ಹಿಂಗಾರು ಮತ್ತು ಬೇಸಿಗೆ ಹಂಗಾಮು : ಬೆಳೆವಿಮೆ ನೊಂದಾಯಿಸಿಕೊಳ್ಳಲು ಸೂಚನೆ

ಕೊಪ್ಪಳ ಅ. ೧ : ಕೊಪ್ಪಳ ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಕರ್ನಾಟ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ನೊಂದಾಯಿಸಿಕೊಳ್ಳುವಂತೆ ರೈತರಿಗೆ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಬೆಳೆ ವಿಮೆಯನ್ನು ಹಿಂಗಾರು ಹಂಗಾಮು ಬೆಳೆಗಳಾದ ಮಳೆ ಆಶ್ರಿತ ಈರುಳ್ಳಿ ಬೆಳೆಯನ್ನು ನವೆಂಬರ್. ೧೫ ರೊಳಗಾಗೆ ಹಾಗೂ ಮಳೆ ಆಶ್ರಿತ ಮತ್ತು ನೀರಾವರಿ ಜೋಳ, ಮಳೆ ಆಶ್ರಿತ ಅಗಸೆ, ಮಳೆ ಆಶ್ರಿತ ಮತ್ತು ನೀರಾವರಿ ಮುಸಕಿನಜೋಳ, ಮಳೆ ಆಶ್ರಿತ ಕುಸುಮೆ, ಮಳೆ ಆಶ್ರಿತ ಮತ್ತು ನೀರಾವರಿ ಸೂರ್ಯಕಾಂತಿ ಮತ್ತು ಮಳೆ ಆಶ್ರಿತ ಅಗಸಿ ಬೆಳೆಗಳನ್ನು ನವೆಂಬರ್. ೩೦ ರೊಳಗಾಗಿ ಮತ್ತು ನೀರಾವರಿ ಗೋಧಿ ಹಾಗೂ ಮಳೆ ಆಶ್ರಿತ & ನೀರಾವರಿ ಕಡಲೆ ಬೆಳೆಯನ್ನು ಡಿಸೆಂಬರ್. ೧೫ ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ಬೆಸಿಗೆ ಹಂಗಾಮು ಬೆಳೆಗಳಾದ ನೀರಾವರಿ ಶೇಂಗಾ, ಭತ್ತ ಮತ್ತು ಸೂರ್ಯಕಾಂತಿ ಬೆಳೆಗಳನ್ನು ೨೦೧೯ರ ಫೆಬ್ರವರಿ. ೨೮ ರೊಳಗಾಗಿ ಬೆಳೆವಿಮೆ ನೋಂದಾಯಿಸಿಕೊಳ್ಳಬೇಕು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಎಲ್ಲಾ ವರ್ಗದ ರೈತರು ಪಾಲ್ಗೊಂಡು, ಬೆಳೆ ವಿಮೆ ಪ್ರೀಮಿಯಮ್ ತುಂಬಿ ಯೋಜನೆಯ ಪ್ರಯೋಜನೆ ಪಡೆಯಬೇಕು. ಹೆಚ್ಚಿನ ವಿವರಗಳಿಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರಿ ಇಲಾಖೆ, ಸ್ಥಳೀಯ ವಾಣಿಜ್ಯ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು  ತಿಳಿಸಿದ್ದಾರೆ.

Please follow and like us:
error