ಹಸಿದವರಿಗೆ ಉಚಿತವಾಗಿ ಆಹಾರ ನೀಡುತ್ತಾನೆ ಈ ಅನ್ನದಾತ

ಮಂಗಳೂರು: ತಾವಾಯಿತು ತಮ್ಮ ಕೆಲಸವಾಯಿತು ಅನ್ನುವ ನಗರದ ಮಂದಿಯ ಮಧ್ಯೆ ಇಲ್ಲಿನ ವ್ಯಕ್ತಿಯೋರ್ವ ವಿಶೇಷವಾಗಿ ಗುರತಿಸಿಕೊಳ್ಳುತ್ತಾರೆ. ಇವರ ಸೇವೆಯೂ ಕೂಡ ಅಷ್ಟೇ ವಿಶಿಷ್ಟವಾಗಿದೆ.

ಹೌದು.. ಅಂಗಡಿಯೊಂದರ ಮಾಲೀಕನೋರ್ವ ‘ಸಾರ್ವಜನಿಕ ಉಪಯೋಗಕ್ಕಾಗಿ ಉಚಿತ’ ಎಂದು ಬರೆದ ಫ್ರಿಡ್ಜ್‌‌ವೊಂದನ್ನು ತಮ್ಮ ಶಾಪ್‌ ಮುಂದೆ ನಿಲ್ಲಿಸಿದ್ದಾರೆ. 24 ಗಂಟೆ ಚಾಲನೆ ಯಲ್ಲಿರುವ ಈ ಫ್ರಿಡ್ಜ್‌‌ನಲ್ಲಿ ಇಡಲಾಗುವ ಎಲ್ಲ ಸಾಮಗ್ರಿಗಳನ್ನು ಸಾರ್ವಜನಿಕರು ಉಚಿತ ವಾಗಿಯೇ ಬಳಸಬಹುದು.ನಗರದ ಜ್ಯೋತಿ ಬಳಿಯ ಕೈರನ್ನಾರ್ ಸಂಕೀರ್ಣದಲ್ಲಿರುವ `ಕೊಹಿನೂರ್ ಕಂಪ್ಯೂಟರ್ ರೆನ್’ ಎಂಬ ಅಂಗಡಿಯ ಮುಂದೆ ಈ ಫ್ರಿಡ್ಜ್ ಇಡಲಾಗಿದೆ. ಮಂಗಳಾದೇವಿ ನಿವಾಸಿಯಾದ ಅರಾಫತ್ ಈ ಗ್ಯಾಜೆಟ್ಸ್‌‌‌‌ಗಳನ್ನು ಮಾರುವ ಅಂಗಡಿಯ ಮಾಲೀಕ. ಫ್ರಿಡ್ಜ್‌‌ನ ಎಡ ಹಾಗೂ ಬಲ ಬದಿಗಳಲ್ಲಿ ಕೆಲವು ಚಿತ್ರಗಳನ್ನು ಅಳವ ಡಿಸಲಾಗಿದೆ. ಆಹಾರವನ್ನೇ ಕಾಣದ ಹಸಿದ ಹೊಟ್ಟೆಗಳು ಒಂದೆಡೆಯಾದರೆ, ಹೊಟ್ಟೆ ತುಂಬಾ ಉಂಡು ಆಹಾರವನ್ನು ಚೆಲ್ಲಾಪಿಲ್ಲಿ ಬಿಸಾಕು ವವರ ಚಿತ್ರಗಳು ಇದರ ಮೇಲೆ ಗಮನ ಸೆಳೆಯುತ್ತವೆ. ಹೀಗೆ ಅರಾಫತ್ ಅವರ ಉದ್ದೇಶ ಸ್ಪಷ್ಟವಾಗುತ್ತದೆ. ಉದ್ಯೋಗ ಅರಸಿ ಕೊಂಡು, ಆಸ್ಪತ್ರೆಗಳಿಗೆ, ಹೀಗೆ ಒಂದಲ್ಲ ಒಂದು ಕಾರಣಕ್ಕಾಗಿ ಮಂಗಳೂರಿನ ದೂರದ ಊರು ಗಳಿಂದ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ, ಅವರೆಲ್ಲ ಸ್ಥಿತಿವಂತರಲ್ಲ. ಕುಡಿಯೋದಕ್ಕೆ ಕಾರ್ಪೊರೇಶನ್ ನೀರಿಗಾಗಿ ಹುಡುಕಿಕೊಂಡು ಹೋಗುವವರೂ ಇದ್ದಾರೆ. ಆಹಾರಕ್ಕಾಗಿ ಅಲೆದಾಡುವವರೂ ಇದ್ದಾರೆ. ಅಂತವರಿಗಾಗಿಯೇ ಅರಾಫತ್ ತಮ್ಮ ಫ್ರಿಡ್ಜ್ ತುಂಬಾ ಏಳು ಬಿರಿಯಾನಿ ಪೊಟ್ಟಣ, ಎರಡು ಕೆ.ಜಿ. ಕಿತ್ತಳೆ ಹಣ್ಣು, ಒಂದು ಕೆ.ಜಿ. ಬಾಳೆಹಣ್ಣು, ಏಳು ಚಿಕ್ಕ ಪ್ಯಾಕ್ ಫ್ರೂಟಿ ಜ್ಯೂಸ್, ಮಿನರಲ್ ವಾಟರ್, ಪಪ್ಪಾಯಿ ಇಟ್ಟಿರುತ್ತಾರೆ. ಭಿಕ್ಷುಕರೂ ಸಹ ಅರಾಫತ್ ಸೇವೆಯ ಫಲಾನುಭವಿಗಳಾಗಿದ್ದಾರೆ.

Please follow and like us:
error