ಹನುಮಂತಪ್ಪ ಅಂಗಡಿ ನಿಧನ

ಕೊಪ್ಪಳ: ಅಖಂಡ ರಾಯಚೂರು ಜಿಲ್ಲೆಯ ಜನತಾ ದಳ ಜಿಲ್ಲಾಧ್ಯಕ್ಷರಾಗಿದ್ದ ಕುರುಬ ಸಮಾಜದ ಮುಖಂಡ ಹನುಮಂತಪ್ಪ ಅಂಗಡಿ (೭೧) ಶನಿವಾರ ಬೆಳಗಿನ ಜಾವ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಹನುಮಂತಪ್ಪ ಅವರು ೧೯೯೪ರಲ್ಲಿ ಕೊಪ್ಪಳ ವಿಧಾನ ವಿಧಾನ ಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ೧೯೯೬ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇತ್ತೀಚೆಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಸಂಗಣ್ಣ ಕರಡಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಜಿ.ಪಂ.ಅಧ್ಯಕ್ಷ ರಾಜಶೇಖರ ಹಿಟ್ನಾಳ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಶಿವರಾಮಗೌಡ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಕೆ.ಬಸವರಾಜ ಹಿಟ್ನಾಳ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಮುಖಂಡರಾದ ವೈ.ಎನ್.ಗೌಡರ್, ಮಲ್ಲಣ್ಣ ಪಲ್ಲೇದ್, ವೀರೇಶ ಸಾಲೋಣಿ, ಜಿ.ಪಂ.ಸದಸ್ಯರು, ನಗರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಸೇರಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಮೃತರ ಹುಟ್ಟೂರು ಓಜನಹಳ್ಳಿಯ ತೋಟದಲ್ಲಿ ಶನಿವಾರ ಸಂಜೆ ಅಂತಿಮ ಸಂಸ್ಕಾರ ಜರುಗಿತು.

Please follow and like us:
error