ಸೈಯ್ಯದ್ ಜಿಲಾನಿಪಾಷಾ ಖಾದ್ರಿ ಇವರಿಗೆರಾಜ್ಯ ಮಟ್ಟದ ಜನಸೇವಾರತ್ನ ಪ್ರಶಸ್ತಿ ಪುರಸ್ಕಾರ

ಗಂಗಾವತಿ: ಹೂ ಅಲ್ ಶಿಫಾಹ ವನೌಷಧಿ ಆಯುರ್ವೇದ ವೈದ್ಯಪರಿಷತ್ ಮತ್ತು ಜನಕಲ್ಯಾಣ ಟ್ರಸ್ಟ್ (ರಿ) ಹಾಗೂ “ನಮ್ಮೂರ ಶಾಸಕರು” ರಾಷ್ಟ್ರೀಯ ಕನ್ನಡ ಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ   ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ಶಾದಿಮಹಲ್‌ನ ಸಭಾಂಗಣದಲ್ಲಿ ನಡೆದ ಮಾನವ ಧರ್ಮ ೩ನೇ ಮಾಧ್ಯಮ ಸಮಾವೇಶ ಹಾಗೂ “ಜನಸೇವಾ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಂಗಾವತಿಯ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ  ಸೈಯ್ಯದ್ ಜಿಲಾನಿಪಾಷಾ ಖಾದ್ರಿ ಅವರಿಗೆ ರಾಜ್ಯ ಮಟ್ಟದ ಜನಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸದರಿ   ಸೈಯ್ಯದ್ ಜಿಲಾನಿಪಾಷಾ ಖಾದ್ರಿ ಅವರ ಸಮಾಜ ಸೇವಾ ಕ್ಷೇತ್ರದಲ್ಲಿನ ಅನುಮಪ ಸೇವೆಯನ್ನು ಗುರುತಿಸಿ ಪ್ರೋತ್ಸಾಹದ ರೂಪದಲ್ಲಿ ಈ ಪ್ರಶಸ್ತಿಯನ್ನು ಪ್ರಮಾಣ ಪತ್ರವನ್ನು ಗಣ್ಯ ಮಾನ್ಯರ ಸಮ್ಮುಖದಲ್ಲಿ ನೀಡಲಾಗಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನಸಿನ ಭಾರತ ಪತ್ರಿಕೆಯ ಪತ್ರಕರ್ತರು, ಚಿತ್ರದುರ್ಗ ಜಿಲ್ಲೆಯ ಅಧ್ಯಕ್ಷರು ಕರ್ನಾಟಕ ಶಾಂತಿ ಸೌಹಾರ್ಧ ವೇದಿಕೆಯ   ನರೇನಹಳ್ಳಿ ಅರುಣಕುಮಾರ್, ಅ.ಆಫ್.ಸ್ಮಾಲ್ ಮಿ.ನ್ಯೂಸ್ ಪೇ ಆಫ್ ಇಂಡಿಯಾ (ರಿ) ಬೆಂಗಳೂರಿನ ರಾಜ್ಯಾಧ್ಯಕ್ಷರಾದ   ವೇಣುಗೋಪಾಲ ನಾಯ್ಕ್, ಲಿಂಗಸೂರಿನ ನಮ್ಮೂರು ಶಾಸಕರು ಪತ್ರಿಕೆ ಸಂಪಾದಕರು ಹಾಗೂ ಟ್ರಸ್ಟ್ ಅಧ್ಯಕ್ಷರಾದ ಡಾ. ಜಲಾಲುದ್ದೀನ್ ಅಕ್ಬರ್, ಇಲಕಲ್‌ನ ಲಿಮ್ರಾ ವೆಲ್‌ಫೇರ್ ಅಸೊಸಿಯೇಷನ್ ಅಧ್ಯಕ್ಷರಾದ   ಅಬ್ದುಲ್ ರಜಾಕ್ ತಟಗಾರ್ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ರಾಜ್ಯಾಧ್ಯಕ್ಷರಾದ   ಸಲೀಮ್ ಬೇಗ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

Please follow and like us:
error