ಸಿಎಂ ಯಡಿಯೂರಪ್ಪ ಹೊಸ ಪಕ್ಷನಾದರೂ ಕಟ್ಟಲಿ ,ಕಾಂಗ್ರೆಸ್ಗಾದರೂ ಬರಲಿ – ತಂಗಡಗಿ 

ಕೊಪ್ಪಳ  : ಯಡಿಯೂರಪ್ಪ ತಂತಿ ಮೇಲೆ ನಡೆಯೊ‌ ಬದಲು ಬಿಜೆಪಿಯಿಂದ ಹೊರ ಬನ್ನಿ, ಹೊಸ ಪಕ್ಷನಾದ್ರೂ ಕಟ್ಟಿ, ಕಾಂಗ್ರೆಸ್‌ಗೆ ಬನ್ನಿ ಎಂದು ಮಾಜಿ ಸಚಿವ, ಡಿಸಿಸಿ ಅದ್ಯಕ್ಷ  ಶಿವರಾಜ ತಂಗಡಗಿ ಹೇಳಿದರು . ಕೊಪ್ಪಳದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಯಲ್ಲಾಲಿಂಗ, ಕಕ್ಕರಗೋಳ ಯುವಕನ ಕೊಲೆ ಪ್ರಕರಣವನ್ನೂ ಸಿಬಿಐಗೆ ವಹಿಸಲಿ ಗಂಗಾವತಿ ಖೋಟಾನೋಟು ಪ್ರಕರಣವೂ ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು. 
ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2 ರಂದು 4 ಕಿಮೀ ಜಾಥಾ ಹಮ್ಮಿಕೊಳ್ಳಲಾಗಿದೆ. ಗಾಂದಿಜಿಯವರು ಬಿಜೆಪಿ ಕೈಯಲ್ಲಿ  ಸ್ವಚ್ಛ ಭಾರತಕ್ಕಷ್ಟೇ  ಸೀಮಿತವಾಗಿದ್ದಾರೆ..ಕೇಂದ್ರದಿಂದ ಯಾವುದೇ ಕೆಲಸ ಆಗ್ತಿಲ್ಲ
ಯಡಿಯೂರಪ್ಪ ಪರಿಸ್ಥಿತಿ ನೋಡಿ ಅಯ್ಯೋ ಅನಸ್ತಿದೆ. ಯಡಿಯೂರಪ್ಪ ಅವರಿಗೆ ಇಷ್ಟು ಬೇಗ, ಅವರ ಪಕ್ಷದವರಿಂದಲೇ ಇಂಥ ಪರಿಸ್ಥಿತಿ ಬಂದಿರುವುದು ಕೆಟ್ಟ ಅನಿಸುತ್ತೆ. ಅವರೊಬ್ಬ ಹಿರಿಯ ನಾಯಕರು. ಕೇಂದ್ರ ಸರಕಾರದವರು ಯಡಿಯೂರಪ್ಪ ಅವರನ್ನ ಟಾರ್ಗೆಟ್ ಮಾಡಿ ನೆರೆ ಸಂತ್ರಸ್ತರ ಪರಿಸ್ಥಿತಿ ಬಿಗಡಾಯಿಸಿದೆ. ಮೋದಿ-ಅಮಿತ್ ಷಾ ಜಗಳದಲ್ಲಿ ನೆರೆ ಸಂತ್ರಸ್ತರು ಬಡವಾದ ಕೂಸಿನ ಸ್ಥಿತಿ ಅನುಭವಿಸ್ತಾ ಇದಾರೆ ಕೇಂದ್ರದವರು ನೆರೆ ಸಂತ್ರಸ್ತರಿಗೆ ಭಿಕ್ಷುಕರಿಗೆ ಕೊಟ್ಟಂತೆ ಹತ್ತು ಸಾವಿರ ಕೊಡ್ತಿದಾರೆ. ಇದನ್ನ ಬಿಜೆಪಿ ಮುಖಂಡ ಈಶ್ವರಪ್ಪ ಹತ್ತು ಸಾವಿರ ರೂಪಾಯಿನೇ ಜಾಸ್ತಿಯಾಯಿತು ಅಂತಾರೆ.  ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಸೈಡ್‌ಲೈನ್ ಆಗೋ ಪ್ರಶ್ನೆನೇ ಇಲ್ಲ. ಅವರೊಬ್ಬ ಡೈನಾಮಿಕ್ ಲೀಡರ್ ಅವರನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.

ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಲ್ಲ ಅಂದವರು ಕಾಂಗ್ರೆಸ್ ಶಾಸಕರ ಕ್ಷೇತ್ರದ ಅನುದಾನ ಕಡಿತ ಮಾಡ್ತಾ ಇದಾರೆ ಅನರ್ಹರ ಪರಿಸ್ಥಿತಿ ಅಧೋಗತಿ ಆಗುತ್ತೆ ಅಂತ ಆವತ್ತೇ ಹೇಳಿದ್ದೆ. ಅನರ್ಹ ಎಂಬ ದರಿದ್ರರಿಂದಲೇ ಬಿಜೆಪಿ ಅಧಿಕಾರ ಅನುಭವಿಸ್ತಾ ಇದಾರೆ. ಆದರೆ ಅವರು ನನ್ನ ಗೆಳೆಯರು ಸವದಿ ಅವರ ಸಂಸ್ಕಾರ, ಸಂಸ್ಕೃತಿ ಎಂಥದ್ದು ಎಂಬುದು ಅವರ ಮಾತುಗಳಿಂದಲೇ ಆಗುತ್ತೆ. ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಆನಂದ್ ಸಿಂಗ್‌ಗೆ ಹಿನ್ನಡೆ ಆಗುತ್ತೆ. ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಅವರ ಮಕ್ಕಳು ಎಲ್ಲರೂ ವರ್ಗಾವಣೆ ದಂದೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿ.ಪಂ. ಅದ್ಜಿಯಕ್ಷ ವಿಶ್ವನಾಥ ರೆಡ್ಡಿ, .ಪಂ. ಸದಸ್ಯ ರಾಜಶೇಖರ ಹಿಟ್ನಾಳ, ಸುರೇಶ ಭೂಮರಡ್ಡಿ, ಶ್ರೀನಿವಾಸ ರಡ್ಡಿ, ಪ್ರಸನ್ನ ಗಡಾದ  ಮುತ್ರ್ತು ರಾಜ ಕುುುುುುಷ್ಟಗಿಷ್ಟಗಷ್ಟಷ್ಷ ಟ ಕುರಗೋಡ ಕಾಟನ್ಸೇ ಪಾಷಾ ಸೆರಿದಂತೆ ಇತರರು  ಉಪಸ್ಥಿತರಿದ್ದರು.ಬ

Please follow and like us:
error

Related posts