌಷ್ಠಿಕತೆ ತಾಂಡವವಾಡುತ್ತಿದೆ. ಇದಕ್ಕೆ ನಿಮ್ಮ ಇಲಾಖೆ ಕೈಗೊಂಡಿರುವ ಕಾರ್ಯಗಳೇನು? ಜಿಲ್ಲಾ ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ನಿಮ್ಮ ವೈಪಲ್ಯಗಳನ್ನು ಮುಚ್ಚಿಹಾಕಲು ವಿನಾಕಾರಣ ನೆಪ ಹೇಳುವುದನ್ನು ಬಿಟ್ಟು ಶಿಶುಮರಣಕ್ಕೆ ನಿಖರ ವರದಿ ನೀಡಿ ಎಂದು ಸೂಚಿಸಿದರು. ]
ನಂತರ ಶಿಶು ತೀವ್ರ ನಿಘಾ ಘಟಕಕ್ಕೆ ಬೇಟಿ ನೀಡಿ ಮಕ್ಕಳ ಆರೋಗ್ಯ ಮತ್ತು ಆಸ್ಪತ್ರೆಯ ಶುಚಿತ್ವದ ಬಗ್ಗೆ ಪರಿಶಿಲನೆ ನಡೆಸಿದರು. ಹಾಗೇ ಡಯಾಲಿಸಿಸ್ ಘಟಕ್ಕಕೆ ಬೇಟಿ ನೀಡಿ ವೈಧರೊಂದಿಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಮುಖಂಡ ಅಮರೇಶ ಕರಡಿ, ಸಿ.ವಿ ಚಂದ್ರಶೇಖರ, ಡಾ. ಬಸವರಾಜ ಸಜ್ಜನ್, ಡಾ. ಕೆ.ಜಿ ಕುಲಕರ್ಣಿ, ಡಾ. ರಾಂಪೂರ, ರಾಜು ಬಾಕಳೆ, ಸೇರಿದಂತೆ ಇನ್ನಿತರರು ಇದ್ದರು.

Please follow and like us:
error