ಹುಬ್ಬಳ್ಳಿ-ಚಿಕ್ಕಬೆಣಕಲ್ ರೈಲು ವೇಳಾಪಟ್ಟಿ ನ. 15 ರಿಂದ ಬದಲಾವಣೆ : ಸಂಸದರ ಅಭಿನಂದನೆ

: ಹುಬ್ಬಳ್ಳಿ-ಚಿಕ್ಕಬೆಣಕಲ್ ರೈಲ್ವೆ ವೇಳಾಪಟ್ಟಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬದಲಾಯಿಸುವಂತೆ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ, ರೈಲ್ವೆ ವೇಳಾಪಟ್ಟಿ ಬದಲಾಯಿಸಿದ್ದಕ್ಕಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ನೈರುತ್ಯ ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಗಂಗಾವತಿ ತಾಲೂಕು ಚಿಕ್ಕಬೆಣಕಲ್-ಹುಬ್ಬಳ್ಳಿ ನಡುವೆ ಸಂಚರಿಸುತ್ತಿದ್ದ ರೈಲಿನ ವೇಳಾಪಟ್ಟಿಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾಯಿಸುವಂತೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಇದೀಗ ಹುಬ್ಬಳ್ಳಿ-ಚಿಕ್ಕಬೆಣಕಲ್ ರೈಲು ಗಾಡಿ ಸಂಖ್ಯೆ 56927/56928 ವೇಳಾಪಟ್ಟಿ ಬದಲಾಯಿಸಿದ್ದು, ನಿತ್ಯ ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಕೊಪ್ಪಳಕ್ಕೆ ಮಧ್ಯಾಹ್ನ 12-30 ಕ್ಕೆ ಹಾಗೂ ಚಿಕ್ಕಬೆಣಕಲ್‍ಗೆ ಮಧ್ಯಾಹ್ನ 1-30 ಗಂಟೆಗೆ ತಲುಪಲಿದೆ. ಚಿಕ್ಕಬೆಣಕಲ್‍ನಿಂದ ಮಧ್ಯಾಹ್ನ 02 ಗಂಟೆಗೆ ಹೊರಡುವ ರೈಲು ಕೊಪ್ಪಳಕ್ಕೆ 2-45, ಹುಬ್ಬಳ್ಳಿಗೆ ಸಂಜೆ 5-50 ಗಂಟೆಗೆ ತಲುಪಲಿದೆ. ನೂತನ ವೇಳಾಪಟ್ಟಿ ನ. 15 ರಿಂದ ಜಾರಿಗೆ ಬರಲಿದೆ. ಮಧ್ಯಾಹ್ನದ ಅವಧಿಯಲ್ಲಿ ಕೊಪ್ಪಳದಿಂದ ಹುಬ್ಬಳ್ಳಿಗೆ ತೆರಳಲು ನೂತನ ವೇಳಾಪಟ್ಟಿ ಅನುಕೂಲವಾಗಲಿದೆ. ಮನವಿಗೆ ಸ್ಪಂದಿಸಿ, ವೇಳಾಪಟ್ಟಿ ಬದಲಾವಣೆ ಮಾಡಿಕೊಟ್ಟಿದ್ದಕ್ಕಾಗಿ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಸದ ಕರಡಿ ಸಂಗಣ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Please follow and like us:
error