ಸಿಲಿಂಡರ್ ಬ್ಲಾಸ್ಟ್ : ೧೫ ಅಂಗಡಿಗಳು ಭಸ್ಮ

ಕೊಪ್ಪಳ : ಸಿಲಿಂಡರ್ ಬ್ಲಾಸ್ಟಾಗಿ ಭಾರೀ ಅವಘಡ ಸಂಭವಿಸಿ ೧೫ ಅಂಗಡಿ,ಗ್ಯಾರೇಜ್ ಗಳು ಸುಟ್ಟು ಭಸ್ಮವಾದ ಘಟನೆ ಕಾರಟಗಿಯಲ್ಲಿ ನಡೆದಿದೆ.

4 ತಾಸುಗಳ ನಿರಂತರವಾಗಿ ಪ್ರಯತ್ನಿಸಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕೊಪ್ಪಳ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಘಟನೆ ನಡೆದಿದ್ದು ರಾಜ್ಯಹೆದ್ದಾರಿ ಗೆ ಹತ್ತಿಕೊಂಡಿರುವ ಪುಟ್ ಪಾತ್ ವ್ಯಾಪಾರಿಗಳ ಅಂಗಡಿಯಲ್ಲಿ ಸಿಲಿಂಡರ್ ಬ್ಲಾಸ್ಟ್ ಬೆಳಿಗ್ಗೆ 4 ಗಂಟೆ ಸುಮಾರಿಗೆ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ 13 ಹೋಟೆಲ್,ಗ್ಯಾರೇಜ್, ಅಂಗಡಿಗಳು ಸುಟ್ಟುಕರುಕಲು. ಅಪಾರಪ್ರಮಾಣದ ವಸ್ತುಗಳು,ಹಾನಿ.ಸ್ಥಳಕ್ಕೆ ಬೇಟಿ ನೀಡಿದ ಶಾಸಕ ಶಿವರಾಜ್ ತಂಗಡಗಿ. ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ಸೂಕ್ತ ನೆರವು ನೀಡುವ ಭರವಸೆ ನೀಡಿದರು.

ಕಾರಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.