ಹಳ್ಳದಲ್ಲಿ ರಾಶಿ ರಾಶಿ ಮೀನುಗಳು : ಮುಗಿಬಿದ್ದ ಜನ

ಜಿಲ್ಲೆಯಲ್ಲಿ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆರೆಗಳು ಒಡೆದು ನೀರು ಹೊರಹೋಗುತ್ತಿದೆ. ಕೆರೆ ಮತ್ತು ಹಳ್ಳದ ನೀರಿನ ಜೊತೆಗೆ ಮೀನುಗಳು ಹರಿದು ಹೋಗುತ್ತಿದ್ದರೆ ಜನ ಮೀನಿಗಾಗಿ ಮುಗಿಬಿದ್ದಿದ್ಧಾರೆ.. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದ ಹಳ್ಳದಲ್ಲಿ ಮೀನುಗಳು ಹರಿದು ಬರುತ್ತಿವೆ. ಇದನ್ನು ಕಂಡ ಜನರು ಮೀನುಗಳನ್ನು ಹಿಡಿಯುವುದಕ್ಕಾಗಿ ಬಲೆಗಳನ್ನು ಹಾಕಿದ್ದಾರೆ. ಅಲ್ಲದೇ ಮನೆಯಲ್ಲಿ ಮೀನಿನ ಬಲೆ ಇಲ್ಲದವರು ಸೊಳ್ಳೆ ಪರದೆಗಳನ್ನು ಹಿಡಿದುಕೊಂಡು ಬಂದು ಮೀನುಗಳಿಗೆ ಬಲಿ ಹಾಕಿದ್ಧಾರೆ. ಹಳ್ಳದ ನೀರು ಹರಿದು ಹೋಗುವ ಕಡೆ ನೂರಾರು ಜನ ಮೀನುಗಳನ್ನು ಹಿಡಿದು ಚೀಲಗಳಲ್ಲಿ ತುಂಬಿಕೊಳ್ಳುತ್ತಿದ್ಧಾರೆ. ಫ್ರೀಯಾಗಿ ಮೀನುಗಳು ಸಿಗುತ್ತಿರುವುದರಿಂದ ರುವ ಕೆಲಸಗಳನ್ನು ಬದಿಗೊತ್ತಿ ಮೀನು ಹಿಡಿಯಲು ಹಳ್ಳಕ್ಕೆ ಬರುತ್ತಿದ್ದಾರೆ.ಹಳ್ಳದಲ್ಲಿ ನೀರಿನೊಂದಿಗೆ ಬರುತ್ತಿರುವ ಮೀನುಗಳನ್ನು ಹಿಡಿದು ಚೀಲಗಳಲ್ಲಿ ಸಂಗ್ರಹ ಮಾಡುತ್ತಿದ್ಧಾರೆ. ಕೆರೆಗಳನ್ನು ಮೀನುಗಾರಿಕೆ ಇಲಾಖೆಯವರು ಮರಿಗಳನ್ನೂ ಸಹ ಸಾಕುತ್ತಾರೆ. ಆದರೆ ಅವೆಲ್ಲವೂ ಭರ್ಜರಿ ಮಳೆಗೆ ಕೊಚ್ಚಿ ಹೋಗುತ್ತಿವೆ. ಕಾಲುವೆ ಪಕ್ಕದ ರಸ್ತೆಗಳೂ ಸಹ ಬಿದ್ದ ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿವೆ.ಇದರಿಂದ ಎಷ್ಟೋ ಗ್ರಾಮಗಳಿಗೆ ಸಂಪರ್ಕವೇ ತಪ್ಪಿ ಹೋಗಿದೆ. ಸುರಿದ ಭಾರೀ ಮಳೆಗೆ ಕೊಪ್ಪಳ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಹಿಂಗಾರು ಮಳೆ ಕೊಪ್ಪಳ ಜಿಲ್ಲೆಯಾಧ್ಯಂತ ಜೋರಾಗಿಯೇ ಸುರಿಯುತ್ತಿದ್ದು ಒಂದೆಡೆ ಹಳ್ಳಕೊಳ್ಳಗಳು ತುಂಬಿ ಹರಿಯುವುದರ ಮೂಲಕ ಸಂತಸ ಮೂಡಿಸುತ್ತಿದ್ದರೆ ಇನ್ನೊಂದೆಡೆ ಹೊಲಗದ್ದೆಗಳಿಗೆ ನುಗ್ಗಿ ಆವಾಂತರ ಸೃಷ್ಟಿಸಿವೆ. ಕಳಪೆ ಕಾಮಗಾರಿಯ ದರ್ಶನ ಮಾಡಿಸಿವೆ. ಜೊತೆಗೆ ಹಳ್ಳಗಳ, ಕೆರೆಗಳ ನೀರಿನಲ್ಲಿ ತೇಲು ಬರುತ್ತಿರುವ ಮೀನುಗಳು ಜನಸಾಮಾನ್ಯರ ಹೊಟ್ಟೆ ತುಂಬಿಸುತ್ತಿವೆ. ಜನ ಮೀನುಗಳನ್ನು ಹಿಡಿದು ಸಂಭ್ರಮಿಸುತ್ತಿದ್ದಾರೆ.

Related posts