ಸೋಂಕಿನಿಂದ ಗುಣಮುಖಳಾದ ನರ್ಸ್ :  150  ಸಿಬ್ಬಂದಿಯಿಂದ ಅಭೂತಪೂರ್ವ ಸ್ವಾಗತ

ಕೊಪ್ಪಳ : ಕೊರೊನಾ ಸೋಂಕಿನಿಂದ ಗುಣಮುಖಳಾದ ಆರೋಗ್ಯ ಇಲಾಖೆಯ ವಾರಿಯರ್ ಸಿಬ್ಬಂದಿಗೆ ಸೋಮವಾರ ಅಭೂತಪೂರ್ವ ಸ್ವಾಗತ ಸಿಕ್ಕಿತ್ತು.

ಬಹುಶಃ ಕೊಪ್ಪಳ ಜಿಲ್ಲೆಯಲ್ಲಿ ಇಂತಹದ್ದೊಂದು ಸ್ವಾಗತ ಬಹುತೇಕ ಯಾವ ಗುಣಮುಖವಾದ ವ್ಯಕ್ತಿಗೆ ಸಿಕ್ಕಿರಲಿಕ್ಕಿಲ್ಲ. ಇಲ್ಲಿನ ಕ್ವಾರಂಟೈನ್ ಕೇಂದ್ರವಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ

ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಇಡೀ ಆರೋಗ್ಯ ಇಲಾಖೆ ಗಂಗಾವತಿ ತಾಲ್ಲೂಕಿನ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ, ತಾಲ್ಲೂಕು ಆರೋಗ್ಯಾಧಿಕಾರಿ ಶರಣಪ್ಪ ಸೇರಿದಂತೆ 150 ಜನ ಸಿಬ್ಬಂದಿ ಚಪ್ಪಾಳೆ ತಟ್ಟಿ ಸ್ವಾಗತಿಸಿ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.ಅಲ್ಲದೇ ನರ್ಸ್ ಗೆ ಸಹಪಾಠಿಗಳು ಹೂವು ಎರಚಿ ಸ್ವಾಗರಿಸಿದರು.

Please follow and like us:
error