ಸಿ.ಪಿ.ಐ.ಎಂ.ಎಲ್ ಪಕ್ಷದಿಂದ ಮನುಸ್ಮೃತಿಗೆ ಬೆಂಕಿ

– ಸಣ್ಣ ಹನುಮಂತಪ್ಪ ಹುಲಿಹೈದರ್

ಗಂಗಾವತಿ:   ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಕಾರ್ಯಾಲಯದ ಕ್ರಾಂತಿಕೇಂದ್ರದ ಮುಂದೆ ಮನುಸ್ಮೃತಿಯನ್ನು ಸುಡಲಾಯಿತು  ೨೫.೧೨.೧೯೨೭ ರಲ್ಲಿ ಮಾನ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರು ಮನುಸ್ಮೃತಿಯನ್ನು ಸುಟ್ಟು, ಹಿಂದುಳಿದ ಜನ ಮನುಸ್ಮೃತಿಯಿಂದ ಪಡುತ್ತಿರುವ ಕಷ್ಟಗಳನ್ನು, ಶೋಷಣೆಗಳನ್ನು ಜಗತ್ತಿಗೆ ತಿಳಿಸಿದರು.
ಸಿ.ಪಿ.ಐ.ಎಂ.ಎಲ್ ಪಕ್ಷ ಕ್ರಾಂತಿಕಾರಿ ಪಕ್ಷವಾಗಿದ್ದು, ೧೯೯೨ ರವರೆಗೆ ಭೂಗತವಾಗಿದ್ದು, ದಿನಾಂಕ: ೨೫.೧೨.೧೯೯೨ ರಂದು ಬಹಿರಂಗ ಪಕ್ಷವಾಗಿ ಜನರ ಮಧ್ಯೆ ಬಂದಿದೆ. ಅಂದಿನಿಂದಲೂ ಪ್ರತಿವರ್ಷ ಡಿಸೆಂಬರ್ ೨೫ ರಂದು ಮನುಸ್ಮೃತಿಯನ್ನು ಸುಡುತ್ತಾ ಬಂದಿದೆ. ಅದರ ಅಂಗವಾಗಿ ಹಿಂದಿನ ದಿನ ಕ್ರಾಂತಿಕೇಂದ್ರದ ಮುಂದೆ ಮನುಸ್ಮೃತಿಯನ್ನು ಸುಡಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಭಾರಧ್ವಾಜ್ ಮಾತನಾಡಿ, ಬಾಬಾಸಾಹೇಬರ ಹೇಳಿಕೆಯಂತೆ ಸನಾತನಿಗಳು ದೇಶವನ್ನು ನಾಶ ಮಾಡಲು ಮತ್ತು ಮನುಸ್ಮೃತಿಯನ್ನು ಸಂವಿಧಾನವಾಗಿ ಮಾಡಲು ಈಗ ಸಜ್ಜಾಗಿದ್ದಾರೆ. ಬಿಜೆಪಿ ಎರಡನೇ ಹಂತದ ಸರ್ಕಾರದಲ್ಲಿ ಕಳೆದ ೦೯ ತಿಂಗಳುಗಳಿಂದ ಅನೇಕ ಕಾಯ್ದೆ, ಕಾನೂನುಗಳು ಸಂವಿಧಾನವನ್ನು ನಿರ್ವೀರ್‍ಯ ಮಾಡುತ್ತಿದ್ದಾರೆ. ಕಾರ್ಪೋರೇಟ್ ಪರ ನಿಂತ ಸರ್ಕಾರ ಸಂವಿಧಾನವನ್ನು ಬದಲಾಯಿಸಿ ಮನು ಸಂವಿಧಾನವನ್ನು ಜಾರಿಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪಾಮಣ್ಣ ಅರಳಿಗನೂರು, ಸುಬಾನ್ ಎಸ್.ಎಫ್.ಐ, ಕಾ|| ಕವಿತಾ ಎ.ಐ.ಪಿ.ಡಬ್ಲ್ಯೂ.ಎ, ಶೌಕತ್‌ಸಾಬ, ನೂರ ಹುಸೇನ್, ದಾದು ಇನ್ನಿತರರು ಉಪಸ್ಥಿತರಿದ್ದರು.

Please follow and like us:
error