ಹುಬ್ಬಳ್ಳಿಯಿಂದ ಬಂದ ಮಹಿಳೆಯ ಟೆಸ್ಟ್ ನೆಗೆಟಿವ್ : ಸಮಾಧಾನದ ನಿಟ್ಟುಸಿರು ಬಿಟ್ಟ ಕೊಪ್ಪಳದ ಜನತೆ

ಕೊಪ್ಪಳ : ಇಡೀ ಜಿಲ್ಲೆಯಾದ್ಯಂತ ಬಹಳಷ್ಟು ಕುತೂಹಲ ಹಾಗೂ ಆತಂಕ ಮೂಡಿಸಿದ್ದ ಹುಬ್ಬಳ್ಳಿ ಮಹಿಳೆಯ ಪ್ರಕರಣ ದಲ್ಲಿ ಮಹಿಳೆಯ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಭಾಗ್ಯನಗರದಲ್ಲಿ ಅನಧಿಕೃತವಾಗಿ ಆ ಮಹಿಳೆಯನ್ನು ಕರೆತಂದಿದ್ದ ಹಿನ್ನೆಲೆಯಲ್ಲಿ ನಿನ್ನೆ ಗುರುಬಸವ ಹೊಳಗುಂದಿ ಹಾಗೂ ಮಹಿಳೆ ಶಿಖಾ ಶೇಖ್ ವಿರುದ್ದ ಪ್ರಕರಣ ದಾಖಲಾಗಿತ್ತು. ಅಲ್ಲದೇ ಶಿಖಾ ಶೇಖ್ ವಾಸವಾಗಿದ್ದ ಮನೆಯವರು ಹಾಗೂ ಗುರುಬಸವ ಹೊಳಗುಂದಿಯವರನ್ನು ಕ್ವಾರಂಟೈನ್ ಗೆ ಕಳಿಸಲಾಗಿದೆ.  ಒಮ್ಮೇಲೆ ಈ ಪ್ರಕರಣ ಬೆಳಕಿಗೆ ಬಂದು ಕೊಪ್ಪಳ ಮತ್ತು ಭಾಗ್ಯನಗರದ ಜನತೆಯಲ್ಲಿ ಆತಂಕ ಮೂಡಿಸಿತ್ತು. ಈಗ ಆ ಮಹಿಳೆಯ ಟೆಸ್ಟ್ ರಿಜಲ್ಟ್ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇದು ಇಡೀ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ.

 

ಇಂದಿನವರೆಗೆ ಬಂದ ಪರೀಕ್ಷಾ ಫಲಿತಾಂಶಗಳು-

ಕಳುಹಿಸಿದ ಒಟ್ಟು ಮಾದರಿಗಳು – 262

ಒಟ್ಟು ಪರೀಕ್ಷಿಸಲಾದ ಮಾದರಿಗಳು – 247

ರಿಜಲ್ಟ್- ಎಲ್ಲಾ 247 ನೆಗೆಟಿವ್ ಆಗಿದೆ

ಪರೀಕ್ಷೆ ಬಾಕಿ ಉಳಿದಿರುವುದು – 15

ಗಮನಿಸಿ: ಹುಬ್ಬಳ್ಳಿಯಿಂದ ಬಂದ ಮಹಿಳೆಯ ಪ್ರಾಥಮಿಕ ಸಂಪರ್ಕ  ಫಲಿತಾಂಶವು ನೆಗೆಟಿವ್

 

Please follow and like us:
error