ಹಿರೇಹಳ್ಳ ಪುನಶ್ಚೇತನಾ ಕಾರ್ಯ ಸೇವಾ ಕೈಂಕರ್ಯ


ಕೊಪ್ಪಳ- ಗವಿಮಠದ ಪೂಜ್ಯರು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನಾ ಕಾರ್ಯದಲ್ಲಿ ಇಂದು ಭಾಗ್ಯನಗರದ ಇನ್ನರ್‌ವೀಲ್ ಕ್ಲಬ್ ಮಹಿಳಾ ಸದಸ್ಯರಿಂದ ಭಾಗ್ಯನಗರದ ಪ್ರದೇಶದಲ್ಲಿ ನಡೆಯುತ್ತಿರುವ ಪುನಶ್ಚೇತನ ಕಾರ್ಯದ ಯಂತ್ರದ ಚಾಲಕರಿಗೆ, ಇತರೇ ವಾಹನದ ಚಾಲಕರಿಗೆ ಪ್ರಸಾದ ವ್ಯವಸ್ಥೆಯನ್ನು, ಕೊಪ್ಪಳ ಜಿಲ್ಲಾ ವಿಕಲಚೇತನ ಸಂಘದ ವತಿಯಿಂದ ಓಜಿನಹಳ್ಳಿ ಹಾಗೂ ಭಾಗ್ಯನಗರದ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ರಮದ ಯಂತ್ರದ ವಾಹನ ಚಾಲಕರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡುವುದರ ಮೂಲಕ ತಮ್ಮ ಅಳಿಲು ಸೇವೆಯನ್ನು ಮಾಡಿದ್ದಾರೆ. ಈ ಸಂದರ್ಬದಲ್ಲಿ ವಿಕಲಚೇತನ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ, ಜಿಲ್ಲಾದ್ಯಕ್ಷರಾದ ಅಂದಪ್ಪ ಬೋಳರಡ್ಡಿ. ರಾಜ್ಯ ಖಜಾಂಚಿಯಾದ ಮಂಜುನಾಥ ಹಿಂಡಿಹೊಳಿ. ತಾಲೂಕ ಅಧ್ಯಕ್ಷರಾದ ಅಂದಪ್ಪ ಇಡ್ಲಿ. ತಾಲೂಕ ಕಾರ್ಯದರ್ಶಿಯಾದ ಗಂಗಪ್ಪ ಅಂಭಿಗೇರ ಉಪಸ್ಥಿತರಿದ್ದರು. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.

Please follow and like us:
error