ಭಾರತೀಯ ಅಂಚೆ ಪಾವತಿ ಬ್ಯಾಂಕ್ ಉದ್ಘಾಟನೆ
ಕೊಪ್ಪಳ: ಗದಗ ಅಂಚೆ ವಿಭಾಗ ಹಾಗು ಭಾರತೀಯ ಅಂಚೆ ಪಾವತಿ ಬ್ಯಾಂಕ್ ಕೊಪ್ಪಳ ಶಾಖೆ ನಿಮ್ಮ ಬ್ಯಾಂಕ್ ನಿಮ್ಮ ಬಾಗಿಲಿಗೆ ಎಂಬ ಹೊಸ ಸೌಲಭ್ಯವನ್ನು ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಉದ್ಘಾಟಿಸಲಾಯಿತು
ಕಾರ್ಯಕ್ರಮವನ್ನು ದಿವ್ಯ ಸಾನಿಧ್ಯ ವಹಿಸಿದ್ದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು. ಭಾರತವನ್ನು ನಾವು ನೋಡಬೇಕಾದರೆ ಅದು ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲಿ ಅಲ್ಲ. ಇಂದು ಸ್ಮಾರ್ಟ್ ಸಿಟಿಕ್ಕಿಂತ ಸ್ಮಾರ್ಟ್ ವಿಲೇಜ ಅಂತ ಅಭಿವೃದ್ದಿ ಆಗಬೇಕಾಗಿದೆ. ಏಕೆಂದರೆ ಭಾರತ ಹಳ್ಳಿಗಳ ನಾಡು ಅಂತ ಹೇಳಿದರು.
ಹಳ್ಳಿಗಳು ಅಭಿವೃದ್ಧಿ ಆಗಬೇಕಾದರೆ ಅಲ್ಲಿ ಕೃಷಿ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಭಾರತದಲ್ಲಿ ೫೦೦೦೦ ಬ್ಯಾಂಕ್ ಗಳ ವ್ಯವಸ್ಥೆ ಇದೆ. ೧ ಲಕ್ಷ ೩೦ ಸಾವಿರ ಪೋಸ್ಟಲ್ ವ್ಯವಸ್ಥೆ ಇದೆ. ಬ್ಯಾಂಕ್ ಗಳು ನಗರಗಳಲ್ಲಿ ಹರಡಿವೆ. ಪೋಸ್ಟಲ್ ಕಚೇರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹರಡಿವೆ. ಕಾರಣ ಈಗ ಅಂಚೆ ಕಚೇರಿಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಆರಂಭ ಮಾಡಿರುವುದು ಹೊಸ ಕ್ರಾಂತಿ ಅಂತ ಹೇಳಿದರು
೨೫೦ ವರ್ಷಗಳ ಇತಿಹಾಸ ಇರುವ ಅಂಚೆಕೇಚೆರಿಗೆ. ಈ ಹಿಂದೆ ಯಾವುದೇ ಮೊಬೈಲ್, ಗಣಕಯಂತ್ರ ತಂತ್ರಜ್ಞಾನ ಇಲ್ಲದೆ ಸಂದರ್ಭದಲ್ಲಿ ಮನೆ ಬಾಗಿಲಿಗೆ ಭಾವನಾತ್ಮಕ ಪತ್ರಗಳನ್ನು ಮುಟ್ಟಿಸುವ ಕೆಲಸ ಮಾಡಿದೆ. ಅದೇ ರೀತಿ ಪ್ರಸಕ್ತ ಬಡವರಿಗಾಗಿ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸುತ್ತಿದೆ. ಅಂದು ಪೋಸ್ಟ್ ಮಾನ್ ಮನೆ ಬಾಗಿಲಿಗೆ ಬಂದು ಪತ್ರ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಇಂದು ಜಾಗತೀಕ ಪೈಪೋಟಿಯಲ್ಲಿ ಕುಗ್ಗದೆ, ಯಾವುದೇ ಸುಂಟರಗಾಳಿ ಬಂದರೂ ಕುಗ್ಗದೆ ಮತ್ತೆ ಇಂತ ಸೇವೆಗೆ ಸಿದ್ದವಾಗಿದೆ ಸಾರ್ವಜನಿಕರು ಇದನ್ನು ಸರಿಯಾಗಿ ಸದ್ಬಳಿಕೆ ಮಾಡಿಕೊಳ್ಳಬೇಕು ಅಂತ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪದವಿ ಕಾಲೇಜಿನ ಪಾಂಶುಪಾಲ ಡಾ. ಸಿ.ಬಿ ಚಿಲ್ಕರಾಗಿ ಮಾತನಾಡಿ, ಇಂದು ಸಿಂಪಲ್ ಲಿವಿಂಗ್ ನಾಶವಾಗುತ್ತಿದೆ. ಒತ್ತಡ ಬದುಕಿನಲ್ಲಿ ಜನರು ಬದುಕುತ್ತಿದ್ದಾರೆ. ಆದರೆ ಅಂಚೆ ಕಚೇರಿ ಅಂದು ಹೇಗಿತ್ತು. ಇಂದಿಗೂ ಅದರ ಸೇವೆಯನ್ನು ವಿಸ್ತಾರ ಮಾಡುತ್ತಿದೆ.ಎಂದರು
ಅಂದು ನಮ್ಮಹಳ್ಳಿಗಳಲ್ಲಿ ಹನುಮನ ದೇವರ ಗುಡಿ ಅಂಚೆ ಕಚೇರಿ ಇವ ಎರಡೆ ನಮಗೆ ದೊಡ್ಡವು. ಅಂದಿನಿಂದ ಇಂದಿನವರೆಗೂ ನಿಸ್ವಾರ್ಥ ಸೇವೆಯನ್ನು ಇದು ಮಾಡಿಕೊಂಡು ಬರುತ್ತಿದೆ. ಈಗ ಮತ್ತೊಂದು ಕ್ರಾಂತಿ ಮಾಡಲು ಹೊರಟಿದೆ ಅಂತ ತಿಳಿಸಿದರು.
ಈ ಸಂದರ್ಭದಲ್ಲಿ ಗವಿಸಿದ್ದೇಶ್ವರ ಎಂಬಿಎ ಕಾಲೇಜಿನ ಅಧ್ಯಕ್ಷ ಸಂಜಯ ಕೊತಬಾಳ, ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಬಿ. ಬಳ್ಳೊಳ್ಳಿ, ಸಹಕರ ಸಂಘದ ಉಪ ನೋಂದಾಯಿತ ಅಧಿಕಾರಿ ಎಂ ಪಿ ಶೆಲ್ಲಿಕೇರಿ, ಚುಸಾಪ ಅಧ್ಯಕ್ಷ ಹನುಮಂತಪ್ಪ ಅಂಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
Please follow and like us: