ಹಿರಿಯ ಪತ್ರಕರ್ತ ಮೋಹನ್ ನಾಗಮ್ಮನವರಿಗೆ ಶ್ರದ್ಧಾಂಜಲಿ

ಮಾಧ್ಯಮ ಲೋಕದ “ರಂಗ ಚೇತನ” ಇನ್ನೂ ನೆನಪು ಮಾತ್ರ
ಹಿರಿಯ ಪತ್ರಕರ್ತರ ನಿಧನಕ್ಕೆ ಸಂತಾಪ ಸೂಚಿಸಿದ ಕೆಯುಡಬ್ಲೂಜೆ

ಕೊಪ್ಪಳ: ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಹಿರಿಯ ಸಾಹಿತಿ, ಪತ್ರಕರ್ತ ಮೋಹನ್ ನಾಗಮ್ಮನವರ ಶನಿವಾರ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅಗಲಿದ ಗಣ್ಯರಿಗೆ ಕೊಪ್ಪಳ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ, ಪ್ರಧಾನ ಕಾರ್ಯದರ್ಶಿ ಎನ್.ಎಮ್.ದೊಡ್ಡಮನಿ, ರಾಜ್ಯ ಕಾರ್ಯಕಾರಿಣಿ ನಾಮನಿರ್ದೇಶಿತ ಸದಸ್ಯ ಹರೀಶ್ ಹೆಚ್.ಎಸ್, ಬಸವರಾಜ ತಿಪ್ಪಣ್ಣನವರ, ಶಿವರಾಜ ನಿಗಡೋಣಿ, ಸಿರಾಜ್ ಬಿಸರಳ್ಳಿ, ರಾಜು, ಶಿವಕುಮಾರ್ ಹಿರೇಮಠ, ಮುಸ್ತಫಾ ನದಾಫ್ ಸೇರಿದಂತೆ ಇತರರು ಮೌನಾಚರಣೆ ಮಾಡುವ ಮೂಲಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

Related posts