ಸ್ಪರ್ಧಾತ್ಮಾಕ ಪರೀಕ್ಷೆಗಳ ಸಿದ್ದತೆ ಕುರಿತು ಮಾರ್ಗದರ್ಶನ

ಕೊಪ್ಪಳ: ಅ.೦೫, ರಂದು ಯಲಬುರ್ಗಾ ತಾಲೂಕಿನ ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಾಕ ಪರೀಕ್ಷೆಗಳ ಸಿದ್ದತೆ ಕುರಿತು ಒಂದು ದಿನದ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸ್ಮಾರ್ಟ ಕರಿಯರ್ ಆಕಾಡೆಮಿ ನಿರ್ದೆಶಕರಾದ ಜಿ. ಎರಿಸ್ವಾಮಿಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿ ಪಡೆಯಲು ಆಸಕ್ತಿ, ಶಿಸ್ತು, ಸತತ ಪರಿಶ್ರಮ, ತಾಳ್ಮೆ ಅತ್ಯಗತ್ಯ ಎಂದು ತಿಳಿಸುತ್ತಾ ಪರೀಕ್ಷೆಗಳ ಪಠ್ಯ ವಿಷಯ ಓದಬೇಕಾದ ಕ್ರಮಬದ್ಧ ವಿಧಾನ ಹಾಗೂ ಅವುಗಳನ್ನು ಸುಲಭವಾಗಿ ನೆನಪಿಡಬಲ್ಲ ಹಲವಾರು ಸ್ಮಾರ್ಟ ಸೂತ್ರಗಳ ಬಗ್ಗೆ ವಿವರವಾಗಿ ತಿಳಿಸಿದರು.
ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಿ.ಹೆಚ್. ನಾಯಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಪಡೆಯುವ ನಿಟ್ಟಿನಲ್ಲಿ ಈ ಮಾರ್ಗದರ್ಶನ ಅತ್ಯಂತ ಸಹಕಾರಿಯಾಗಿ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಆಶಾ ಕಿರಣ ಮೂಡಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಣ್ಣಪ್ಪನಾಯಕ, ಮಹಾಂತಪ್ಪ ಕೊಡಗಲಿ, ರಕ್ಷಿತ, ಶರಣಪ್ಪ ಅಡವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error