ಸಿಗ್ನಲ್ ಜಂಪ್ ಮಾಡಿದ ಯುವಕರಿಗೆ ಪೋಲಿಸರ ಥಳಿತ ವಿಡಿಯೋ.

ಸಿಗ್ನಲ್ ಜಂಪ್ ಮಾಡಿದರು ಎಂದುಇಬ್ಬರು ಯುವಕರನ್ನು ಠಾಣೆಗೆ ಕರೆದುಕೊಂಡುಬಂದು ತರಬೇತಿ ಹಂತ ಪಿಎಸ್‍ಐವೊಬ್ಬಥಳಿಸಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಕೊಪ್ಪಳ ನಗರ ಠಾಣೆಯಲ್ಲಿ ನಿನ್ನೆ ಸಂಜೆ ವೇಳೆಗೆ ಈ ಘಟನೆನಡೆದಿದ್ದು ಪ್ರೊಬೇಷನರಿ ಪಿಎಸ್‍ಐ ಇಬ್ಬರುಯುವಕರನ್ನು ಬೆಲ್ಟ್‍ನಿಂದ ಹೊಡೆಯುತ್ತಿರುವ ದೃಶ್ಯಮೊಬೈಲ್‍ನಲ್ಲಿ ಸೆರೆಯಾಗಿದೆ.

ತಾಲೂಕಿನಬಸಾಪುರ ಗ್ರಾಮವದರು ಎಂದುಹೇಳಲಾಗುತ್ತಿರುವ ಇಬ್ಬರು ಯುವಕರು ನಿನ್ನೆನಗರದ ಗಂಜ್‍ಸರ್ಕಲ್‍ನಲ್ಲಿ ಸಿಗ್ನಲ್ ಜಂಪ್ಮಾಡಿದರು. ಆಗ ಅಲ್ಲಿ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ ಪ್ರೊಬೇಷನರಿ ಪಿಎಸ್‍ಐ

ವಿರುಪಾಕ್ಷಪ್ಪ ಇಬ್ಬರು ಯುವಕರನ್ನು ನಗರ ಠಾಣೆಗೆಕರೆತಂದಿದ್ದಾರೆ. ಬಳಿಕ ನಗರ ಠಾಣೆಯಲ್ಲಿ ಕೆಲಅಧಿಕಾರಿ ಹಾಗೂ ಸಿಬ್ಬಂದಿಯ ಮುಂದೆಯೇ ದರ್ಪತೋರಿದ್ದಾರೆ. ಬೆಲ್ಟ್‍ನಿಂದ ಕೈಗಳಿಗೆ ಹೊಡೆದಿದ್ದಾರೆ. ಇನ್ನು ಥಳಿಸಿಕೊಂಡಿರುವ ಯುವಕರು ಸುಮ್ಮನೆಹೋಗಿದ್ದಾರೆ. ಯುವಕರನ್ನು ಥಳಿಸಿರುವವಿರುಪಾಕ್ಷಪ್ಪ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿಪಿಎಸ್‍ಐ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಘಟನೆ ಕುರಿತಂತೆ ಕೊಪ್ಪಳ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಶೆಟ್ಟಿಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪ್ರೊಬೇಷನರಿ ಪಿಎಸ್‍ಐನ ಈ ದರ್ಪ ಸಾರ್ವಜನಿಕವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

Please follow and like us:
error