ಹಂಪಿ ಉತ್ಸವಕ್ಕಾಗಿ ಭಿಕ್ಷೆ ಬೇಡಿದ ಕರವೇ ಮಾತೃಭೂಮಿ ಸಂಘಟನೆ

*ಹಂಪಿ ಉತ್ಸವಕ್ಕಾಗಿ ಭಿಕ್ಷೆ ನೀಡಿ. : ಕರವೇ ಮಾತೃಭೂಮಿ ಸಂಘಟನೆಯಿಂದ ಗಂಗಾವತಿಯಲ್ಲಿ ವಿನೂತನ ಪ್ರತಿಭಟನೆ.*

ಗಂಗಾವತಿ : ದಿ. 02-12-18 ಗಂಗಾವತಿ
ಬರ ಮತ್ತು ಅನುದಾನ ಕೊರತೆ ಕಾರಣ ನೀಡಿ ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಯನ್ನು ಮುಂದೂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಾತೃಭೂಮಿ ಸಂಘಟನೆಯ ಪದಾಧಿಕಾರಗಳು ಗಂಗಾವತಿ ನಗರದ ಪ್ರಮುಖ ವೃತ್ತದಲ್ಲಿ ಭಿಕ್ಷೆ ಬೇಡಿ ಸರಕಾರಕ್ಕೆ ಕಳುಹಿಸಿ ಹಂಪಿ ಉತ್ಸವವನ್ನು ಆಚರಿಸಲು ಆಗ್ರಹಿಸಿದರು.
ಕರವೇ ಮಾತೃಭೂಮಿ ಸಂಘಟನೆಯ ರಾಜ್ಯಧ್ಯಕ್ಷರಾದ ಎಸ್.ಹೆಚ್.ಮುಧೋಳ ಮಾತನಾಡಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರು ಹಳೆಮೈಸೂರು ಭಾಗದ ಎಲ್ಲ ಉತ್ಸವಗಳನ್ನು ಅಧ್ದೂರಿಯಾಗಿ ಆಚರಿಸಿ ಹಿಂದುಳಿದ ಭಾಗವಾದ ಹೈದ್ರಾಬಾದ್ ಕರ್ನಾಟಕದ ಎಲ್ಲ ಉತ್ಸವಗಳಿಗೆ ಬರಗಾಲದ ಕುಂಟುನೆಪ ಹೇಳಿ ಆನೆಗೊಂದಿ ಉತ್ಸವ ಕನಕಗಿರಿ ಉತ್ಸವ ಹಾಗು ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಯನ್ನು ನಿರಾಕರಿಸುತ್ತಿರುವುದು ಈ ಭಾಗದ ಕಲಾವಿದರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಅದಕ್ಕಾಗಿ ನಾವು ಭಿಕ್ಷೆಬೇಡಿ ಹಣ ಕ್ರೂಡಿಕರಿಸಿ ಸರಕಾರಕ್ಕೆ ಕಳುಹಿಸತ್ತೇವೆ ಆ ಹಣದಿಂದ ಉತ್ಸವ ಆಚರಿಸಲಿ ಎಂದರು. ಶೀಘ್ರವಾಗಿ ಉತ್ಸವ ಆಚರಣೆಗಾಗಿ ಸೂಕ್ತ ಅನುದಾನ ನೀಡಿ ದಿನಾಂಕ ನಿಗದಿ ಪಡಿಸದಿದ್ದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Please follow and like us:
error