ಹಡಪದ ಸಮಾಜ ಸಂಘದಿಂದ ಮನವಿ

ಹಡಪದ ಸಮಾಜ ಸಂಘದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಹಡಪದ ಸಮಾಜ ಸಂಘದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಕೊಪ್ಪಳ: ಹಡಪದ ಸಮಾಜದವರು ಹಡಪದ, ನಾವಿ, ನಾವಲಿಗ, ಕ್ಷೌರದ, ಕ್ಷೌರಿಕ ನಾಯಿಂದ್, ನಾಂದರ, ಹೀಗೆ ಆಯಾ ಭಾಗಗಳಲ್ಲಿ ಆಯಾ ಪದಗಳಿಂದ ಕರೆಯಿಸಿಕೊಳ್ಳುವ ಹಡಪದ ಸಮಾಜದವರ ಮೂಲ ವೃತ್ತಿ ಕ್ಷೌರ ಮಾಡುವುದು. ವೃತ್ತಿ ನಿರತ ಹಡಪದವರಿಗೆ ಸಾಮಾಜಿಕ ನ್ಯಾಯ ವಿಲ್ಲದೆ ನಾನಾ ತೊಂದರೆಗಳಲ್ಲಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ಸಾಮಾಜಿಕ ಅಭದ್ರತೆಯಲ್ಲಿ ಬದುಕುತ್ತಿರುವ ಹಡಪದ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡಬೇಕೆಂದು ಈ ಮೂಲಕ ವಿನಂತಿಸುತ್ತಾ ಈ ಕೆಳಕಂಡ ಬೇಡಿಕೆಗಳನ್ನು ತಮ್ಮ ಮುಂದಿಡುತ್ತಿದ್ದೇವೆ. ತಾವು ನಮ್ಮ ಸಮಾಜಕ್ಕೆ ಸಾಮಾಜಿಕ ಅಸಮತೋಲನ ನಿವಾರಿಸಿ ಸಮಾಜವನ್ನು ಮುಖ್ಯವಾಹಿನಿಗೆ ತರುವಿರೆಂದು ಭಾವಿಸಿದ್ದೇನೆ.  
ಬೇಡಿಕೆಗಳು: ೧. ಹಡಪದ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ೨. ಬಸವಣ್ಣನವರು ಸಮಾಕಾಲಿನ ಶರಣ, ಬಸವಣ್ಣನವರ ಆಪ್ತ ಕಾರ್ಯದರ್ಶಿ ಶರಣ ಹಡಪದ ಅಪ್ಪಣ್ಣನವರ ಮತ್ತು ಶರಣ ನೀಲಮ್ಮ ತಾಯಿಯವರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವೆಂದು ಘೋಶಿಸುವುದು. ೩. ಕೇಂದ್ರ ಸರಕಾರವು ತನ್ನ ಗೆಜೇಟ್ ದಿ: ೧೬/೦೬/೨೦೧೧ ರಲ್ಲಿ ಪ್ರಕಟಿಸಿದಂತೆ ಕರ್ನಾಟಕ ಸರಕಾರವು ತನ್ನ ಗೆಜೇಟ್ ಪ್ರವರ್ಗ – ೨ಎ, ನಲ್ಲಿ ಹಡಪದ ಸಮಾಜಕ್ಕೆಇರುವ ಗೊಂದಲವನ್ನು ಸರಿಪಡಿಸಬೇಕು. ೪. ಬೆಂಗಳುರು ನಗರದಲ್ಲಿ ಹಡಪದ ಸಮಾಜಕ್ಕೆ ಸಮುದಾಯ ಭವನ ಹಾಗೂ ಉಚಿತ ವಸತಿ ನಿಲಯ ಪ್ರಾರಂಭಿಸಲು ನಿವೇಶನ ಮತ್ತು ಜನ ಸಹಾಯ ಒದಗಿಸುವುದು. ಈ ಸಂದರ್ಭದಲ್ಲಿ ಮಂಜುನಾಥ ಹಂದ್ರಾಳ, ದ್ಯಾಮಣ್ಣ ಮಾದಿನೂರ, ಪ್ರಕಾಶ ದದೇಗಲ್, ವೀರುಫಾಕ್ಷಿ ಹಾಸಗಲ್, ಮಂಜುನಾಥ ಜವಳಗೇರಿ, ಗುಡದಪ್ಪ ಕೋಳೂರ, ಮಹೇಶ ಮಾದಿನೂರ ಸೇರಿದಂತೆ ಇತರರು ಇದ್ದರು.

Please follow and like us:
error