ಸಿದ್ದರಾಮಯ್ಯ, ಕುಮಾರಸ್ವಾಮಿಗೆ ದಿನಾಲೂ  ಮುಖ್ಯಮಂತ್ರಿ ಖುರ್ಚಿಯ ಕನಸೇ ಬೀಳುತ್ತೆ- ಕೆ.ಎಸ್.ಈಶ್ವರಪ್ಪ

Gangavati – ಜೆಡಿಎಸ್ ಕಾರ್ಯಕರ್ತರನ್ನು ಕೆಣಕಿದ್ರೆ ಸುಮ್ಮನಿರಲ್ಲ ಎಂಬ ಎಚ್.ಡಿ.ದೇವೇಗೌಡರ ಹೇಳಿಕೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ  ನಾವ್ಯಾಕ್ರಿ ಜೆಡಿಎಸ್ ಕಾರ್ಯಕರ್ತರನ್ನು ಮುಟ್ಟೊಕೋಗೋಣ ಎಲ್ಲಿದ್ದಾರೆ ಜೆಡಿಎಸ್ ಕಾರ್ಯಕರ್ತರು ಅಂತಾ ಹುಡುಕಿ ತೋರಿಸಲಿ  ಆ ನಂತರ ಮುಟ್ಟೋದು ಬಿಡೋದು ನಾನೂ ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆ ಅಂತಾ ಬೂತಗನ್ನಡಿ ಹಾಕಿಕೊಂಡು ಹುಡುಕುತ್ತಿದ್ದೇನೆ ಎಲ್ಲಾದ್ರೂ ಮುಟ್ಟೋದಕ್ಕೆ ಅವಕಾಶ ಇದೆಯ ತಾವು ಸೋತ್ರು, ಮೊಮ್ಮಗ‌ ಸೋತಿದ್ದಾನೆ, ಎಲ್ಲಿದೆ ರಾಜ್ಯದಲ್ಲಿ ಜೆಡಿಎಸ್ ? ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆ ಅಂತಾ ಮುಟ್ಟಬೇಕು ಇವರು ಪ್ರಚಾರ ತಗೊಳೊಕ್ಕೆ ಬಿಜೆಪಿ ಕಾರ್ಯಕರ್ತರು ಹೊಡೆದ್ರು ಅಂತಾರೆ ಬಿಜೆಪಿ ಹೊಡೆಯುವ ಪಕ್ಷ ಅಲ್ಲ, ಅಪ್ಪಿಕೊಳ್ಳುವ ಪಕ್ಷ ಎಂದು ಹೇಳಿದರು

ಗಂಗಾವತಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ್ಯವಾಗಿ ಸರ್ಕಾರ‌ ಮಾಡುತ್ತೆ ಎಂಬ ಎಚ್ ಡಿಕೆ ಹೇಳಿಕೆ‌ ವಿಚಾರ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ದಿನಾಲೂ ಕನಸು ಬೀಳುತ್ತೆ  ಮುಖ್ಯಮಂತ್ರಿ ಖುರ್ಚಿಯ ಕನಸೇ ಬೀಳುತ್ತೆ ಬೇರೆ ಕನಸೇ ಬೀಳಲ್ಲ ಅವರಿಗೆ ಸಿಎಂ ಖುರ್ಚಿ ಅವರ ಭ್ರಮೆ ಎಂದ ಈಶ್ವರಪ್ಪ ಬೇರೆ ಕೆಲಸ ಇಲ್ಲ ಅವರಿಗೆ ಅದಕ್ಕೆ  ಬಾಯಿಗೆ ಬಂದಂತೆ ಮಾತಾಡ್ತಾರೆ  ಶಾಸಕ‌ ಬಸವರಾಜ ಯತ್ನಾಳ, ಹೋರಾಟಗಾರ ದೊರೆಸ್ವಾಮಿ‌ ಕುರಿತ ಹೇಳಿಕೆ ವಿಚಾರದಲ್ಲಿ  ಯತ್ನಾಳ್ ಹೇಳಿಕೆಯನ್ನು ಈಶ್ವರಪ್ಪ ಸಮರ್ಥಿಸಿಕೊಂಡರು. ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಗಾರರು ಎಂಬುದರಲ್ಲಿ ಎರಡು ಮಾತಿಲ್ಲ ಆದ್ರೆ ಇತ್ತೀಚೆಗೆ ದೊರೆಸ್ವಾಮಿ ನೇರವಾಗಿ ಕಾಂಗ್ರೆಸ್ ಗೆ ಬೆಂಬಲಿಸ್ತಿದ್ದಾರೆ ದೊರೆಸ್ವಾಮಿ ಅವರಲ್ಲಿ ಪ್ರಾರ್ಥನೆ ಮಾಡ್ತೀನಿ ಒಂದು ಪಕ್ಷದ ಪರ ಮುಖವಾಡ ಹಾಕಬೇಡಿ . ಮಾಜಿ ಸ್ಪೀಕರ್ ರಮೇಶ ಕುಮಾರ್  ನಾನೇ ಅಂಬೇಡ್ಕರ್ ಅನ್ನೋ ರೀತಿ‌ ಮಾಡ್ತಾರೆ ರಮೇಶ ಕುಮಾರ್ ಸಂವಿಧಾನ ತಾವೇ ಬರೆದಿರೋ ಹಾಗೆ  ಆಡ್ತಾರೆ ರಮೇಶ ಅಧಿವೇಶನ ನಡೆಯೋಕೆ ಬಿಡಲ್ಲ ಅನ್ನೋರಿಗೆ ಏನು ಮಾಡ್ತಾರೆ?  ಪ್ರಧಾನಿ ಮೋದಿ ಕೊಲೆಗಡುಕ ಎಂದಿದ್ದ ಸಿದ್ದರಾಮಯ್ಯರನ್ನು ಯಾಕೆ ಉಚ್ಚಾಟನೆ ಮಾಡಲಿಲ್ಲ? ರೈತರ ಸಾಲ ಮನ್ನಾದಲ್ಲಿ ಬಿಜೆಪಿ ತಾರತಮ್ಯ ಎನ್ನುವ ಎಚ್ ಡಿಕೆ ಹೇಳಿಕೆ ವಿಚಾರ ರೈತ ನಾಯಕ ಅಂತಾ ಎಚ್ ಡಿಕೆ ಪೋಸ್  ಕೊಡ್ತಾ ಇದ್ದಾರೆ ಚುನಾವಣೆಯಲ್ಲಿ ನಿಮ್ಮಪ್ಪ, ಮಗನನ್ನು ಉಳಿಸಿಕೊಳ್ಳೋಕೆ ಆಗಲಿಲ್ಲ ರೈತರ ಪರ ಮಾತನಾಡೋಕೆ ನಿಮಗೇನು ನೈತಿಕ‌ ಹಕ್ಕಿದೆ? ಮುಂದೆ ಬಜೆಟ್ ನೋಡಿ ಬಿಜೆಪಿ ಏನು ಮಾಡುತ್ತೆ ಅಂತಾ ಗೊತ್ತಾಗುತ್ತೆ ಎಂದು ಈಶ್ವರಪ್ಪ ಹೇಳಿದರು.

Please follow and like us:
error