ಸಿದ್ದಾರೂಢ ಮಹಾಸ್ವಾಮಿಗಳ ರಥೋತ್ಸವ

ಕೊಪ್ಪಳ: ತಾಲೂಕಿನ ದದೇಗಲ್ ಗ್ರಾಮದ ಶ್ರೀ ಜಗದ್ಗುರು ಸಿದ್ಧಾರೂಢ ಮಹಾಸ್ವಾಮಿಗಳ ೨೯ ನೇ ಜಾತ್ರೋತ್ಸವ ಡಿಸೆಂಬರ್ ೧ ರಿಂದ ಆರಂಭಗೊಳ್ಳಲಿದೆ. ಶ್ರೀ ಸದ್ಗುರು ಸೋಮಲಿಂಗ ಮಹಾಸ್ವಾಮಿಗಳ ೧೫ನೇ ವರ್ಷದ ಪುಣ್ಯಾರಾಧನೆ, ಮಹಾರಥೋತ್ಸವ ಹಾಗೂ ಸಾಮೂಹಿಕ‌ ವಿವಾಹ ಕಾರ್ಯಗಳು ಜರುಗಲಿವೆ. ಡಿ.೧ರಂದು ಸಂಜೆ ಲಘು ರಥೋತ್ಸವ, ಡಿ.೨ರಂದು ಸಂಜೆ ಮಹಾ ರಥೋತ್ಸವ ಜರುಗಲಿದೆ. ನಗರದ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಹಂಪಿ ಹೇಮಕೂಟ ಶ್ರೀ ಶಿವರಾಮ ಅವಧೂತ ಆಶ್ರಮದ ಶ್ರೀ ಸದ್ಗುರು ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಸುತ್ತಮುತ್ತಲಿನ ಭಕ್ತರು ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ದದೇಗಲ್ ಗ್ರಾಮದ ಶ್ರೀ ಸಿದ್ಧಾರೂಢಮಠದ ಸಿದ್ಧಾರೂಢ ಸೇವಾ ಸಮಿತಿ ಅಧ್ಯಕ್ಷರಾದ ಆತ್ಮಾನಂದ ಭಾರತಿ ಮಹಾಸ್ವಾಮಿಗಳು ್ಕೋರಿದ್ದಾರೆ.

Please follow and like us:
error