ಹುತಾತ್ಮರಾದ ಸೈನಿಕರಿಗೆ ಭಾವಪೂರ್ಣ ಶ್ರದ್ದಾಂಜಲಿ

Koppal :  ಶ್ರೀ ನಂದೀಶ್ವರ ಶಾಲೆಯಲ್ಲಿ   ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಸೈನಿಕರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.ಭಾರತೀಯ ಸೈನಿಕರು ತಮ್ಮ ದೈರ್ಯ ಶೌರ್ಯದಿಂದ ರಾಷ್ಟ್ರಕ್ಕಾಗಿ ಹೋರಾಟ ಮಾಡಿ ಭಾರತಾಂಭೆಗೆ ಪ್ರೀಯರಾಗಿದ್ದಾರೆ.ಪ್ರತೀಯೋಬ್ಬ ವಿದ್ಯಾರ್ಥಿಗಳು ಸೈನಿಕರ ದೈರ್ಯ-ಶೌರ್ಯದ ಗುಣಗಳನ್ನು ತಮ್ಮಲ್ಲಿ ಬೆಳಸಿಕೊಳ್ಳಬೇಕು.ದೇಶಕ್ಕಾಗಿ ತಮ್ಮ ಜೀವವನ್ನೆ ಪಣಕ್ಕಿಡುವ ಸೈನಿಕರು ರಾಷ್ಟ್ರದ ಒಂದು ಕಣ್ಣು.ಎಂದೂ ಗವಿ ಜಂತಕಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರದ ಎರಡು ಕಣ್ಣುಗಳು ಒಂದು ಕಣ್ಣು ರೈತ,ಮತ್ತೋಂದು ಕಣ್ಣು ಸೈನಿಕ.ಭಾರತಾಂಭೆಯ ಮಡಿಲಲ್ಲಿ ಉಗ್ರರ ಗುಂಡಿಗೆ ಬಲಿಯಾದ ಸೈನಿಕರಿಗೆ ನಾವೇಲ್ಲರು ಸ್ಮರಿಸೋಣ,ವಿದ್ಯಾರ್ಥಿಗಳಿಂದ ಶಾಲೆಯ ಆವರಣದಲ್ಲಿ ಭಾರತ ನಕಾಶೆಯನ್ನು ಬಿಡಿಸಲಾಯಿತ್ತು.ಬಾರತ ನಕಾಶೆಯ ಸುತ್ತಲೂ ವಿದ್ಯಾರ್ಥಿಗಳು ಸೈನಿಕರ ಸುಮಾರು ೪೦ ಕ್ಕೂ ಹೆಚ್ಚು ಭಾವಚಿತ್ರಗಳಿಗೆ ಎಲ್ಲಾ ವಿದ್ಯಾರ್ಥಿಗಳು ಕ್ಯಾಂಡಲ್ ಬೆಳಗಿಸುವುದರ ಮೂಲಕ ಭಾವಪೂರ್ಣ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಸುರೇಶ ಕುಂಬಾರ ಅಭೀನವ ಸಿದ್ದೇಶ್ವರ ಸಂಸ್ಥೆಯ ಆನಂದ ಹಳ್ಳಿಗುಡಿ,ಶಿವಕುಮಾರ,ಶಾಲೆಯ ಪಾಲಕರಾದ ಗವಿಸಿದ್ದಪ್ಪ ಭಾಗವಹಿಸಿದ್ದರು.ಶಿಕ್ಷಕರಾದ ಹನಮಂತಪ್ಪ,ದೇವಪ್ಪ,ಶ್ರೀಲಕ್ಷ್ಮೀ,ಲಕ್ಷ್ಮಿ,ಶಾಂತಾ,ರೇಷ್ಮಾ,ಗೀತಾ,ಲತಾ,ಹಾಗೂಲತಾಬಿಇದ್ದರು.ಭಾರತ ನಕಾಶೆಯನ್ನು ಶಾಲೆಯ ಶಿಕ್ಷಕರು ಸುಂದರವಾಗಿ ಬಿಡಿಸಿದ್ದರು.

Please follow and like us:
error