ಸೈನಿಕರನ್ನು ಗೌರವದಿಂದ ಕಾಣಿ – ಮಾಜಿ ಸೈನಿಕ ಮಾನಪ್ಪ ಹ್ಯಾಟಿ

ಕೊಪ್ಪಳ : ನಗರದ ಸ್ಮಾರ್ಟ್ ಕರಿಯರ್ ಅಕಾಡೆಮಿ ಕೊಪ್ಪಳ ಸಂಸ್ಥೆಯಲ್ಲಿ ಆಯೋಜಿಸಲಾದ ಕಾರ್ಗಿಲ್ ವಿಜಯೋತ್ಸವದಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜ್ಯೋತಿ ಬೆಳಗಿಸುವದರ ಮುಖಾಂತರ ಹಿರಿಯ ನಿವೃತ್ತ ಸೈನಿಕರಾದ ಮಾನಪ್ಪ ಹ್ಯಾಟಿ ಉದ್ಘಾಟಿಅಇ ಮತನಾಡಿ ೧೯೬೯ ರಂದು ಸೇನೆಗೆ ಸೇರಿಕೊಂಡು ೧೯೭೧ ಮತ್ತು ಜುಲೈ ೨೬ ೧೯೯೯ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲಗೊಂಡಿದ್ದರು ಎಂದು ತಿಳಿಸಿದರು ಜೊತೆಗೆ ಪ್ರತಿಯೊಬ್ಬ ಪ್ರಜೆಯು ಮಾಜಿ ಸೈನಿಕರನ್ನು ಹಾಗೂ ಸೈನಿಕರನ್ನು ಗೌರವದಿಂದ ಕಾಣಿ ಎಂದು ವಿನಂತಿಸಿ ಕೊಂಡರು. ದೇಶದ ರಕ್ಷಣೆಗೆ ಪ್ರತಿ ಪ್ರಜೆಗಳ ಕರ್ತವ್ಯವೆಂದು ತಿಳಿಸಿದರು. ಯುವಕರನ್ನು ಸೈನಕ್ಕೆ ಸೇರುವಂತೆ ಪ್ರೇರೆಪಿಸಿದರು ದೇಶ ಸೇವೆಗೆ ತಮ್ಮ ಪ್ರಾಣವನ್ನು ಮುಡುಪಾಗಿಟ್ಟಿರುವ ಸೈನಿಕರನ್ನು ಗೌರವದಿಂದ ಕಾಣಿ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಜಿ. ಎರ್ರಿಸ್ವಾಮಿಯವರು ನಿವೃತ್ತ ಸೈನಿಕರಾದ ಮಾನಪ್ಪ ಹ್ಯಾಟಿ, ಕಾಂತರಾವ್ ಕುಲಕರ್ಣಿ, ಹಿಂದೂದರ ಸೊಪ್ಪಿಮಠ, ರಾಜೇಶ ಕಟಗಿಹಳ್ಳಿ, ನಾಗಪ್ಪ ಪರತಗೌಡ ರವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಿಬಂದ್ದಿಯವರಾದ ಜಿ. ಸಿದ್ದು, ಮಾರುತಿ ಎ, ಹನುಮಂತಪ್ಪ ಕಾತರಕಿ, ಮತ್ತು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

Related posts