ಸ್ವಚ್ಛತೆಯಿಂದ ಮಾರಕ ರೋಗಗಳ ತಡೆ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೦೯ ನಗರದ ೨೮ನೇ ವಾರ್ಡಿನ ಹುಡ್ಕೋ ಕಾಲೋನಿಯಲ್ಲಿ ಎಚ್.ಕೆ.ಆರ್.ಡಿ.ಬಿ ಮೈಕ್ರೋ ಯೋಜನೆಯಡಿಯಲ್ಲಿ ೩೦ಲಕ್ಷದ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೆರೆಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಪ್ರತಿಯೊಬ್ಬರು ತಮ್ಮ ಮನೆಯ ಕಂಪೌಂಡ್ ಹಾಗೂ ಮನೆಯ ಅಂಗಳದ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಇತರರು ಸಹ ತಮ್ಮ ಮನೆಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮಾದರಿಯಾಗಬೇಕು. ಇದರಿಂದ ನಿಮ್ಮ ವಾರ್ಡ್ ಹಾಗೂ ನಗರ ಸ್ವಚ್ಛಗೊಂಡರೆ ಜನರ ಪ್ರಾಣಕ್ಕೆ ಕಂಠಕ ತರುವ ಡೆಂಗ್ಯೂ, ಮಲೇರಿಯಾದಂತೆ ಮಾರಕ ರೋಗಗಳನ್ನು ತಡೆಗಟ್ಟಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ತಮ್ಮ ದೈನಂದಿಕ ಚಟುವಟಿಕೆಗಳ ಜೊತೆಗೆ ಸ್ವಚ್ಛತೆಗೆ ಮೊದಲ ಆಧ್ಯತೆ ನೀಡಿದಾಗ ತಮ್ಮ ಜೊತೆಗೆ ನಗರ ಸಭೆಯ ಪೌರ ಕಾರ್ಮಿಕರು ಸಹ ಕೈ ಜೊಡಿಸಲಿದ್ದಾರೆ. ಸರಕಾರ ನೀಡುವ ಅನುದಾನ ಸದ್ಬಳಕೆ ಆದಾಗ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಮಹತ್ವ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಬೋಮರೆಡ್ಡಿ, ಮಾಜಿ ನಗರ ಸಭೆ ಅಧ್ಯಕ್ಷ ಬಸಮ್ಮ ಹಳ್ಳಿಗುಡಿ, ಎ.ಪಿ.ಎಂ.ಸಿ ಸದಸ್ಯ ಜಡಿಯಪ್ಪ ಬಂಗಾಳಿ, ನೇಮರೆಡ್ಡಿ, ಮಾರುತಿ ಗೊಂದಿ, ವೀರಪ್ಪ ಮಠಪತಿ, ಶಂಬು ತಳುವಗೇರಿ, ಶಂಕರ ಬಾಲ, ಮಹೇಶ ಹಳ್ಳಿಗುಡಿ, ಅಭಿಯಂತರರಾದ ಪೋಬಲನ, ಗುತ್ತಿಗೆದಾರರಾದ ಅಜ್ಜಪ್ಪ ಚನ್ನವಡೆಯರ ಮಠ, ಮಂಜುನಾಥ ಗಾಳಿ ವಕ್ತಾರ ಅಕ್ಬರ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error