ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿ-ಹೆಚ್.ಹೆಚ್.ಜಂತ್ಲಿ

ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ವಿಚಾರಗಳು ಯುವಕರಿಗೆ ಸ್ಪೂರ್ತಿ ಮತ್ತು ಪ್ರೇರಕ ಎಂದು ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಹೆಚ್.ಹೆಚ್.ಜಂತ್ಲಿ ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ಯುವ ಸ್ಪಂದನ ಕೊಪ್ಪಳ, ಗ್ರಾಮ ಪಂಚಾಯತ ಕಾತರಕಿ-ಗುಡ್ಲಾನೂರ, ಶ್ರೀ ತಾಯಮ್ಮದೇವಿ ಭಜನಾ ಯುವಕ ಸಂಘ(ರಿ), ಕಾತರಕಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಚಿಕ್ಯಾಗೊ ಭಾಷಣದ ೧೨೫ನೇ ವರ್ಷದ ವರ್ಷಾಚರಣೆ ಹಾಗೂ ಜಾನಪದ ಸಂಗೀತ ಕಾರ್ಯಕ್ರಮದಲ್ಲಿ ಯುರೋಪಿಯನ್ನರ ಕಣ್ಣು ತೆರೆಸಿದ ವಿವೇಕಾನಂದರು ಮತ್ತು ಯುವ ಜನತೆ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು..

ಭಾರತ ಎಂದರೆ ಒಂದು ಬಡ ದೇಶ ಎನ್ನುವಂತಹ ಕೀಳಿರಿಮೆ ವಿವಿಧ ದೇಶಗಳಲ್ಲಿ ಮೂಡಿದ ಅಪನಂಬಿಕೆಯನ್ನು ತಮ್ಮ ಭಾಷಣದ ಮೂಲಕ ತೊಡೆದು ಹಾಕಿದರು. ನಮ್ಮ ದೇಶದ ಅಭಿವೃದ್ದಿ ಮತ್ತು ಸಂಸ್ಕೃತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು. ಅಂತಹ ಮಹಾತ್ಮನು ಯುವಕರಿಗೆ ಆದರ್ಶ ಎಂದರು ನಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ.ಜಿ.ನಾಡಿಗೇರ ಹಾರ್ಮೋನಿಯಂ ನುಡಿಸುವ ಮೂಲಕ ಜಾನಪದ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನೈಜವಾದ ಸಂಗೀತವನ್ನು ಇಂದಿನ ಪೀಳಿಗೆ ಮರೆತು ಪಾಶ್ಚಾತ್ಯ ಸಂಗೀತಕ್ಕೆ ಮಾರು ಹೋಗಿದ್ದಾರೆ. ಆದ್ದರಿಂದ ನಮ್ಮ ನಾಡಿನ ಅಮೂಲ್ಯ ಸಂಪತ್ತು ಜಾನಪದ, ಬಯಲಾಟ, ಗೀ ಗೀ ಪದ, ಲಾವಣಿ ಪದ, ಹಂತಿ ಪದ ಮರೆಯಾಗುತ್ತಿವೆ. ಅವುಗಳನ್ನು ಯುವಕರು ಮರುಕಳಿಸುವಂತೆ ಮಾಡುವುದು ಅಗತ್ಯವಿದೆ. ಚಿಕ್ಯಾಗೋ ಭಾಷಣದ ಕಾರ್ಯಕ್ರಮದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅರ್ಥ ಪೂರ್ಣ ಎಂದು ನುಡಿದರು. ಇದಕ್ಕೂ ಪೂರ್ವದಲ್ಲಿ ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಕಲ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿವಯ್ಯ ಸಾಲಿಮಠ ತತ್ವಪದಗಳನ್ನು ಹಾಡಿದರು, ಶಿವಪುತ್ರಪ್ಪ ತಳವಾರರಿಂದ ಬಯಲಾಟ ಹಾಡುಗಳು, ಯಂಕಪ್ಪ ಪೂಜಾರವರಿಂದ ಹಂತಿ ಪದಗಳು, ಜಾನಪದ ಗೀತೆಗಳನ್ನು ಮಹೇಶ ತಳವಾರ, ಕೊಟ್ರಪ್ಪ ಕೊರ್ಲಳ್ಳಿ, ಬಸಯ್ಯ ಅಬ್ಬಿಗೇರಿಮಠ, ಬಸವರೆಡ್ಡಿ ಬನ್ನಿಗೊಳ ಹಾಡಿದರು. ಸಂಜೀವಪ್ಪ ಕಾಳಿ ಭಜನಾಪದ ಹಾಡಿದರು. ಬಸಣ್ಣ ಬೋಚನಹಳ್ಳಿ ಭಜನಾಪದ ಹಾಡಿದರು. ವಿರುಪಣ್ಣ ಹಳ್ಳಿಕೇರಿ ತಂಡದವರಿಂದ ಗೀ ಗೀ ಪದ ಕಾರ್ಯಕ್ರಮಗಳು ನಡೆದವು. ಫಕೀರಪ್ಪ ತಿಗರಿ ತಬಲಾ ಸಾಥ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಗ್ರಾ.ಪಂ.ಮಾಜಿ ಅಧ್ಯಕ್ಷ ಯಲ್ಲನಗೌಡ ಮಾಲಿಪಾಟೀಲ, ಕಾಲೇಜಿನ ಪ್ರಾಚಾರ್ಯ ಐ.ಎಂ.ಚಿಕ್ಕರೆಡ್ಡಿ, ಶಂಕರಗೌಡ ನಾಗನಗೌಡ್ರ, ಮಲ್ಲಪ್ಪ ಮಹಾಂತಪ್ಪನವರ, ಶೇಖರಪ್ಪ ವಡ್ಡಟ್ಟಿ, ಸತ್ಯಣ್ಣ ಶಾನಬೋಗ, ಶಿಕ್ಷಕ ಎನ್.ಎಸ್.ಪಾಟೀಲ, ಗ್ರಾ.ಪಂ.ಸದಸ್ಯರಾದ ನಾಯಕಪ್ಪ ತಳವಾರ, ಭರಮಪ್ಪ ಹುರಿಜೋಳ ಇತರರು ಉಪಸ್ಥಿತರಿದ್ದರು. ಜಗದಯ್ಯ ಸಾಲಿಮಠ ನಿರೂಪಿಸಿದರು, ಕಾರ್ಯದರ್ಶಿ ಫಕೀರೇಶ ಕಮ್ಮಾರ ಸ್ವಾಗತಿಸಿ ವಂದಿಸಿದರು.

Please follow and like us:
error