ಸೀತಾರಾಮ ಕಲ್ಯಾಣಕ್ಕೆ ಭರ್ಜರಿ ರೆಸ್ಪಾನ್ಸ್

ಕೊಪ್ಪಳ : ಬಹು ನಿರೀಕ್ಷಿತ ಸೀತಾರಾಮ ಕಲ್ಯಾಣ ಚಿತ್ರ ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಕೊಪ್ಪಳ ಜಿಲ್ಲೆಯ ಹಲವಾರು ಚಿತ್ರಮಂದಿರಗಳಲ್ಲಿ ಸಿನೆಮಾ ತೆರೆಕಂಡಿದ್ದು ಮೊದಲ ದಿನ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿ ಜೆಡಿಎಸ್ ಕಾರ್ಯಕರ್ತರು, ಹೆಚ್ಡಿಕೆ ಅಭಿಮಾನಿ ಗಳು,ನಿಖಿಲ್ ಕುಮಾರ ಅಭಿಮಾನಿ ಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಕೊಪ್ಪಳ ಜಿಲ್ಲೆಯಾಧ್ಯಂತ ಸೀತಾರಾಮ ಕಲ್ಯಾಣ ಚಿತ್ರ ಯಶಸ್ವಿಗೆ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದರು.

ಕೊಪ್ಪಳದ ಲಕ್ಷ್ಮಿ‌ ಟಾಕೀಸ್, ಗಂಗಾವತಿಯ ಶಿವೆ ಥೇಟರ್ ನಲ್ಲಿ ನಾಯಕ ನಟ ನಿಖಿಲ್ ಕುಮಾರ್ ಅವರ ಪೊಸ್ಟರ್ ಗೆ ಹಾರ ಹಾಕಿ ಸಂಭ್ರಮಸಿದ ಅಭಿಮಾನಿಗಳು ಸೀತಾರಾಮ ಕಲ್ಯಾಣ ಶತದಿನೋತ್ಸವ ಪೂರೈಸುವಂತೆ ಜೈಕಾರ ಹಾಕಿದರು. ಚಿತ್ರಮಂದಿರ ತುಂಬಿದ್ದರಂದ ಟಿಕೇಟ್ ಸಿಗದೇ ಅಭಿಮಾನಿಗಳು ನಿರಾಸೆಯಿಂದ ವಾಪಸ್ಸಾದ ಘಟನೆಯೂ ನಡೆಯಿತು.