ಹನುಮಾನ್ ಟ್ರಸ್ಟ್‌ಗೆ ನೇಮಕ


ಕೊಪ್ಪಳ: ನಗರದ ಹಟಗಾರಪೇಟೆಯಲ್ಲಿರುವ ಶ್ರೀ ಹನುಮಾನ್ ಸೇವಾ ಟ್ರಸ್ಟ್‌ಗೆ ಪದಾಧಿಕಾರಿಗಳನ್ನು ಶನಿವಾರ ಅಧಿಕೃತವಾಗಿ ಪ್ರಕಟಿಸಲಾಯಿತು.
ಟ್ರಸ್ಟ್‌ನ ಗೌರವಾಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಗವಿಸಿದ್ದಪ್ಪ ಚಿನ್ನೂರ ಹಾಗೂ ಅಧ್ಯಕ್ಷರನ್ನಾಗಿ ಶಿವಕುಮಾರ ಹಕ್ಕಾಪಕ್ಕಿ ಅವರ ನೇಮಕಾತಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಟ್ರಸ್ಟ್‌ನ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಹೀಗಿದ್ದಾರೆ:
ಉಪಾಧ್ಯಕ್ಷರಾಗಿ ಬಸವರಾಜ ಮಲ್ಲಪ್ಪ ಮುತ್ತಾಳ, ಮಹೇಶ ಅಂಗಡಿ, ಹಾಲೇಶ ಕಂದಾರಿ ಹಾಗೂ ವೆಂಕಟೇಶ ಗೋವಿಂದರಾವ್ ಹವಳೆ; ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಣೇಶ ಆರ್. ಮಹೇಂದ್ರಕರ, ಕಾರ್ಯದರ್ಶಿಯಾಗಿ ಶ್ರೀಶೈಲ ಪಲ್ಲೇದ, ಸಹ ಕಾರ್ಯದರ್ಶಿಯಾಗಿ ರವಿಂದ್ರಸಾ ನಾರಾಯಣಸಾ ಬಾಕಳೆ, ಖಜಾಂಚಿಯಾಗಿ ಮಲ್ಲಿಕಾರ್ಜುನ ಸಜ್ಜನ, ಕಾನೂನು ಸಲಹೆಗಾರರಾಗಿ ಶಂಕರ ಸಿ. ಸಿಂಗ್ರಿ ಅವರನ್ನು ನೇಮಿಸಲಾಯಿತು. ಸಲಹೆಗಾರರಾಗಿ ಈರಣ್ಣ ಬಂಡಾನವರ ಮತ್ತು ದೇವರಾಜ ಹಾಲಸಮುದ್ರ ಹಾಗೂ ಪತ್ರಿಕಾ ಪ್ರತಿನಿಧಿಯಾಗಿ ಚಾಮರಾಜ ಸವಡಿ ಅವರ ಹೆಸರುಗಳನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ನಿಂಗಪ್ಪ ಹನುಮಂತಪ್ಪ ಸುಣಗಾರ, ಜಗದೀಶ ಗೌಡ್ರ ತೆಗ್ಗಿನಮನಿ, ಶಂಬುನೌಡ ಪಾಟೀಲ, ಕಿರಣ ದಿವಟರ, ಪರಸಪ್ಪ ಭುಂಜಗರ, ಮಾರುತಿ ಹದ್ದಿನ, ಗೊಪಾಲಕೃಷ್ಣ ಹೊಸಅಂಗಡಿ, ಮರಿಸ್ವಾಮಿ ಅಬ್ಬೆ ಹಾಗೂ ಚನ್ನಬಸಪ್ಪ ಹನುಮಂತಪ್ಪ ಹೊಳ್ಳೆಪನವರ ಇದ್ದರು.

Please follow and like us:
error