ಸಿ ಎಂ ರೈತ ವಿರೋಧಿ ಹೇಳಿಕೆ ನಾಚಿಕೆಗೆಡಿತನದ್ದು: ಸಿ ವಿ ಚಂದ್ರಶೇಖರ

Koppal :

ರೈತರ ನ್ಯಾಯುತ ಬೇಡಿಕೆ ಸ್ಪಂದಿಸಬೆಕಾಗಿದ್ದ ಮುಖ್ಯಮಂತ್ರಿಗಳೆ ರೈತರನ್ನು ಗುಂಡಾಗಳು ,ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂಬ ಶಬ್ದ ಬಳಸಿದ್ದು ನಾಚಿಕೆಗೇಡಿತನದ ಸಂಗತಿ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ ವಿ ಚಂದ್ರಶೇಖರ ವಾಗ್ದಾಳಿ ನಡೆಸಿದ್ದಾರೆ

ಕಳೆದ ನಾಲ್ಕೈದು ದಿನಗಳಿಂದ ಬೆಳಗಾವಿ, ಬಾಗಲಕೋಟ, ವಿಜಾಪುರ, ಹಾಸನ, ಮಂಡ್ಯ ಸೆರಿದಂತೆ ಅನೇಕ ಜಿಲ್ಲೆಗಳ ರೈತರು ತಮ್ಮ ಶ್ರಮದ ಹಣ ಬಾಕಿ ಮೊತ್ತವನ್ನು ಪಾವತಿಸಿ, ಈಗಿರುವ ಬೆಲೆ ಅವೈಜ್ಞಾನಿಕ ಮತ್ತು ನಷ್ಟದಾಯಕವಾಗಿದ್ದು ಅದನ್ನು ಪರಿಶೀಲಿಸಿ ನ್ಯಾಯಯುತ ಬೆಲೆ ಸಿಗಬೇಕೆಂಬುದು ರೈತರ ಬೇಡಿಕೆಯಾಗಿದ್ದು, ಕಾರ್ಖಾನೆಗಳ ಮಾಲಿಕರ ಮತ್ತು ರೈತ ಮುಖಂಡರ ಸಭೆಯನ್ನು ಕರೆದು ನ್ಯಾಯ ಸಮ್ಮತ ತಿರ್ಮಾನ ಮಾಡಬೇಕಾದ ಜವಾಬ್ದಾರಿಯುತ ಮುಖ್ಯಮಂತ್ರಿಗಳೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಮರೆತಂತೆ ವರ್ತಿಸುತ್ತಿದ್ದಾರೆ

ರೈತಪರ ಹೋರಾಟದಲ್ಲಿ ಪಾಲ್ಗೊಂಡಿದ್ದ ಮಹಿಳೆಯ ಬಗ್ಗೆ ಯಾವ ರೀತಿ ಪ್ರತಿಕ್ರೀಯಿಸಬೇಕು ಎಂಬ ಸೌಜನ್ಯತೆ ಮುಖ್ಯಮಂತ್ರಿಗಳಿಗೆ ಇಲ್ಲವಾಗಿದೆ. ರಾಜ್ಯದ ಜನತೆಯ ದುರಾದೃಷ್ಟ ಮುಖ್ಯಮಂತ್ರಿಗಳ ಇಂತಹ ವರ್ತನೆಯ ಪ್ರತಿಫಲದಲ್ಲಿ ಸರಕಾರದಲ್ಲಿ ಪಾಲುದಾರ ಪಕ್ಷ ಕಾಂಗ್ರೆಸ್ ಕೂಡಾ ಹೊಂದಬೇಕಾಗುತ್ತದೆ. ಇಂತಹ ಬೇಜವಾಬ್ದಾರಿ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಸುಮ್ಮನಿರುವುದು ರೈತ ವಿರೋಧಿ ತಮ್ಮ ಹೇಡಿತನವನ್ನು ಪ್ರದರ್ಶಿಸಿದಂತಾಗಿದೆ.

ಸರಕಾರದ ಕೈಯಲ್ಲರುವ ಸಕ್ಕರೆ ಖಾತೆಯು ಸಂಪೂರ್ಣ ನಿಷ್ಕ್ರಿಯವಾಗಿದ್ದು ಆ ಖಾತೆಯ ಮಂತ್ರಿಗಳು ಯಾರಿದ್ದಾರೆ ಎಂದು ರಾಜ್ಯದ ರೈತರಿಗೆ ಗೊತ್ತಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಕೂಡಲೆ ಮುಖ್ಯಮಂತ್ರಿಗಳು ರೈತರ ಮತ್ತು ತಮ್ಮ ಹೇಳಿಕೆಯಿಂದ ನೊಂದ ರೈತ ಮಹಿಳೆಯ ಕ್ಷಮೆಯಾಚಿಸಬೇಕು ಮತ್ತು ಕಾರ್ಖಾನೆಗಳ ಮಾಲಿಕರ, ಅಧಿಕಾರಿಗಳ ಹಾಗು ರೈತರ ಸಭೆ ಕರೆದು ಸೂಕ್ತ ನ್ಯಾಯ ಸಮ್ಮತ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Please follow and like us:
error