ಸೇವಾ ವಿದ್ಯಾಲಯದಲ್ಲಿ ಸಂತ ಶಿಶುನಾಳ ಷರೀಪ್ ಜಯಂತಿ ಆಚರಣೆ


ಕಿನ್ನಾಳ : ಭಾವೈಕ್ಯದ ಮೂರ್ತಿ ಸಂತ ಶಿಶುನಾಳ ಷರೀಪ್ ರ ೧೯೯ನೇ ಜಯಂತಿಯನ್ನು ಕಿನ್ನಾಳದ ಸೇವಾ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸಂಗೀತಗಾರ ಲಚ್ಚಣ್ಣ ಹಳೆಪೇಟೆ ಹಾರ?ಮೋನಿಯಂ ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂತ ಶಿಶುನಾಳ ಶರೀಪ್ ರ ಜೀವನ ಕುರಿತು ಮಾತನಾಡಿದ ಅವರು ನಂತರ ಅವರ ಹಾಡುಗಳನ್ನು ಹಾಡುವ ಮೂಲಕ ಮಕ್ಕಳಲ್ಲಿ ಷರೀಪರ ಕುರಿತು ಅರಿವು ಮೂಡಿಸಿದರು. ಸಂತ ಶರೀಪರು ಮೌಡ್ಯ ಕಂದಾಚರಣೆಗಳ ವಿರುದ್ದ ತಮ್ಮ ಗೀತೆಗಳ, ಹಾಡುಗಳ ಮೂಲಕ ಅರಿವು ಮೂಡಿಸಿದರು. ಗುರು ಶಿಷ್ಯರ ಸಂಬಂಧಕ್ಕೆ ಮಾದರಿಯಾಗಿದ್ದರು ಎಂದು ಹೇಳಿದರು. ಕಾರ?ಯಕ್ರಮದಲ್ಲಿ ಶಾಲೆಯ ಮಕ್ಕಳು, ಶಿಕ್ಷಕ, ಶಿಕ್ಷಕಿಯರು ಉಪಸ್ತಿತರಿದ್ದರು. ಜಾಕೀರ ಹುಸೇನ್ ಹಿರೇಮನಿ ಕಾರಯಕ್ರಮ ನಡೆಸಿಕೊಟ್ಟರು.