ಹಿರಿಯ ಪತ್ರಕರ್ತ ಸಾದಿಕ್‌ಅಲಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಕೊಪ್ಪಳ,ಜ.೨೫: ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ-೨೦೧೭ ನೇ ಸಾಲಿನ ಸಮಾರಂಭ ಬೆಂಗಳೂರಿನ ವಸಂತ ನಗರದಲ್ಲಿರುವ ಡಾ|| ಬಿ.ಆರ್.ಅಂಬೇಡ್ಕರ ಸಭಾಭವನದಲ್ಲಿ ಜರುಗಿತು. ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಯನ್ನು ಕರ್ನಾಟಕ ಸರ್ಕಾರದ ಗೃಹ ಸಚಿವ ರಾಮಲಿಂಗರಡ್ಡಿ ಅವರು ಪ್ರದಾನ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೧೭ನೇ ಸಾಲಿನ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ ೪೦ ಜನ ಆಯ್ದ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಅವರೆಲ್ಲರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಹಾಗೂ ೨೦ ಸಾವಿರ ರೂ.ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ವಯಕ್ತಿಕ ಪರಿಚಯದ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿಯು ಪ್ರಕಟಿಸಿದ ಪುಸ್ತಕವನ್ನು ಸಹ ಗೃಹ ಸಚಿವ ರಾಮಲಿಂಗರಡ್ಡಿ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಎಮ್.ಸಿದ್ದರಾಜುರವರು ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಡಾ. ಹರ್ಷ ಹಾಗೂ ಹಿರಿಯ ಸಾಹಿತಿ ನಾಡೋಜ ಬರಗೂರ ರಾಮಚಂದ್ರಪ್ಪ, ನಿವೃತ್ತ ವಾರ್ತಾ ಆಯುಕ್ತ ಕೆ.ವಿ.ಆರ್.ಟ್ಯಾಗೂರ್, ಅಕಾಡೆಮಿ ಕಾರ್ಯದರ್ಶಿ ಶಂಕ್ರಪ್ಪ, ಹೈ-ಕ ಭಾಗದ ಅಕ್ಯಾಡೆಮಿ ಸದಸ್ಯ ಬಿ.ವೆಂಕಟಸಿಂಗ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಅಭಿನಂದನೆ : ಎಂ.ಸಾದಿಕ್ ಅಲಿಯವರಿಗೆ ಅಕಾಡೆಮಿ ವಾರ್ಷಿಕ-೨೦೧೭ ಪ್ರಶಸ್ತಿ ಲಭಿಸಿರುವುದಕ್ಕೆ ಜಿಲ್ಲೆಯ ಬಹುತೇಕ ಪತ್ರಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.

Please follow and like us:
error