ಸಿವಿಲ್ ನ್ಯಾಯಾಧೀಶರಾಗಿ ಕೊಪ್ಪಳ ವಕೀಲರು ಆಯ್ಕೆ

ಕೊಪ್ಪಳ: 28 ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರುರವರು ಸಿ.ಜೆ.ಆರ್.ಸಿ 1-2017 ದಿನಾಂಕ: 01/02/2017ರಂದು ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿಗಾಗಿ ಧಿಸೂಚನೆ ಹೊರಡಿಸಿದ್ದು ದಿ. 27/10/2017ರಂದು ಸಿವಿಲ್ ನ್ಯಾಯಾಧೀಶರಾಗಿ 93 ಜನ ಅಭ್ಯರ್ಥಿಗಳು ಆಯ್ಕೆಗೊಂಡಿದ್ದು ಇರುತ್ತದೆ. ಕೊಪ್ಪಳ ಜಿಲ್ಲಾ ವಕೀಲರ ಸಂಘದ(ರಿ) ಸದಸ್ಯರಾದ 1) ಕುಮಾರಿ. ಗಾಯತ್ರಿ.ಆರ್.ಕಠಾರೆ, ಇವರು 38ನೇ ರ್ಯಾಂಕ್ ಪಡೆದು, 2) ಶಶಿಕಾಂತ ಕಲಾಲ. ಇವರು 43ನೇ ರ್ಯಾಂಕ್ ಪಡೆದು, 3) ಮಹಮ್ಮದ ಶೈಜ್ ಚೌತಾಯಿ, ಇವರು 75ನೇ ರ್ಯಾಂಕ್ ಪಡೆದು ಮತ್ತು 4) ಸಣ್ಣ ಹನಮಗೌಡ.ಬಿ.ಪೊಲೀಸ ಪಾಟೀಲ(ಗಾಣದಾಳ), ಇವರು 91ನೇ ರ್ಯಾಂಕ್ ಪಡೆದಿದ್ದು 4 ಜನ ವಕೀಲರು ನಮ್ಮ ವಕೀಲರ ಸಂಘದಿಂದ ನೂತನ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುತ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ಸತ್ಯ ಮತ್ತು ಪ್ರಾಮಾಣಿಕವಾಗಿ ಜನಸಾಮಾನ್ಯರಿಗೆ ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಕೀರ್ತಿಯನ್ನು ಹೆಚ್ಚಿಸುವಂತಾಗಲಿ ಎಂದು ನೂತನ ಸಿವಿಲ್ ನ್ಯಾಯಾಧೀಶರಿಗೆ ಸಂಘದ ಅಧ್ಯಕ್ಷರಾದ ದೊಡ್ಡಬಸಪ್ಪ.ಎಸ್.ಕಂಪ್ಲಿ ಹೃದಯ ಪೂರ್ವಕವಾಗಿ ಆರೈಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎಸ್.ಹೆಚ್.ಇಂಗಳದಾಳ, ಕಾರ್ಯದರ್ಶಿಯಾದ ಕೊಟ್ರೇಶ.ಯು.ಪೋಚಗುಂಡಿ, ಮತ್ತು ಪಧಾದಿಕಾರಿಗಳು ಹಾಗೂ ಹಿರಿಯ ವಕೀಲರಾದ ವಿ.ಎಮ್.ಬೂಸನೂರಮಠ, ಜಿಲ್ಲಾ ಸರ್ಕಾರಿ ವಕೀಲರಾದ ಆಸೀಫ್ ಅಲಿ, ಆರ್.ಬಿ.ಪಾನಘಂಟಿ, ಸಿ.ವಿ.ಕಟ್ಟಿ, ಈಶ್ವರ ಇಂಗಳಹಳ್ಳಿ, ಬಿ.ಕೆ.ಬೂತೆ, ಎ.ಎ.ಚೌತಾಯಿ, ಎಸ್.ವೆಂಕಾರೆಡ್ಡಿ, ಎಸ್.ರುದ್ರಯ್ಯ, ಎಸ್,ಎನ್.ಮುತ್ತಗಿ, ಎಸ್.ಎ.ನಿಂಗೋಜಿ, ಡಿ.ಜಿ.ಬಾಗಲಕೋಟ, ಎನ್.ಎಸ್.ಸಿದ್ದಾಂತಿ, ಎಸ್.ಎಮ್.ದೇಸಾಯಿ, ಎಸ್.ಎಸ್.ಸುರಪುರ, ಶ್ರೀಮತಿ ಗೌರಮ್ಮ.ಎಲ್.ದೇಸಾಯಿ, ಶ್ರೀಮತಿ ಕಾಳಮ್ಮ ಪತ್ತಾರ, ಶ್ರೀಮತಿ ನೇತ್ರಾ ಪಾಟೀಲ್, ಆರ್.ಬಿ.ಗಣವಾರಿ, ಜಿ.ಸಿ.ಹಮ್ಮಿಗಿ, ಉಮೇಶ ಮಾಳೆಕೊಪ್ಪ, ಆರ್.ಬಿ.ಅಳವಂಡಿ, ಕೆ.ಎಸ್.ಜಮಾಪುರ, ಡಿ.ಲಂಕೇಶ, ಎಸ್.ಎಮ್.ಮೆಣಸಿನಕಾಯಿ ವಕೀಲರು ಉಪಸ್ಥಿತರಿದ್ದರು.

Please follow and like us:
error