ಸ್ವಚ್ಛ ಮನಸ್ಸು ನಮ್ಮದಾಗಲಿ : ಸಿಂಧೂ ಎಲಿಗಾರ


ಕೊಪ್ಪಳ ಅ. : ಸ್ವಚ್ಛ ಮನಸ್ಸು ನಮ್ಮದಾಗಲಿ ಎಂದು ಕೊಪ್ಪಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಎಲಿಗಾರ ಅವರು ಹೇಳಿದರು.
ಮಹಾತ್ಮ ಗಾಂಧಿಜೀಯವರ ೧೫೦ ನೇ ಜನ್ಮದಿನಾಚರಣೆ ಅಂಗವಾಗಿ ಭಾರತ ಸರಕಾರದ ನೆಹರು ಯುವ ಕೇಂದ್ರ, ಕೊಪ್ಪಳ ಇವರಿಂದ ಸಂಯೋಜನೆಗೊಂಡ ಮಾರುತೇಶ್ವರ ಯುವ ಸಾಂಸ್ಕ್ರತಿಕ ಸೇವಾ ಸಂಘ ಹಾಗೂ ಕಾರ್ಗಿಲ್ ಮಲ್ಲಯ್ಯ ವಿಕಲಚೇತನರ ಯುವ ಸಾಂಸ್ಕೃತಿಕ ಸೇವಾ ಸಂಘ (ರಿ) ಅಳವಂಡಿ ಮತ್ತು ಅಂಗನವಾಡಿ ಕೇಂದ್ರ ಗೌರಿ ಅಂಗಳ ಇವರ ಸಂಯೋಗದಲ್ಲಿ ನಗರದ ಗೌರಿ ಅಂಗಳದಲ್ಲಿ ಇತ್ತೀಚೆಗೆ ಆಯೋಜಿಸಲಾದ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತದ ಕನಸು ನನಸಾಗಲು ನಾವೆಲ್ಲರು ಪ್ರಯತ್ನಿಸಬೇಕು. ಶೌಚಾಲಯ ನಿರ್ಮಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆರೋಗ್ಯಕರ ಜೀವನ ನಡೆಸಲು ಪೌಷ್ಠಿಕ ಆಹಾರ ಅತ್ಯವಶ್ಯಕ. ಸರಕಾರದ ಸೌಲಭ್ಯಗಳ ಯೋಜನೆಗಳ ಬಗ್ಗೆ ಎಲ್ಲರೂ ತಿಳಿದು ಪ್ರಯೋಜನ ಪಡೆದು ಸದೃಡರಾಗಬೇಕು. ಇಲಾಖೆಯ ಕಾರ್ಯಕ್ರಮಗಳು ಯಶಸ್ವಿಯಾಗಲು ಸಹಕರಿಸಬೇಕು ಎಂದು ಕೊಪ್ಪಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧೂ ಎಲಿಗಾರ ಅವರು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರ ಸಭೆ ಸದಸ್ಯೆ ಬಸಮ್ಮ ಅವರು ನೆರವೇರಿಸಿದರು. ಇನ್ನೋರ್ವ ಸದಸ್ಯೆ ಸುನಿತಾ ಗಾಳಿ, ಎ.ಪಿ.ಟಿ.ಯು.ಸಿ. ಯ ಬಸವರಾಜ ಶೀಲವಂತರು, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀದೇವಿ ರೆಡ್ಡಿ, ಆರ್.ಡಿ. ಸಂಸ್ಥೆ ಮೈಸೂರನ ಹೊನ್ನುಂಚಿ ಎಸ್.ಪಿ., ಎ.ಎನ್.ಎಮ್. ಸವಿತಾ, ಲೆಕ್ಕಾಧಿಕಾರಿ ಮಂಜುಳಾ ಮೂಲಿಮನಿ, ನೆ.ಯು.ಕೆ. ಕಾರ್ಯಕರ್ತೆ ಮಮುತಾಜ್ ಅಂಗನವಾಡಿ, ಜಿಲ್ಲಾ ಯುವ ಪ್ರಶಸ್ತಿ ವೀಜೇತ ವೀರೇಶ ಹಾಲಗುಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನೆಹರು ಯುವ ಕೆಂದ್ರದ ಸ್ವಯಂ ಸೇವಕರಾದ ಜ್ಯೋತಿ ಮೂಲಿಮನಿ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Please follow and like us:
error