ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಕೊಪ್ಪಳ: ಕೊರೊನಾ ವೈರಸ್ನ್ನು ಜಗತ್ತಿಗೆ ಅಂಟಿಸಿದ ಚೀನಾ ಭಾರತದ ಮೇಲೆ ಅನಗತ್ಯವಾಗಿ ಯುದ್ಧಕ್ಕೆ ಸನ್ನದ್ಧವಾಗಿದ್ದು, ದೇಶದ ನಾಲ್ವರು ಯೋಧರನ್ನು ಹುತಾತ್ಮರನ್ನಾಗಿ ಮಾಡಿದೆ. ಭಾರತಾಂಬೆಯ ಹುತಾತ್ಮ ಯೋಧರಿಗೆ ಹೆಮ್ಮೆಪೂರ್ವಕ ಶ್ರದ್ಧಾಂಜಲಿಯನ್ನು ನಗರದ ಅಶೋಕ ವೃತ್ತದಲ್ಲಿ ಬಿಜೆಪಿಯ ಮಹಿಳಾ ಮೋರ್ಚಾ ಪದಾಧಿಕಾರಿಗಳು ಅರ್ಪಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವಾಣಿಶ್ರೀ ಮಠದ್ ಅವರು, ಭಾರತ ಯಾವತ್ತೂ ಕೆಟ್ಟ ಕೃತ್ಯಗಳಿಗೆ ಕಯ ಹಾಕಲ್ಲ. ದೇಶಕ್ಕೆ ಕೇಡು ಬಯಸಿದವರನ್ನು ಸುಮ್ಮನೆ ಬಿಡುವುದೂ ಇಲ್ಲ. ಈಗಾಗಲೇ ದೇಶದ ಸೈನಿಕರನ್ನು ಹುತಾತ್ಮರನ್ನಾಗಿಸಿದ ಚೀನಾಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದರು.
ಪಾಕಿಸ್ತಾನ ಬಾರ್ಕೋಟ್ ದಾಳಿ ಮಾಡಿ ಭಾರತದಿಂದ ತಕ್ಕ ಶಾಸ್ತಿ ಅನುಭವಿಸಿ ಈಗ ಬಾಲ ಮುದುರಿಕೊಂಡಿದೆ. ಪಾಕಿಸ್ತಾನದಂತೆ ಚೀನಾ ಈಗ ಕಾಲು ಕೆರೆದು ಕೆಣಕುತ್ತಿದ್ದು, ಚೀನಾ ಇದರ ಪರಿಣಾಮವನ್ನು ಎದುರಿಸುತ್ತದೆ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಸುನಿಲ್ ಹೆಸರೂರ್, ನಾಗರತ್ನ ಪಾಟೀಲ್, ಹೇಮಲತಾ ನಾಯಕ್, ಮಧುರಾ ಕರಣಂ, ಪೂರ್ಣಿಮಾ ಶೆಟ್ಟರ, ವೀಣಾ ಬನ್ನಿಗೋಳ, ಶೋಭಾ ನಗರಿ, ಶ್ಯಾಮಲಾ ಕೋನಾಪುರ, ಭಾರತಿ ಗುಡ್ಲಾನೂರ್, ಜಯಶ್ರೀ ಗೊಂಡಬಾಳ್, ಗೀತಾ ಪಾಟೀಲ್, ಸುವರ್ಣ, ಜಿಲ್ಲಾ ಮಾಧ್ಯಮ ವಕ್ತಾರರಾದ ಬಸವಲಿಂಗಯ್ಯ ಜಿ ಗದಗಿನಮಠ ಇನ್ನು ಮುಂತಾದವರು ಭಾಗವಹಿಸಿದ್ದರು

Please follow and like us:
error