ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿದ್ದು ಕ್ವಿಟ್ ಇಂಡಿಯಾ ಚಳುವಳಿ – ನಿವೃತ್ತ ಉಪನ್ಯಾಸಕ, ಡಿ.ಎಂ.ಬಡಿಗೇರ


ದಿನಾಂಕ: ೯ ರಂದು ಸ.ಪ.ಪೂ.ಕಾಲೇಜು ಪ್ರೌಢ ವಿಭಾಗ ಭಾಗ್ಯನಗರದಲ್ಲಿ ಸಾ.ಶಿ.ಇ ಸಂಯುಕ್ತ ಆಶ್ರಯದಲ್ಲಿ ಕ್ವಿಟ್ ಇಂಡಿಯಾ ದಿನ ಆಚರಿಸಲಾಯಿತು. ರಾಷ್ಟ್ರಧ್ವಜಾರೋಹಣವನ್ನು ಶ್ರೀ ಸುರೇಂದ್ರಗೌಡ ಪಾಟೀಲ ಉಪಪ್ರಾಂಶುಪಾಲರು ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಸುಜಾತಾ ಜಟ್ಟರ ವಿಷಯ ಪರಿವೀಕ್ಷಕರು ಸಾ.ಶಿ.ಇ ಕೊಪ್ಪಳ ನೆರವೇರಿಸಿದರು. ಪ್ರಾಸ್ತಾವಿಕವಾಗಿ   ಸೋಮಶೇಖರ.ಚ.ಹರ್ತಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಭಾರತ ಸೇವಾದಳ ಮಾತನಾಡಿ ಸೇವಾದಳದ ಶಿಕ್ಷಣವನ್ನು ಶಾಲಾ-ಕಾಲೇಜುಗಳಲ್ಲಿ ನೀಡುವುದರಿಂದ ಮಕ್ಕಳಲ್ಲಿ ದೇಶ ಪ್ರೇಮ ರಾಷ್ಟ್ರಾಭಿಮಾನ ಹೆಚ್ಚುತ್ತದೆ ಎಂದರು.
ಡಿ.ಎಂ.ಬಡಿಗೇರ ನಿವೃತ್ತ ಉಪನ್ಯಾಸಕರು ಕ್ವಿಟ್ ಇಂಡಿಯಾ ಚಳುವಳಿ ಕುರಿತು ವಿಶೇಷ ಉಪನ್ಯಾಸ ನೀಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಕ್ವಿಟ್ ಇಂಡಿಯಾ ಚಳುವಳಿ ಇತಿಹಾಸ ಅಧ್ಯಯನದಿಂದ ನಮ್ಮ ಪೂರ್ವಜರ ಹೋರಾಟ ಶ್ರಮ, ಬಲಿದಾನ ಕುರಿತು ತಿಳಿಯುತ್ತದೆ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಅಧ್ಯಯನ ಶೀಲರಾಗಲು ಕರೆ ನೀಡಿದರು.
ದ್ಯಾಮಣ್ಣ ಚಿಲವಾಡಗಿ ಜಿಲ್ಲಾ ಕಾರ್ಯದರ್ಶಿ ಭಾರತ ಸೇವಾದಳ ಸಾಂದರ್ಭಿಕವಾಗಿ ಮಾತನಾಡಿ ಅಂಡಮಾನ ಮತ್ತು ನಿಕೋಬಾರ ದ್ವೀಪಗಳಲ್ಲಿ ಸಂಭವಿಸಿ ಸುನಾಮಿ ಹಾಗೂ ಕೊಡಗಿನಲ್ಲಿ ನೆರೆ ಹಾವಳಿ ಆದಾಗ ಕೊಪ್ಪಳ ಜಿಲ್ಲೆಯ ಸೇವಾದಳದ ಶಾಖಾ ನಾಯಕರು ಸೇವೆ ಸಲ್ಲಿಸಿದ್ದನ್ನು ನೆನಪಿಸಕೊಳ್ಳುತ್ತಾ ಸೇವಾದಳ ವಿಶೇಷ ಸಂದರ್ಭಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ ಎಂದರು. ಗಾದಿಲಿಂಗಪ್ಪ ಜಿಲ್ಲಾ ಸಂಘಟಿಕರು ಭಾರತ ಸೇವಾದಳ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ಜಜ ಆರೋಹಣ, ಅವರೋಹಣ ವಿಧಿ ವಿಧಾನಗಳ ಬಗ್ಗೆ ಪ್ರತ್ಯಕ್ಷ ಶಿಕ್ಷಣ ನೀಡಲಾಯಿತು.  ಸುರೇಂದ್ರಗೌಡ ಪಾಟೀಲ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಭಾರತ ಸೇವಾದಳ ಶಿಕ್ಷಣ ನೀಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಬೇಕೆಂದರು.
ಶ್ರೀಮತಿ ಸುಜಾತಾ ಜಟ್ಟರ ವಿಷಯ ಪರಿವೀಕ್ಷರು ಸಾ.ಶಿ.ಇಲಾಖೆ ಕೊಪ್ಪಳ,  ಮೇರಿ.ಎಚ್.ಕೆ, ಶಿಕ್ಷಕಿ,  ಹುಸೇನಪಾಷಾ ಇಟಗಿ ಶಿಕ್ಷಕರು,  ಡಿ.ಎಂ.ಬಡಿಗೇರ ನಿವೃತ್ತು ಉಪನ್ಯಾಸಕರನ್ನು ಸನ್ಮಾನಿಸಲಾಯಿತು.  ಶರಣಪ್ಪ ಸುರುಳ ಶಿಕ್ಷಕರು  ಮಾರುತೇಶ್ವರ ಸಂಗೀತ ಶಿಕ್ಷಕರು ವರ್ಗಾವಣೆಗೊಂಡು ಬಂದ ಪ್ರಯುಕ್ತ ಇವರನ್ನು ಸ್ವಾಗತಿಸಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಗಾದಿಲಿಂಗಪ್ಪ ಜಿಲ್ಲಾ ಸಂಘಟಿಕರು ಭಾರತ ಸೇವಾದಳ,  ಬಸವರಾಜ ಪಾಟೀಲ, ಅಂಬಾಸ ಸಿದ್ಲಿಂಗ್,  ವೀರಯ್ಯ ಪೂಜಾರ,  ಗೋಪಾಲ ಜೋಶಿ, ಶ್ರೀಮತಿ ಭಾರತಿ ಬಿರಾದರ, ಶರಣಪ್ಪ ಸುರಳ,  ಮಾರುತೇಶ್ವರ,  ಹುಸೇನ ಪಾಷಾ ಇಟಗಿ ಉಪಸ್ಥಿತರಿದ್ದರು.

Please follow and like us:
error