ಹಿರೇಹಳ್ಳ ಹೂಳೆತ್ತುವ ಶ್ರೀಗಳ ಕಾರ್ಯ ರಾಜ್ಯಕ್ಕೆ ಮಾದರಿ- ಜಿಲ್ಲಾ ಉಸ್ತುವಾರಿ ಸಚಿವ ಇ‌.ತುಕಾರಾಂ

Koppal ಜನರ ಹಾಗೂ ಜಿಲ್ಲಾಡಳಿತದ ಸಹಭಾಗಿತ್ವದಡಿ ಗವಿಶ್ರೀಗಳ ನೇತೃತ್ವದಲ್ಲಿ ನಡೆತುತ್ತಿರುವ ಹಿರೇಹಳ್ಳ ಹೂಳೆತ್ತುವ ಕೆಲಸ ರಾಜ್ಯಕ್ಕೆ ಮಾದರಿ. ಶ್ರೀಗಳ ಈ ಕಾರ್ಯದಿಂದ ಸ್ಫೂರ್ತಿ ಪಡೆದು ಸಂಡೂರಿನಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಹೂಳೆತ್ತುವ ಕೆಲಸ ಪ್ರಾರಂಭಿಸಿದ್ದೇನೆ.

ಕೊಪ್ಪಳದ ಶ್ರೀಗಳ ಕೆಲಸವನ್ನು ಮಾಡೆಲ್ ಆಗಿಸುವಂತೆ ಸರಕಾರಕ್ಕೆ ತಿಳಿಸಿ, ನಾಡಿನ ನಾನಾ ಭಾಗಗಳಲ್ಲಿ ಹೂಳೆತ್ತುವ ಕೆಲಸಕ್ಕೆ ಚಾಲನೆಗೆ ಪ್ರಯತ್ನ

ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಸರಕಾರ ಬದ್ಧ. ಸಂಸದ ಕರಡಿ ಸಂಗಣ್ಣ ಕೇಂದ್ರದಿಂದ ಅನುದಾನ ತರಲಿ, ರಾಜ್ಯದ ಪಾಲಿನ ಅನುದಾನ ಬಿಡುಗಡೆಗೊಳಿಸುವುದು ನಿಶ್ಚಿತ ಎಂದು ಕೊಪ್ಪಳದಲ್ಲಿ ಉಸ್ತುವಾರಿ ಸಚಿವ ಇ.ತುಕಾರಾಂ ಹೇಳಿದರು. ಹಿರೇಹಳ್ಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದೀಯ ಕಾರ್ಯದರ್ಶಿ ಶಾಸಕ ರಾಘವೇಂದ್ರ ಹಿಟ್ನಾಳ ಜಿ.ಪಂ. ಸದಸ್ಯರಾದ ರಾಜಶೇಖರ ಹಿಟ್ನಾಳ, ಗೂಳಪ್ಪ ಹಲಗೇರಿ,ಮುತ್ತುರಾಜ್ ಕುಷ್ಟಗಿ. ಕಾಟನ್ ಪಾಷಾ, ಕೃಷ್ಣ ಇಟ್ಟಂಗಿ, ಎಸ್.ಬಿ.ನಾಗರಳ್ಳಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error