ಸಿ.ಎಂ. ಸಿದ್ದರಾಮಯ್ಯರವರು ಕ್ಷಮೆ ಯಾಚಿಸಬೇಕು -ವಿರೇಶ ಮಹಾಂತಯ್ಯನಮಠ

ಕೊಪ್ಪಳ,೦೧. ಜೆಡಿಎಸ್ ಪಕ್ಷ ಹಾಗೂ ಹೆಚ್.ಡಿ ದೇವೆಗೌಡರ ಸಹಕಾರದಿಂದ ಸಿದ್ದರಾಮಯ್ಯರವರು ಬೆಳೆದಿದ್ದಾರೆ. ಇತ್ತಿಚೀಗೆ ಸಿದ್ದರಾಮಯ್ಯರವರು ನನ್ನನ್ನು ಯಾರು ಬೆಳೆಸಿಲ್ಲ ಎನ್ನುವ ಮುಖ್ಯಮಂತ್ರಿಗಳ ಮಾತು ಖಂಡನೀಯ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಿರೇಶ ಮಹಾಂತಯ್ಯನಮಠ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸಿದ್ದರಾಮಯ್ಯರವರನ್ನು ಸಚಿವರನ್ನಾಗಿ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರು ಎಂಬುವದನ್ನು ಮರೆಯಬಾರದು ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷದಿಂದ ಬೆಳೆದು ಪಕ್ಷವನ್ನು ಬಿಟ್ಟು ಹೊಗಿದ್ದಾರೆ. ಈ ಹಿಂದೆ ೧೯೯೪ ರಲ್ಲಿ ಜನತಾದಳದಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹನುಮಂತಪ್ಪ ಅಂಗಡಿರವರು ಗೆದ್ದಿದ್ದರೆ ಅಂದು ಸಿದ್ದರಾಮಯ್ಯರವರು ಸಚಿವರಾಗುತ್ತಿರಲಿಲ್ಲ ಹಿಂದುಳಿದ ವರ್ಗದ ನಾಯಕ ಹಾಗೂ ವಿದ್ದಾವಂತರೆಂದು ದೇವೇಗೌಡರು ಇವರನ್ನು ಗುರುತಿಸಿ ಸಚಿವರನ್ನಾಗಿ ಹಾಗೂ ಉಪಮುಖ್ಯಮಂತ್ರಿಯನ್ನಾಗಿ ಮಾಡಿರುವದನ್ನು ಮುಖ್ಯಮಂತ್ರಿಗಳು ಮರೆತಿದ್ದು ಆತ್ಮಸಾಕ್ಷಿ ಇದ್ದರೆ, ದೇವೇಗೌಡರನ್ನು ನೆನಪು ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ. ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಲು ಸತೀಶ ಜಾರಕಿಹೊಳೆಯವರು ಕಾರಣ ಅವರ ಬೆನ್ನಿಗೆ ನಿಂತು ಕೆಲಸ ಮಾಡಿದ್ದಾರೆ. ಇಂದು ಅವರ ಕುಟುಂಬವನ್ನು ಒಡೆದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಮುಖ್ಯಮಂತ್ರಿಗಳು ಕೂಡಲೇ ದೇವೇಗೌಡರನ್ನು ಕ್ಷೆಮೆಯಾಚಿಸುವಂತೆ ಆಗ್ರಹಿಸಿದ್ದಾರೆ ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ತಿಳಿಸಿದ್ದಾರೆ.