ಸಿದ್ದಗಂಗಾಶ್ರೀಗಳು ಲಿಂಗೈಕ್ಯ :  ಕೊಪ್ಪಳ ಜಾತ್ರಾ ಕಾರ್ಯಕ್ರಮದಲ್ಲಿ ಯಾವುದೆ ಬದಲಾವಣೆ ಇಲ್ಲ

ಕೊಪ್ಪಳ : ಪರಮಪೂಜ್ಯ ನಡೆದಾಡುವ ದೇವರು ಸಿದ್ದಗಂಗಾಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕೊಪ್ಪಳ ಜಾತ್ರೆಯ ಕುರಿತು ಭಕ್ತ ಸಮೂಹದಲ್ಲಿ ಅನುಮಾನಗಳು ಸೃಷ್ಟಿಯಾಗಿದ್ದವು . ಅದನ್ನು ನಿವಾರಿಸುವಂತೆ ಗವಿಸಿದ್ದೇಶ‍್ವರ ಸ್ವಾಮಿಗಳು ಹೇಳಿಕೆಯನ್ನು ನೀಡಿದ್ದು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ, ಕಾರ್ಯಕ್ರಮಗಳು ಯಥಾಪ್ರಕಾರ ನಡೆಯಲಿವೆ. ಯಾವುದೇ ಬದಲಾವಣೆಗಳು ಇರುವುದಿಲ್ಲ. ಇದು ಸಹ ಗವಿಸಿದ್ದೇಶ್ವರರ ನಿರ್ವಿಕಲ್ಪಗೊಂಡ ದಿನ. ಜಾತ್ರಾ ಕಾರ್ಯಕ್ರಮದಲ್ಲಿ ಸಿದ್ದಗಂಗಾಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಗುವುದು ಎಂದು ಹೇಳಿದ್ಧಾರೆ. ಮರಣವೇ ಮಹಾನವಮಿ ಶರಣರ ಬದುಕನ್ನು ಮರಣದಲ್ಲಿ ಕಾಣು ಎನ್ನಲಾಗುತ್ತೆ ಹೀಗಾಗಿ ಜಾತ್ರೆಯ ಕಾರ್ಯಕ್ರಮಗಳು ಯಥಾ ಪ್ರಕಾರ ನಡೆಯಲಿವೆ ಎಂದು ಹೇಳಿದ್ಧಾರೆ.

Please follow and like us:
error