ಸ್ನಾತಕೋತ್ತರ ಕೇಂದ್ರ : ಕನ್ನಡ ಸಂಘ ಉದ್ಘಾಟನೆ

ಪ್ರಥಮ ವರ್ಷದ ಕನ್ನಡ ಮತ್ತು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಉದ್ಘಾಟನೆ’
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೊಪ್ಪಳದಲ್ಲಿ ಪ್ರಥಮ ವರ್ಷದ ಕನ್ನಡ ಮತ್ತು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ದಿ 11 ರಂದು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕೆ.ಬಿ ಬ್ಯಾಳಿ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾಗತ ಸಮಾರಂಭ ಒಂದು ಪರಂಪರೆಯಾಗಿದ್ದು, ಗುರುಕುಲ ಪದ್ದತಿ ಇಂದ ನಡೆದುಕೊಂಡು ಬಂದಿದೆ. ಇಲ್ಲಿ ಮನುಷ್ಯನ ಆಚರಣೆಗಳು ಬದಲಾಗಿವೆ ಹೊರತು ಪರಂಪರೆ ಬದಲಾಗಿಲ್ಲ ಎಂದು ತಿಳಿಸಿದರು. ಅವರು ಮುಂದುವರೆದು ಮಾತನಾಡುತ್ತಾ ಕನ್ನಡ ಭಾಷೆ ಕನ್ನಡಿಗರೆಲ್ಲರ ಮಾತೃ ಭಾಷೆಯಾಗಿದೆ. ಹರಪ್ಪ ಮತ್ತು ಮಹೆಂಜೋದಾರೊ ನಾಗರಿಕತೆ ಇರುವ ಸಂದರ್ಬದಲ್ಲಿ ಕನ್ನಡ ನಾಡಿನಿಂದ ಬಂಗಾರ ರಫ್ತು ಮಾಡಿರುವ ಸಂಗತಿಯನ್ನು ಸ್ಮರಿಸಿದರು. ಮಾತೃ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು. ಅನೇಕ ರಾಜ ಮನೆತನಗಳು ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಸ್ಥಾನವನ್ನು ವಹಿಸಿದವು. ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನ ಮಾಡುವುದರಿಂದ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ವಿ.ಶ್ರೀ.ಕೃ.ವಿ, ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿಗಳಾದ ಡಾ. ಮನೋಜ್ ಡೊಳ್ಳಿ, ಇವರು ಮಾತನಾಡಿ ಸ್ನಾತಕೋತ್ತರ ಕೇಂದ್ರಕ್ಕೆ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಬೇಕಿದೆ ಎಂದರು, ಸ್ನಾತಕೋತ್ತರ ಕೇಂದ್ರದಿಂದ ನಿರ್ಗಮಿಸುವ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿ ಹೊಂದುವ ಬದಲಾಗಿ ಸಂಪನ್ಮೂಲ ವ್ಯಕ್ತಿಯಾಗಿ ನಿರ್ಗಮಿಸುವಂತೆ ಕರೆ ನೀಡಿದರು.

ಕನ್ನಡ ಮತ್ತು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿ, ಶಿವಕುಮಾರ. ಜಿ, ಶ್ರೀಮತಿ. ಅನ್ನಪೂರ್ಣ, ನೀಲಪ್ಪ ಹುಚ್ಚಣ್ಣನವರ್, ತಿಪ್ಪೇಶ್ ಜಾಲಿಮರದ್, ಡಾ. ಬಸವರಾಜ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಯಮನಪ್ಪ ರಗಡದ್ ಸ್ವಾಗತಿಸಿದರು. ಶ್ರೀದೇವಿ ಚನ್ನಳ್ಳಿ ಪ್ರಾರ್ಥಿಸಿದರು. ಮಹೇಶ್ವರಿ ಅಕ್ಕಸಾಲಿಗ ವಂದಿಸಿದರು.

Please follow and like us:
error