ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ದೇಣಿಗೆ

ಕೊಪ್ಪಳ- ಗವಿಮಠದ ಪೂಜ್ಯರು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ವಿವಿಧ ಮಠಾಧಿಶರು.ಸರಕಾರಿ ನೌಕರರು.ವಿವಿಧ ಸಂಘ ಸಂಸ್ಥೆಗಳು ದೇಣಿಗೆಯನ್ನು ಅರ್ಪಿಸುತಿದ್ದಾರೆ. ಇಂದು ನಗರದ ನಂದಿ ನಗರದ ನಿವಾಸಿ ಶಿವಪ್ಪ ಶೆಟ್ಟರ್ ಹಾಗೂ ಮಕ್ಕಳು ೫೧.೦೦೦ ರೂಪಾಯಿಗಳನ್ನು, ಗುರುಬಸವ ಬಣಜಿಗರ ಸಹಕಾರ ಪತ್ತಿನ ಸ. ನಿಯಮಿತ ಆಡಳಿತ ಮಂಡಳಿ. ಅಧ್ಯಕ್ಷರು. ನಿರ್ದೇಶಕರು ಹಾಗೂ ಸಿಬ್ಭಂದಿ ವರ್ಗದ ವತಿಯಿಂದ ೨೫.೦೦೦ ರೂಪಾಯಿಗಳನ್ನು ಪೂಜ್ಯ ಶ್ರೀಗಳಿಗೆ ಹಿರೇಹಳ್ಳದ ಪುನಶ್ಚೇತನ ಕಾರ್ಯಕ್ಕೆ ದೇಣಿಗೆಯನ್ನು ಅರ್ಪಿಸಿದರು. ಈ ಸಂಧರ್ಬದಲ್ಲಿ ದಾನಿಗಳು ಉಪಸ್ಥಿತರಿದ್ದರು

Please follow and like us:
error