ಹಗಲು ಯೋಗಕ್ಷೇಮ ಕೇಂದ್ರಗಳ ಆರಂಭ: ಸಂಘ ಸಂಸ್ಥೆಗಳಿAದ ಪ್ರಸ್ತಾವನೆಗೆ ಆಹ್ವಾನ

ಕೊಪ್ಪಳ ಮೇ. : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ 3 ರಿಂದ 25 ವರ್ಷದೊಳಗಿನ ಆಟಿಸಂ, ಬುದ್ಧಿಮಾಂದ್ಯರು, ಸೆರೆಬ್ರಲ್ ಪಾಲ್ಸಿ ಹಾಗೂ ತೀವ್ರತರನಾದ ವಿಕಲಚೇತನರಿಗೆ ಹಗಲು ಯೋಗಕ್ಷೇಮ ಕೇಂದ್ರಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದು,  ಜಿಲ್ಲಾ ವ್ಯಾಪ್ತಿಯಲ್ಲಿರುವ ಆಸಕ್ತ ನೊಂದಾಯಿತ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿAದ ಪ್ರಸ್ತಾವನೆಗಳನ್ನು ಅಹ್ವಾನಿಸಲಾಗಿದೆ.
ಸರ್ಕಾರದ ಆದೇಶದನ್ವಯ 4 ವಿಭಾಗದ ಆಯ್ದ ಜಿಲ್ಲೆಗಳಲ್ಲಿ ತಲಾ ಒಂದರAತೆ ಹಗಲು ಯೋಗಕ್ಷೇಮ ಕೇಂದ್ರಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ರಾಜ್ಯ ಮಟ್ಟದಲ್ಲಿ ಆಯ್ಕೆ ಸಮಿತಿ ಮೂಲಕ ಆಯ್ಕೆಯಾಗುವ ಸಂಸ್ಥೆಗೆ ವಿಕಲಚೇತನರ ಹಗಲು ಯೋಗಕ್ಷೇಮ ಕೇಂದ್ರಗಳನ್ನು ನಡೆಸಲು ತೀವ್ರತರ ವಿಕಲಚೇತನರ ಪ್ರತಿ ಕೇಂದ್ರಗಳಲ್ಲಿ ಗರಿಷ್ಠ 25 ಮಕ್ಕಳಿಗೆ ವಾರ್ಷಿಕ ರೂ. 25 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗುವುದು. ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ನೋಂದಾಯಿತ ಸ್ವಯಂ ಸೇವಾ ಸಂಸ್ಥೆಗಳು, ತಮ್ಮ ಪರಿಪೂರ್ಣ ಪ್ರಸ್ತಾವನೆಯನ್ನು ಮೇ.30 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಮಹೇಶ್ ಎಚ್.ರಡ್ಡೇರ್ ಬಿಲ್ಡಿಂಗ್, ಗವಿಶ್ರೀ ನಗರ, ಕೆ.ಇ.ಬಿ ಗ್ರೀಡ್ ಹತ್ತಿರ, ಮಂಗಳ ಆಸ್ಪತ್ರೆ ಹಿಂದುಗಡೆ, ಹೊಸಪೇಟೆ ರಸ್ತೆ, ಕೊಪ್ಪಳ ಈ ವಿಳಾಸಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಅಪೂರ್ಣ ಹಾಗೂ ಅವಧಿ ಮೀರಿ ಬಂದ  ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ನಿಗದಿತ ಅರ್ಜಿ ನಮೂನೆ, ಮಾರ್ಗಸೂಚಿ, ಚೆಕ್‌ಲಿಸ್ಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error