ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬಂದ ಮಹಿಳೆ : ಇಬ್ಬರ ವಿರುದ್ದ ಕೇಸ್ ದಾಖಲು

ಕೊರೋನಾ ( ಕೊವಿಡ್ – 19 ) ವೈರಾಣು ಸೊಂಕು ದೃಡಪಟ್ಟಿರುವ KA – P194 ( ಧಾರವಾಡ ) ಇವರು ದಿ: 19 – 03 – 2020 ರಂದು ವಿ . ಆರ್ . ಎಲ್ ಟ್ರಾವೆಲ್ಸ್ ಬಸ್ ಮೂಲಕ ಮುಂಬೈಯಿಂದ ಹುಬ್ಬಳ್ಳಿಗೆ ! ಪ್ರಯಾಣ ಮಾಡಿರುತ್ತಾರೆ . ಶ್ರೀಮತಿ ಶಿಖಾ ಶೇಖ್ ಎಂವವರು KA + PI94 ಇವರ ಜೊತೆಗೆ ಒಂದೇ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ಶ್ರೀಮತಿ ಶಿಖಾ ಶೇಕ್ ಇವರು KA – P194 ಇವರ ಪ್ರಾಥಮಿಕ ಸಂಪರ್ಕವನ್ನು ( Primary Coolict ) ಹೊಂದಿರುತ್ತಾರೆ . ಇವರು ದಿನಾಂಕ : 20 – 09 – 2020 ರಂದು ಆಟೋ ಮೂಲಕ ಹುಬ್ಬಳ್ಳಿಯಲ್ಲಿ ಪರಿಚಯಸ್ಥರ ಮನೆಗೆ ತಲುಪಿ ತಮ್ಮ ಪರಿಚಯ ಮಹಿಳೆ ಶ್ರೀಮತಿ ಲಕ್ಷ್ಮಿ ಭಟ್ , ಹುಬ್ಬಳ್ಳಿ ಇವರ ಮನೆಯಲ್ಲಿ ತಂಗಿರುತ್ತಾರೆ . ದಿನಾಂಕ : 13 – 04 – 2020 ರಂದು ಸಾಯಂಕಾಲ 5 – 30 ರಿಂದ 4 ಸಮಯದಲ್ಲಿ ಶ್ರೀಮತಿ ಶಿಖಾ ಶೇಖ್ ಇವರು ಸ್ಕೂಟರ್ ವಾಹನದ ಜೊತೆಗೆ ಹಾಲಿನ ಡೈರಿ ವಾಹನದಲ್ಲಿ ಹುಬ್ಬಳಿಯಿಂದ ಪ್ರಯಾಣಿಸಿ , ರಾತ್ರಿ ಸುಮಾರು 08 – 30 ಗಂಟೆಗೆ ಕೊಪ್ಪಳಕ್ಕೆ ತಲುಪಿ ಶಾಂತಾರಾಮ , ಕದಂಬ ನಗರ , ಭಾಗ್ಯನಗರ ಇವರ ಮನೆಯಲ್ಲಿ ವಾಸ್ತವ್ಯ ಹೂಡಿರುತ್ತಾರೆ , ಶ್ರೀಮತಿ ಶಿಖಾ ಶೇಖ್ ಇವರನ್ನು ವಿಚಾರಿಸಲಾಗಿ ಗುರುಬಸವ ಹೊಳಗುಂದಿ ಇವರು ಮುಂಬೈಗೆ ಹೋಗಲು ಪಾಸ್ ಕೊಡಿಸುವುದಾಗಿ ತಿಳಿಸಿರುವ ಹಿನ್ನಲೆಯಲ್ಲಿ ಕೊಪ್ಪಳಕ್ಕೆ ಬರುವಂತಾಯಿತು ಎಂದು ಹೇಳಿಕೆಯನ್ನು ನೀಡಿರುತ್ತಾರೆ . ದಿ : 14 – 04 – 2020ರಂದು ಗುರುಬಸವ ಹೊಳಗುಂದಿ ಇವರು ಶ್ರೀಮತಿ ಶಿಖಾ ಶೇಕ ಇವರನ್ನು ಸ್ಕೂಟಿ ವಾಹನದಲ್ಲಿ ಕರೆದುಕೊಂಡು ಪೊಲೀಸ್ ಕೇಂದ್ರ ಕಛೇರಿಗೆ ಬಂದಿರುತ್ತಾರೆ . ಪೊಲೀಸ್‌ರವರು ಆಸ್ಪತ್ರೆಗೆ ತೆರಳಲು ತಿಳಿಸಿರುತ್ತಾರೆ . ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿಪ್ರಾಯದಂತೆ Institutional Quaintine ಕೇಂದ್ರದಲ್ಲಿ ಇಡಲಾಗಿದೆ . ಶಾಂತಾರಾಮ ಹಾಗೂ ಅವರ ಕುಟುಂಬದ ಸದಸ್ಯರನ್ನು ಸಹ Institutional Quarantirve ಮಾಡಲಾಗಿದೆ . ಗುರುಬಸವ ಹೊಳಗುಂದಿ ಇವರನ್ನು Institutional QUAurantine ಮಾಡಲು ಹೋದಾಗ ಪ್ರತಿರೋಧಿಸಿರುತ್ತಾರೆ , ಆದ್ದರಿಂದ ಇವರನ್ನು Institutional Quarantine ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಾಗಿದೆ . ಸದರಿಯವರ ವಿವರಗಳನ್ನು ಧಾರವಾಡ ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಅನುಮತಿ ಪಡೆಯದೇ Primary Contact ಸಂಪರ್ಕವಿರುವ ವ್ಯಕ್ತಿಗಳನ್ನು ಕೊಪ್ಪಳಕ್ಕೆ ಕರೆತಂದಿರುವುದು ಅಪರಾಧವಾಗಿದ್ದು , ಈ ಬಗ್ಗೆ ಗುರುಬಸವ ಹೊಳಗುಂದಿ ಇವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ತಹಶೀಲ್ದಾರ ಕೊಪ್ಪಳ / ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ . ಹೆಚ್ಚಿನ ತನಿಖೆಗೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು . ಕಾರಣ ಮೇಲ್ಕಾಣಿಸಿದ ಸದಸ್ಯರ ಹಾಗೂ ಅವರ ಕುಟುಂಬದ ಸದಸ್ಯರ ಜೊತೆಗೆ ಯಾವುದೇ ಸಂಪರ್ಕ ಹೊಂದಿದ್ದಲ್ಲಿ ಅಂತಹ ವ್ಯಕ್ತಿಗಳು ತಮ್ಮ ಮನೆಯಿಂದ ಹೊಧಿಗೆ ಬಾರದೇ ಕಡ್ಡಾಯವಾಗಿ ಮನೆಯಲ್ಲಿಯೇ ಇರತಕ್ಕದ್ದು ಹಾಗೂ ಕೆಮ್ಮು , ನೆಗಡಿ , ಉಸಿರಾಟ ಸಂಬಂಧಿ ಖಾಯಿಲೆಗಳ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆಯನ್ನು ಪಡೆಯತಕ್ಕದ್ದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

Please follow and like us:
error