ಸೂರ್ಯ ಕಂದೀಲು ಹಿಡಿದು ಬರಲಿ ಕವನ ಸಂಕಲನ ಲೋಕಾರ್ಪಣೆ

Koppal ಡಾ.ಸಿ.ಬಿ.ಚಿಲ್ಕರಾಗಿಯವರ ಸೂರ್ಯ ಕಂದೀಲು ಹಿಡಿದು ಬರಲಿ ಕವನ ಸಂಕಲನವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.ಗವಿಶ್ರೀ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಚ್.ಎಸ್.ಪಾಟೀಲ್ ಕವನ ಸಂಕಲನ ಲೋಕಾರ್ಪಣೆ ಮಾಡಿದರು. ಡಾ.ಜಾಜಿ ದೇವೇಂದ್ರಪ್ಪ ಕವನ ಸಂಕಲನ ಕುರಿತು ಮಾತನಾಡಿದರು. ಕವನ ಸಂಕಲನವನ್ನು ಹೊರತರುತ್ತಿರುವುದರ ಬಗ್ಗೆ ಡಾ.ಸಿ.ಬಿ.ಚಿಲ್ಕರಾಗಿ ತಮ್ಮ ಮಾತುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರ, ಎ.ಎಂ.ಮದರಿ, ಅಲ್ಲಾಗಿರಿರಾಜ್, ಮಹಾಂತೇಶ ಮಲ್ಲನಗೌಡರ ,ಎಂ.ಬಿ.ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿ.ಕಾ,ಬಡಿಗೇರ, ಹಾಗೂ ಡಿ.ವಿ.ಬಡಿಗೇರ ನಿಭಾಯಿಸಿದರು. ಕೊಪ್ಪಳದ ಸಾಹಿತಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:
error