ಸ್ವಯಂಪ್ರೇರಿತ ಗಂಗಾವತಿ ಲಾಕ್ ಡೌನ್ ಗೆ ನಿರ್ಧಾರ- ಪರಣ್ಣ ಮುನವಳ್ಳಿ

ಬೆಳಿಗ್ಗ 6ರಿಂದ 4  ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನಂತರ ಲಾಕಡೌನ್ ಗೆ ನಿರ್ಧಾರ

ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗಂಗಾವತಿ ನಗರದಲ್ಲಿ ಎಲ್ಲಾ ವ್ಯಾಪಾರಸ್ಥರ ಸಹಕಾರ ಮತ್ತು ಸಹಮತದಿಂದ ಮಧ್ಯಾಹ್ನ 4 ಗಂಟೆಯಿಂದ ಲಾಕ್ ಡೌನ್ ಗೆ ನಿರ್ಧರಿಸಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಅವರು ತಮ್ಮ ಕಚೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು, ಜಿಲ್ಲೆಯಲ್ಲಿ ಸೇರಿದಂತೆ ಗಂಗಾವತಿ ನಗರದಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೆ ಕೊರೊನಾ ಪಾಸಿಟಿವ್ ಕಂಡುಬರುತ್ತಿದ್ದು,ಇದಕ್ಕೆ ಕಡಿವಾಣ ಹಾಕಿವುದಕ್ಕೆ ಇನ್ನುಮುಂದೆ ಗಂಗಾವತಿ ನಗರದಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ಗೆ ನಿರ್ಧರಿಸಲಾಗಿದೆ ಎಂದರು. ಈ ನಿರ್ಧಾರಕ್ಕೆ ನಗರದ ಎಲ್ಲಾ ವ್ಯಾಪಾರಸ್ಥರು ಒಮ್ಮತ ವ್ಯಕ್ತಪಡಿಸಿದ್ದು, ಲಾಕ್ ಡೌನ್ ಯಶಸ್ವಿಯಾಗಲಿದೆ ಎಂದರು. ಈ ಸಂಧರ್ಭದಲ್ಲಿ ಗಂಗಾವತಿ ಡಿವೈಎಸ್ಪಿ ಬಿ.ಪಿ ಚಂದ್ರಶೇಖರ, ಗಂಗಾವತಿ ತಹಶಿಲ್ದಾರ ಎಲ್.ಡಿ ಚಂದ್ರಕಾಂತ, ತಾಲೂಕ ಪಂಚಾಯತ್ ಇಓ ಡಾ.ಮೋಹನ್, ಗಂಗಾವತಿ ನಗರ ಪೊಲೀಸ್ ಠಾಣೆ ಪಿಐ ವೇಂಕಟಸ್ವಾಮಿ, ನಗರಸಭೆ ಪೌರಯುಕ್ತ ಶೇಖರಪ್ಪ ಈಳಿಗೇರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು

Please follow and like us:
error