You are here
Home > Koppal News > ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ ೧೨೫ನೇ ವರ್ಷಾಚರಣೆ..

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ ೧೨೫ನೇ ವರ್ಷಾಚರಣೆ..

Gangavati News  ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ ೧೨೫ ನೇ ವರ್ಷಾಚರಣೆಯ ಸಂದರ್ಭದಲ್ಲಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಪನ್ಯಾಸಕರಾದ ಪವನ ಕುಮಾರ ಗುಂಡೂರ್ ಮಾತನಾಡುತ್ತಾ ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡರೆ ಭರತ ದೇಶದ ಭವಿಷ್ಯವನ್ನು ಬರೆಯುವವರು ನೀವಾಗುತ್ತೀರಿ. ಸತತ ಅಧ್ಯಯನ ಪರಿಶ್ರಮದ ಫಲವಾವಿ ಸಾಧನೆಯಾಗುತ್ತದೆ.ಸ್ವಾಮಿ ವಿವೇಕಾನಂದರು ಎಷ್ಟೊಂದು ಕಷ್ಟಗಳ ಮಧ್ಯೆ ಅಮೇರಿಕಾದ ಚಿಕಾಗೋ ಮತ್ತು ಪ್ರಪಂಚದ ಇತರೆ ದೇಶಗಳಲ್ಲಿ ಭಾರತದ ಸಂಸ್ಕೃತಿಯನ್ನು ಸಾರಿದವರು. ಅಷ್ಟೆಲ್ಲಾ ಸಾಧನೆಯ ಹಿಂದೆ ಗುರುಗಳಾದ ರಾಮಕೃಷ್ಣ ಪರಮಹಂಸರ ಪರಿಶ್ರಮವಿದೆ. ಗುರು ಮತ್ತು ಗುರಿ ನಿಮ್ಮದಾಗಲಿ ಸಾಧನೆ ನಿಮ್ಮದಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಕೃಷ್ಣಮೂರ್ತಿ ವಹಿಸಿಕೊಂಡಿದ್ದರು. ಎನ್.ಎಸ್.ಎಸ್. ಘಟಕದ ಕಾರ್ಯಕ್ರ,ಮಾಧಿಕಾರಿ ಸೋಮಶೇಖರಗೌಡ ಪ್ರಾಸ್ತಾವಿಕವಾಗಿ ಮಾತಾಡಿದರು. ಕಾಲೇಜಿನ ಉಪನ್ಯಾಸಕ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಂಥಪಾಲಕರಾದ ರಮೇಶ ಗಬ್ಬೂರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Top