ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ: ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚನೆ

ಕೊಪ್ಪಳ ಮೇ. ೧೫ : ಕೊಪ್ಪಳ ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಹುಲಿಗೇಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಭಾಗವಹಿಸಲಿದ್ದು ಯಾವುದೇ ಅನಾನುಕೂಲವಾಗದಂತೆ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚನೆ ನೀಡಿದರು.
ಅವರು ಇಂದು (ಮೇ.೧೫ ರಂದು) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಲಿಗೇಮ್ಮ ದೇವಿಯ ಜಾತ್ರಾ ಕಾರ್ಯಕ್ರಮವು ಮೇ.೧೯ ರಿಂದ ಆರಂಭವಾಗಲಿದೆ. ಮೇ.೨೭ ರಂದು ಸಂಜೆ ೦೭-ಗಂಟೆಗೆ ಉತ್ಸವ, ಮೇ.೨೮ ರಂದು ಸಂಜೆ ೦೫.೩೦ಕ್ಕೆ ಮಹಾರಥೋತ್ಸವ ನಡೆಯಲಿದೆ. ಮೇ.೨೯ ರಂದು ಬಾಳಿದಂಡಿಗೆ ಹಾಗೂ ಮೇ.೩೦ ರಂದು ಪಾಯಸ ಅಗ್ನಿಕುಂಡ ಹಾಗೂ ಮೇ.೩೧ ರಂದು ಬೆಳಿಗ್ಗೆ ೦೬.೩೦ಕ್ಕೆ ಅಗ್ನಿಕುಂಡ ನಡೆಯಲಿದೆ. ಜೂನ್ ೧೮ ರಂದು ರಾತ್ರಿ ೮ ಗಂಟೆಗೆ ಶ್ರೀದೇವಿಯವರ ಕಂಕಣ ವಿಸರ್ಜನೆ ಮಾಡುವ ಮೂಲಕ ಜಾತ್ರಾ ಕಾರ್ಯಕ್ರಮ ಸಮಾರೊಪನಗೊಳ್ಳಲಿದೆ.
ಜಾತ್ರೆಗೆ ಹೊರರಾಜ್ಯ ಸೇರಿದಂತೆ ಅಕ್ಕ,ಪಕ್ಕದ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುವುದರಿಂದ ಜನರಿಗೆ ಕುಡಿಯುವ ನೀರು ರಾತ್ರಿ ವಿದ್ಯುತ್ ದೀಪಾಲಂಕಾರ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಬೇಸಿಗೆಯಾಗಿರುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಸೂಚಸಿ ಪೌರಕಾರ್ಮಿಕರು, ಸ್ವಯಂ ಸೇವಕರ ಬಳಕೆ ಹಾಗೂ ದೇವಸ್ಥಾನ ಸಮಿತಿ ಹಾಗೂ ಗ್ರಾಮ ಪಂಚಾಯತಿಯಿಂದಲೆ ಅಗತ್ಯ ಕ್ರಮಕ್ಕೆ ಸಿದ್ಧತೆ ನಡೆಸಲು ಸೂಚನೆ ನೀಡಿದರು.
ಕುಡಿಯುವ ನೀರು;
ಕುಡಿಯುವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ನದಿಗೆ ಮತ್ತು ನಾಲೆಗೆ ನೀರು ಬಿಡಲು ಕಾಡಾ ಅಧಿಕಾರಿಗಳಿಗೆ ಸೂಚನೆ ನೀಡಿ ದೇವಸ್ಥಾನ ಸಮಿತಿಯಿಂದ ದೇವಸ್ಥಾನದ ಬಳಿ ವ್ಯವಸ್ಥೆ ಹಾಗೂ ಹೊರಗೆ ಪಂಚಾಯತಿಯಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಸ್ವಚ್ಛತೆ, ಆರೋಗ್ಯ;
ಜಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆಗೆ ಆದ್ಯತೆ ನೀಡಿ ಕಸ ವಿಲೇವಾರಿ ಮಾಡುವ ಮೂಲಕ ಶಿಪ್ಟ್‌ನಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿ ಸ್ವಚ್ಛತೆಗೊಳಿಸಬೇಕು. ನಗರಸಭೆಯಿಂದಲೂ ಕಸವನ್ನು ತೆಗೆದುಕೊಂಡು ಹೋಗಲು ವಾಹನ ಕಳುಹಿಸಿಕೊಡಬೇಕು. ಹಾಗೂ ಜನರ ಆರೋಗ್ಯ ರಕ್ಷಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜೊತೆ ೧೨ ವೈದ್ಯರ ತಂಡವನ್ನು ಜಾತ್ರೆಗಾಗಿ ನಿಯೋಜಿಸಿ ವೈದ್ಯೋಪಚಾರಕ್ಕೆ ಬೇಕಾದ ಔಷಧವನ್ನು ದಾಸ್ತಾನಿಟ್ಟುಕೊಳ್ಳಲು ಆರೋಗ್ಯಧಿಕಾರಿಗಳಿಗೆ ಸೂಚನೆ ನೀಡಿದರು.
ವಾಹನದ ಸೌಲಭ್ಯ;
ಭಕ್ತಾಧಿಗಳಿಗೆ ಬಂದುಹೋಗಲು ಗಂಗಾವತಿ, ಕೊಪ್ಪಳ ಹೊಸಪೇಟೆ ಕಡೆಯಿಂದ ಬಸ್‌ಗಳನ್ನು ಬಿಡಲಿದ್ದು ೩೦೦ ಬಸ್‌ಗಳು ಜಾತ್ರಾ ವಿಶೇಷವಾಗಿ ಬೀಡಲಾಗುತ್ತದೆ. ಪ್ರಯಾಣ ಒತ್ತಡಕ್ಕೆ ತಕ್ಕಂತೆ ಇನ್ನು ಹೆಚ್ಚಿನ ಬಸ್‌ಗಳನ್ನು ಸಾರಿಗೆ ಸಂಸ್ಥೆಯಿಂದ ನೀಡಲಾಗುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ತಿಳಿಸಿ ತುಂಗಭದ್ರಾ ಶಾಲೆಯವರೆಗೆ ಬಸ್‌ಗಳು ಸಂಚರಿಸಲಿವೆ
ರಸ್ತೆ ಒತ್ತುವರಿ ತೆರವಿಗೆ ಸೂಚನೆ;
ದೇವಸ್ಥಾನ ಮುಂಭಾಗದಲ್ಲಿ ರಸ್ತೆಯ ಎರಡು ಬದಿ ಅಂಗಡಿ, ಮುಂಗಟ್ಟುಗಳನ್ನು ಹಾಕಿಕೊಂಡಿರುವುದರಿಂದ ಭಕ್ತಾಧಿಗಳಿಗೆ ತೊಂದರೆ ಯಾಗಲಿದೆ. ಆದ್ದರಿಂದ ಯಾರು ರಸ್ತೆಯ ಮೇಲೆ ಅಂಗಡಿಗಳನ್ನು ಇಟ್ಟುಕೊಳ್ಳವರು, ಮೊದಲು ತಿಳಿಸಿ ನಂತರ ಸೀಜ್ ಮಾಡಿಕೊಳ್ಳಲು ತಿಳಿಸಿ ಪರಿಶೀಲನೆಗಾಗಿ ಭೇಟಿ ನೀಡಲು ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದರು.
ಪೋಲಿಸ್ ಬಂದೋಬಸ್ತ್;
ಜಾತ್ರೆವೇಳೆ ಸುಗಮ ಸಾರಿಗೆ ವ್ಯವಸ್ಥೆಗೆ ಸಂಚಾರ ನಿಯಂತ್ರಣ ಹಾಗೂ ಜೇಬುಕಳ್ಳರ ಹಾವಳಿ ಹೆಚ್ಚಿರುತ್ತವೆ. ಆದ್ದರಿಂದ ಅಗತ್ಯವಿರುವ ಎಲ್ಲಾ ಕಡೆ ಸಿ.ಸಿ ಕ್ಯಾಮೇರಾ ಅಳವಡಿಸಬೇಕು. ಇದನ್ನು ದೇವಸ್ಥಾನ ಸಮಿತಿಯಿಂದ ವ್ಯವಸ್ಥೆಗೊಳಿಸಬೇಕು ಮತ್ತು ನದಿ ದಂಡೆಯಯ ಕಡೆ ಬ್ಯಾರಿಕೇಡ್ ನಿರ್ಮಾಣ ಮಾಡಲು ತಿಳಿಸಿ ತುರ್ತು ಸಂದರ್ಭಕ್ಕಾಗಿ ಅಗ್ನಿಶಾಮಕ ವಾಹನ ಮತ್ತು ಅಗ್ನಿಶಾಮಕ ಬೈಕ್‌ನ್ನು ಸಿದ್ದತೆಯಲ್ಲಿಟ್ಟುಕೊಳ್ಳಲು ಅಗ್ನಿಶಾಮಕ ಅಧಿಕಾರಿಗೆ ಸೂಚಿಸಿದರು.
ಪ್ರಾಣಿಬಲಿ, ಮದ್ಯ ನಿಷೇಧ;
ಜಾತ್ರಾ ಸಂದರ್ಭದಲ್ಲಿ ಯಾವುದೇ ಪ್ರಾಣಿ ಬಲಿಯನ್ನು ಮಾಡವಂತಿಲ್ಲಿ, ಪ್ರಾಣಿಬಲಿ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು ಯಾವುದೇ ಪ್ರಾಣಿಗಳನ್ನು ತೆಗೆದುಕೊಂಡು ಹೋಗದಂತೆ ಎಲ್ಲಾ ಕಡೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಬೇಕು ಮತ್ತು ಜಾತ್ರಾ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗುತ್ತದೆ ಎಂದರು.
ಮೌಡ್ಯತೆ ವಿರುದ್ದ ಜಾಗೃತಿ;
ಜಾತ್ರೆಯಲ್ಲಿ ಸಾಕಷ್ಟು ಭಕ್ತಾಧಿಗಳು ಬರುವುದರಿಂದ ಬಾಲ್ಯವಿವಾಹ, ದೇವದಾಸಿ ಪದ್ದತಿ ನಿಷೇಧದ ಕುರಿತಂತೆ ಜಾಗೃತಿ ಮೂಡಿಸಲು ಆಯಾ ಇಲಾಖೆಯಿಂದ ಸಿದ್ದತೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸೂಕ್ತ ಸ್ಥಳವನ್ನು ಗುರುತಿಸಿ ಇತರೆ ಇಲಾಖೆಗಳಿಂದಲು ಜನರಿಗೆ ಅರಿವು ಮೂಡಿಸಲು ಸೂಚಿಸಿ ಜಾತ್ರೆಯಲ್ಲಿ ಮಕ್ಕಳ ಬಗ್ಗೆ ಸಹಾಯವಾಣಿಯನ್ನು ಸ್ಥಾಪಿಸಲು ಸೂಚನೆ ನೀಡಿದರು.
ಶೌಚಾಲಯ ವ್ಯವಸ್ಥೆ;
ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅಗತ್ಯವಿರುವಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಲು ತಿಳಿಸಿ ಗ್ರಾಮ ಪಂಚಾಯಿತಿ ಮತ್ತು ದೇವಸ್ಥಾನ ಸಮಿತಿಯಿಂದ ಮೊಬೈಲ್ ಶೌಚಾಲಯ ಮತ್ತು ತಾತ್ಕಾಲಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲು ಸೂಚನೆ ನೀಡಿದರು.
ನಿರಂತರ ವಿದ್ಯುತ್;
ಜಾತ್ರೆಯ ವೇಳೆ ಹಗಲು ಮತ್ತು ರಾತ್ರಿಯ ವೇಳೆಯು ಭಕ್ತಾಧಿಗಳು ತಂಗುವುದರಿಂದ ರಾತ್ರಿಯ ವೇಳೆ ವಿದ್ಯುತ್ ಕಡಿತವಾಗದಂತೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಮತ್ತು ಇದಕ್ಕಾಗಿ ಎಕ್ಸ್‌ಪ್ರೆಸ್ ಪೀಡರ್ ಮೂಲಕ ಪೂರೈಕೆ ಮಾಡಿ ಅಗತ್ಯ ಲೋಡ್‌ಗೆ ತಕ್ಕಂತೆ ಟಿ.ಸಿಗಳನ್ನು ಅಳವಡಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಹುಲಿಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಚಂದ್ರಮೌಳಿ, ತಹಶೀಲ್ದಾರ ಜೆ.ಬಿ. ಮಜ್ಜಿಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error