ಹಿರೇಬಗನಾಳ : ವಿಜೃಂಭಣೆಯಿಂದ ಜರುಗಿದ ಶ್ರೀ ಗವಿಸಿದ್ದೇಶ್ವರ ರಥೋತ್ಸವ


ಕೊಪ್ಪಳ ೦೨: ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಮಾರುತೇಶ್ವರನ ಕಾರ್ತಿಕೋತ್ಸವ ಅಂಗವಾಗಿ ಶ್ರೀ ಗವಿಸಿದ್ದೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳಾದ ಅಭಿಷೇಕ, ಕೊಂಡ ಪೂಜೆ, ಕಾರ್ತಿಕೋತ್ಸವ, ಸಣ್ಣ ರಥೋತ್ಸವ, ಗಂಗಾ ಮಾತೆಯ ದರ್ಶನ, ಬೆಳಗು ಮುಂಜಾನೆ ಶ್ರೀದೇವಿಯ ಪಾಯಸ, ಅಗ್ನಿ, ಶ್ರೀ ಮಾರುತೇಶ್ವರನ ಗಿಡ, ಅಗ್ನಿ, ಮುಳ್ಳು ಪಾಲ್ಕಿ, ಮನರಂಜನೆಯ ಅಂಗವಾಗಿ ಡೊಳ್ಳಿನ ವಾದ್ಯ ಅನ್ನಸಂತರ್ಪಣೆ, ಶ್ರೀಗಳಿಂದ ಆಶೀರ್ವಚನ, ಶ್ರೀ ಗವಿಸಿದ್ದೇಶ್ವರ ಮೂರ್ತಿ ಉತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೂವಿನಹಡಗಲಿಯ ಶಾಖಾ ಗವಿಮಠದ ಡಾ|| ಹಿರೇಶಾಂತವೀರ ಮಹಾಸ್ವಾಮಿಗಳು, ಹಿರೇಸಿಂಧೋಗಿ ಕಪ್ಪತಮಠದ ಚಿದಾನಂದ ಮಹಾಸ್ವಾಮಿಗಳು, ಮೈನಳ್ಳಿ ಹಿರೇಮಠದ ಸಿದ್ಧೇಶ್ವರ ಶಿವಚಾರ್ಯ ಮಹಾಸ್ವಾಮಿಗಳು, ಬಳಗಾನೂರಿನ ಚಿಕ್ಕೇನಕೊಪ್ಪದ ಚೆನ್ನವೀರ ಶರಣಮಠದ ಶಿವಶಾಂತವೀರ ಶರಣರು, ಕೊನ್ನೂರಿನ ಫಲಾರೇಶ್ವರ ಸ್ವಾಮಿಗಳು, ಹಾಲವರ್ತಿಯ ಸ್ವಾಮಿಗಳು ಸೇರಿದಂತೆ ಗ್ರಾಮದ ಹಿರಿಯ ಮುಖಂಡರು, ಜನಪ್ರತಿನಿಧಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Please follow and like us:
error