ಸಿದ್ದರಾಮಯ್ಯ ಅಹಂಕಾರಿ ಮುಖ್ಯಮಂತ್ರಿ- ಮೋದಿ

ಕೊಪ್ಪಳ : ೭೦ ವರ್ಷಗಳ ಕಾಲ ಆಡಳಿತ ಮಾಡಿದ ಪಕ್ಷ ಕೇವಲ ಕುಟುಂಬ ರಾಜಕಾರಣ ಮಾಡಿದೆ

ಅವರಿಗೆ ತಮ್ಮ ಕುಟುಂಬ ಅಭಿವೃದ್ಧಿ ಗಾಗಿ ರಾಜಕೀಯ ಮಾಡಿದ್ದಾರೆ ದೇಶದ ಅಭಿವೃದ್ಧಿ ಗಾಗಿ ಅಲ್ಲ.ಅಧಿಕಾರಕ್ಕಾಗಿ ಯಾವುದೇ ಮಟ್ಟಕ್ಕೂ ಇಳಿಯುವ ಪಕ್ಷ ಅದು. ಸ್ವಾರ್ಥಕ್ಕಾಗಿ ಮನೆತನಗಳನ್ನು ಜಾತಿಗಳನ್ನಯ ಜನರನ್ನು ಒಡೆಯುವ ಪಕ್ಷ ಅದು

ಕಾಂಗ್ರೆಸ್ ಪಕ್ಷ ತನ್ನ ವಿಕೃತ ಮನಸ್ಸಿನಿಂದ ಈ ದೇಶವನ್ನು ಜಾತಿ‌ ಮೂಲಕ ಒಡೆಯುತ್ತಿದೆ. ಯಡಿಯೂರಪ್ಪ ನವರ ಸರ್ಕಾರ ಇದ್ದಾಗ ಈ ರಾಜ್ಯದ ಸಂಸ್ಕೃತಿ ಉಳಿದಿತ್ತು ಕಾಂಗ್ರಸ್ ಸರ್ಕಾರ ಬಂದ್ಮೇಲೆ ಸಂಸ್ಕ್ರತಿ ಉಳಿದಿಲ್ಲ‌ ಪ್ರವಾಸಕ್ಕೂ ಹೊಗಲು ಜಾತಿ ಮಾಡುತ್ತಿದೆ

ಈ ಭಾಗದಲ್ಲಿ ಐತಿಹಾಸಿಕ, ಸಂಸ್ಕೃತಿ ಸ್ಥಳಗಳಿವೆ ಅದರ ಅಭಿವೃದ್ಧಿ ಮಾಡುವ ಕೆಲಸ ಮಾಡಿಲ್ಲ

೫೦ ಸಾವಿರ ಕೋಟಿ ಯಾತ್ರ ಸ್ಥಳ ಅಭಿವೃದ್ಧಿ ಯೋಜನೆಯಿಂದ ವಿವಿಧ ಯಾತ್ರ ಸ್ಥಳಗ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ

ಕೊಪ್ಪಳದ ಈ‌ಭಾಗದ ಜನತೆಗೆ ರಾಮಾಯಣ ಸ್ಥಳ ಏನಿದೆ ಅದರಿಂದ ಪ್ರಯೋಜನ ವಾಗಲಿದೆ

ಆನೆಗೊಂದಿ, ಹಂಪಿಗೆ ಪ್ರಯೋಜನವಾಗಲಿದೆ

ಹನುಮಾನ ಮತ್ತು ಶ್ರೀರಾಮರ ಪವಿತ್ರ ಸ್ಥಳಗಳಿವು

ಅಂಜಿನಾದ್ರ ಬೆಟ್ಟ ಇಡೀ ವಿಶ್ವಕ್ಕೆ ಖ್ಯಾತಿಯಾಗಿದೆ

ಇದನ್ನು ವಿಶ್ವಮಟ್ಟದ ಯಾತ್ರ ಸ್ಥಳ ಮಾಡುವುದೇ ನನ್ನ ಕನಸು

ಹವಾಯಿ ಚಪ್ಪಲ ಹಾಕುವವನು ಹವಾಯಿ ಜಹಾಜ್ ನಲ್ಲಿ ಕೂಡವಂತೆ ಮಾಡುತ್ತೇನೆ

ಯಡಿಯೂರಪ್ಪ ನವರ ಪ್ರಣಾಳಿಕೆಯಲ್ಲಿ ಯಾತ್ರ ಸ್ಥಳಗಳಿಗೆ ಹೆಚ್ಚಿನ ಅನುದಾನ ಕೊಡಲಾಗುವುದು.

ಗರ್ಭದಲ್ಲಿ ಹೆಣ್ಣು ಮಳನ್ನು ಸಾಯಿಸಲಾಗುತ್ತಿತ್ತು

೧೦೦೦ ಗಂಡು ಮಕ್ಕಳಿಗೆ ೮೫೦೦ ಹೆಣ್ಣು ಮಕ್ಕಳಿದ್ದರು

ಹೆಣ್ಣು ಗಂಡು ಸಮಾನತೆಗಾಗಿ ನಮ್ಮ ಸರ್ಕಾರ ಕಾನೂನುಗಳನ್ನು ಜಾರಿಗೆ ತರಲಾಗಿದೆ

ವಿಕೃತ ಮನಸ್ಸುಗಳು ನಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿವೆ

ಅಂಥ ಮನಸ್ಸುಗಳಿಗೆ ಗಲ್ಲಿಗೆ ಏರಿಸುವ ಕಾನೂನು ಜಾರಿಗೆ ತರಲಾಗಿದೆ.

ಅತ್ಯಂತ ಹೆಚ್ಚು ಭತ್ತ ಬೆಳೆಯುವ ನಾಡು ಇದು

ಇಲ್ಲನ ಭತ್ತ ಇಡೀ ವಿಶ್ವಕ್ಕೆ ಖ್ಯಾತಿ ಪಡೆದಿದೆ

ಆದ್ರೆ ಇಲ್ಲಿನ ರೈತ ನೀರಿಗಾಗಿ ತತ್ತರಿಸುತ್ತಿದ್ದಾನೆ

ತನ್ನ ಬೆಳೆಗೆ ನೀರು ಇಲ್ಲದೆ ಬೆಳೆ ನಷ್ಟ ಅನುಭಿವಿಸಿದ್ದಾನೆ. ಪಕ್ಕದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಅನ್ನದಾತನಿಗೆ ನೀರಿಲ್ಲ .ಇಲ್ಲಿನ‌ ನೀರಾವರಿ ಅಭಿವೃದ್ಧಿ ಯೋಜನೆಗಳು ರೈತನಿಗೆ ಲಾಭಾಗಿಲ್ಲ

ಸಿದ್ದರಾಮಯ್ಯ ಸರ್ಕಾರ ಏನು ಭರವಸೆ ನೀಡಿತ್ತು ಅದು ಈಡೇರಿಸಿಲ್ಲ. ನೀರಾವರಿಗಾಗಿ ೧೦ ಸಾವಿರ ಕೋಟಿ ಕೊಡುವ ಭರವಸೆ ನೀಡಿತ್ತು ಅದು ಪೂರ್ಣಗೊಳಿಸಿಲ್ಲ

ಇಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಕೂಡ ಬಹಳ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರಿ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದರು. ವೇದಿಕೆಯ ಮೇಲೆ ಸಂಸದ ಕರಡಿ ಸಂಗಣ್ಣ, ಅಭ್ಯರ್ಥಿಗಳಾದ ದೊಡ್ಡನಗೌಡ ಪಾಟೀಲ್ , ಹಾಲಪ್ಪ ಆಚಾರ್ , ಬಸವರಾಜ್ ದಡೆಸೂಗೂರು, ಪರಣ್ಣ ಮುನವಳ್ಳಿ, ಅಮರೇಶ ಕರಡಿ ಉಪಸ್ಥಿತರಿದ್ದರು.

Please follow and like us:
error