ಸಿವಿ ಚಂದ್ರಶೇಖರ್ ಗೆ ಬಿಜೆಪಿ ಟಿಕೇಟ್ ಪಕ್ಕಾ

ಸಿವಿಸಿ ಬೆಂಬಲಿಸಿ ಸ್ಪರ್ಧೆಯಿಂದ ಹಿಂದೆ ಸರಿದ ಸಂಸದ

ಕೊಪ್ಪಳ : ಸಂಸದ ಕರಡಿ ಸಂಗಣ್ಣ ಅವರ ಮನೆಯಲ್ಲಿ ಇಂದು ಬಿಜೆಪಿ ಸಭೆ ನಡೆಯಿತು. ಕೊಪ್ಪಳ ವಿಧಾನಸಭೆ ಮತ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಜಿದ್ದಾಜಿದ್ದಿ ಆರಂಭವಾಗಿದ್ದ ಹಿನ್ನೆಲೆಯಲ್ಲಿ ನಡೆದ ಸಭೆ.ಟಿಕೆಟ್ ಗಾಗಿ ಸಂಸದ ಕರಡಿ ಸಂಗಣ್ಣ ಮತ್ತು ಬಿಜೆಪಿ ರಾಷ್ಟ್ರೀಯ ಪರಿಷತ್ತ ಸದಸ್ಯ ಸಿ.ವಿ ಚಂದ್ರಶೇಖರ ನಡುವೆ ಪೈಪೋಟಿ ಇತ್ತು ಇದರಿಂದ ಕೊಪ್ಪಳ ಬಿಜೆಪಿ ಮನೆಯಲ್ಲಿ ಭಿನ್ನಾಭಿಪ್ರಾಯ ಗಳು ಸೃಷ್ಟಿಯಾಗಿದ್ದವು.

ಕಾರ್ಯಕರ್ತರು, ಬೆಂಬಲಿಗರು, ಮುಖಂಡರು ಚದುರಿ ಹೋಗಿದ್ದರು. ಹೈಕಮಾಂಡ ಮಾತಿಗೆ ಬೆಲೆಕೊಟ್ಟು ಸಿ.ವಿ ಚಂದ್ರಶೇಖರ ಅವರಿಗೆ ಬೆಂಬಲಿಸಿದ ಸಂಸದ ಕರಡಿ ಸಂಗಣ್ಣ ನಾನು ಮೊದಲಿನಿಂದಲೂ ಆಕಾಂಕ್ಷಿಯಾಗಿರಲಿಲ್ಲ. ಆದರೆ ಕಾರ್ಯಕರ್ತರು ಮತ್ತು ಕ್ಷೇತ್ರದ ಜನತೆ ಒತ್ತಾಯ ಮಾಡಿದ್ದರು ಎಂದರು.

ಸಾರ್ವಜನಿಕ ಸಭೆಯಲ್ಲಿ ಸಿವಿಸಿ ಅವರಿಗೆ ಬೆಂಬಲ ಘೋಷಿಸಿ ಸಿವಿಸಿ ಅವರು ಬೇರೆಯಲ್ಲ ಸಂಗಣ್ಣ ಬೇರೆಯಲ್ಲ ನಿಮ್ಮ ಆಶೀರ್ವಾದ ಬಿಜೆಪಿ ಮೇಲೆ ಇರಲಿ, ಸಿವಿಸಿ ನನ್ನ ಹಿರಿ ಮಗ ಇದ್ದಂತೆ ರಾಷ್ಟ್ರಮಟ್ಟದಲ್ಲಿ ಅನಿವಾರ್ಯತೆ ಇರುವುದರಿಂದ ಎಂಪಿಗಳಿಗೆ ಟಿಕೇಟ್ ನೀಡಿಲ್ಲ ಎಲ್ಲರೂ ಸೇರಿ ಸಿ.ವಿ.ಚಂದ್ರಶೇಖರಗೆ ಅಥವಾ ಪಕ್ಷ ಯಾರಿಗೆ ಟಿಕೆಟ್ ನೀಡುವುದೊ ಅವರಿಗೆ ಬೆಂಬಲಿಸಿ ಗೆಲ್ಲಿಸೋಣ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಇಂದಿನ ಈ ಬೆಳವಣಿಗೆಗಳಿಂದ ಕೊಪ್ಪಳ ವಿಧಾನಸಭಾ ಮತ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾಗಿ ಸಿ.ವಿ ಚಂದ್ರಶೇಖರ ಫೈನಲ್ ಆದಂತಾಗಿದೆ. ಇಂದು ನಡೆದ ಸಭೆಯಲ್ಲಿ ನೂರಾರು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.